ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಸಾರ್ವಜನಿಕರಿಗೆ ಸ್ಪುಟ್ನಿಕ್ ವಿ ಲಸಿಕೆ ಆರಂಭ

|
Google Oneindia Kannada News

ನವದೆಹಲಿ, ಜೂನ್ 28: ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದುಕೊಂಡಿರುವ "ಸ್ಪುಟ್ನಿಕ್ ವಿ" ಲಸಿಕೆಯನ್ನು ಗುರುಗ್ರಾಮದ ಫೋರ್ಟಿಸ್ ಸಂಶೋಧನಾ ಕೇಂದ್ರದಲ್ಲಿ ಸಾರ್ವಜನಿಕರಿಗೆ ನೀಡಲು ಆರಂಭಿಸಲಾಗಿದೆ.

ರಷ್ಯಾ ಮೂಲದ ಈ ಲಸಿಕೆಯನ್ನು ಇಲ್ಲಿನ ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ವಿತರಣೆ ಮಾಡುತ್ತಿದ್ದು, ಇಂದಿನಿಂದ ದೆಹಲಿಯಲ್ಲಿ ಇದನ್ನು ಸಾರ್ವಜನಿಕರಿಗೆ ನೀಡಲು ಆರಂಭಿಸಲಾಗಿದೆ. ಶೀಘ್ರವೇ ಇತರೆ ನಗರಗಳಲ್ಲಿಯೂ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ.

Gurugram Fortis Research Institute Starts Sputnik V Vaccine For General Public

ಏಪ್ರಿಲ್‌ನಲ್ಲಿ ಭಾರತದಲ್ಲಿ ಸ್ಪುಟ್ನಿಕ್ ಲಸಿಕೆಗೆ ಅನುಮೋದನೆ ದೊರೆತಿತ್ತು. ಈ ಮೂಲಕ ದೇಶದಲ್ಲಿ ಅನುಮೋದನೆ ಪಡೆದುಕೊಂಡ ಮೂರನೇ ಲಸಿಕೆ ಇದಾಗಿತ್ತು. ಸರ್ಕಾರ ಸ್ಪುಟ್ನಿಕ್ ಲಸಿಕೆಯ ಎರಡು ಡೋಸ್‌ಗೆ 1145 ಗರಿಷ್ಠ ಬೆಲೆ ನಿಗದಿಗೊಳಿಸಿದ್ದು, ಇದರಲ್ಲಿ ಆಸ್ಪತ್ರೆ ಶುಲ್ಕವೂ ಸೇರಿದೆ.

"ಸ್ಫುಟ್ನಿಕ್ ವಿ" ಲಸಿಕೆ ಅತಿ ಹೆಚ್ಚು ಸುರಕ್ಷಿತ ಎಂದ ಅಧ್ಯಯನ

ಡೆಲ್ಟಾ ರೂಪಾಂತರಕ್ಕೆ ಸ್ಪುಟ್ನಿಕ್ ಲಸಿಕೆ ಬೇರೆಲ್ಲಾ ಲಸಿಕೆಗಳಿಗಿಂತ ಪರಿಣಾಮಕಾರಿಯಾಗಿದೆ ಎಂದು ಗಮಾಲೆಯಾ ಇನ್‌ಸ್ಟಿಟ್ಯೂಟ್ ಅಧ್ಯಯನ ತಿಳಿಸಿತ್ತು. ಕೊರೊನಾ ಸೋಂಕಿನ ವಿರುದ್ಧ ರಷ್ಯಾ ಮೂಲದ ಸ್ಫುಟ್ನಿಕ್ ವಿ ಲಸಿಕೆಯ ದಕ್ಷತೆ ಹಾಗೂ ಲಸಿಕೆ ನೀಡಿದ ನಂತರದ ಪರಿಣಾಮಗಳ ಕುರಿತು ಅರ್ಜೆಂಟಿನಾದ ಬ್ಯೂನೊಸ್ ಏರ್ಸ್ ಆರೋಗ್ಯ ಸಚಿವಾಲಯ ಅಧ್ಯಯನ ನಡೆಸಿದ್ದು, ಈ ಲಸಿಕೆ ಇತರೆ ಎಲ್ಲಾ ಲಸಿಕೆಗಳಿಗಿಂತಲೂ ಸುರಕ್ಷಿತ ಎಂದು ವರದಿ ನೀಡಿತ್ತು.

Recommended Video

ಮಕ್ಕಳಿಗೆ Vaccination ಎಷ್ಟು ಮುಖ್ಯ ಗೊತ್ತಾ | Oneindia Kannada

28 ನಗರಗಳಿಗೆ ಈ ಲಸಿಕೆ ಶೀಘ್ರವಾಗಿಯೇ ಲಭ್ಯವಾಗುವುದು ಎಂದು ಡಾ. ರೆಡ್ಡೀಸ್ ಲ್ಯಾಬೊರೇಟರಿ ತಿಳಿಸಿದೆ.

English summary
Delhi's Gurugram Fortis Memorial Research Institute starts Sputnik V trial run for general public
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X