ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಚಾರ್ಯ ದೇವೋಭವ: ಗುರುವಿಗೆ ನಮನ ಸಲ್ಲಿಸಿದ ಗಣ್ಯರು

|
Google Oneindia Kannada News

ಆಚಾರ್ಯ ದೇವೋಭವ ಎಂಬ ಸಂಸ್ಕೃತಿ ಭಾರತದ್ದು. ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲಿ ಒಬ್ಬ ಗುರುವಿನ ಮಹತ್ವವನ್ನು ತಿಳಿಸುವ ಸಲುವಾಗಿಯೇ ಪ್ರತಿವರ್ಷ ಆಷಾಢ ಶುದ್ಧ ಹುಣ್ಣಿಮೆಯ ದಿನವನ್ನು ಗುರುಪೂರ್ಣಿಮಾ ಎಂದು ಆಚರಿಸಲಾಗುತ್ತದೆ. ಕೆಲವೆಡೆ ಇದನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ.

ಗುರುಶಿಷ್ಯ ಪರಂಪರೆಗೆ ನಾಂದಿ ಹಾಡಿದ ವ್ಯಾಸ ಮಹರ್ಷಿಗಳ ಜನ್ಮದಿನವೂ ಇಂದೇ ಆಗಿರುವುದರಿಂದ ಈ ದಿನ ವ್ಯಾಸರನ್ನು ಶ್ರದ್ಧೆ, ಭಕ್ತಿಯಿಂದ ಪೂಜಿಸಲಾಗುತ್ತದೆ. ವ್ಯಾಸರು ಆಷಾಢ ಶುದ್ಧ ಪಾಡ್ಯದಿಂದ ಬ್ರಹ್ಮಸೂತ್ರವನ್ನು ಬರೆಯಲು ಆರಂಭಿಸಿ, ಪೂರ್ಣಿಮೆಯಂದು ಮುಗಿಸಿದರು ಎನ್ನಲಾಗುತ್ತದೆ.

ಗುರು ಪೂರ್ಣಿಮಾ: ಶ್ರದ್ಧಾ ಭಕ್ತಿಯಿಂದ ಗುರುವಿಗೆ ನಮಿಸಿದ ಭಾರತಗುರು ಪೂರ್ಣಿಮಾ: ಶ್ರದ್ಧಾ ಭಕ್ತಿಯಿಂದ ಗುರುವಿಗೆ ನಮಿಸಿದ ಭಾರತ

ಕೆಲವು ದಾಖಲೆಗಳ ಪ್ರಕಾರ ಬುದ್ಧ ಸಹ ಜ್ಞಾನೋದಯವಾದ ನಂತರ ತನ್ನ ಮೊದಲ ಉಪದೇಶವನ್ನು ಇದೇ ದಿನ ನೀಡಿದ ಎನ್ನಲಾಗುತ್ತದೆ. ಆದ್ದರಿಂದ ಈ ದಿನವನ್ನು ಭಾರತದಾದ್ಯಂತ ಹಿಂದುಗಳು ಶ್ರದ್ಧೆ, ಭಕ್ತಿಯಿಂದ ಆಚರಿಸಿ, ತಮ್ಮ ತಮ್ಮ ಗುರುವಿಗೆ ನಮನ ಸಲ್ಲಿಸುತ್ತಾರೆ.

ಈ ದಿನ ಹಲವು ಗಣ್ಯರು ಟ್ವಿಟ್ಟರ್ ಮೂಲಕ ತಮ್ಮ ಗುರುಗಳಿಗೆ ನಮನ ಸಲ್ಲಿಸಿ, ವ್ಯಕ್ತಿಯ ಬದುಕಿನಲ್ಲಿ ಗುರುವಿನ ಪಾತ್ರದ ಮಹತ್ವವನ್ನು ವಿವರಿಸಿದ್ದಾರೆ.

ಗುರುವಿಗೆ ಕೃತಜ್ಞತೆ ಸಲ್ಲಿಸೋಣ

ಗುರುಪೂರ್ಣಿಮೆಯ ಶುಭ ದಿನದಂದು ನನ್ನೆಲ್ಲ ದೇಶಬಾಂಧವರಿಗೂ ಶುಭ ಹಾರೈಕೆಗಳು. ನಮ್ಮೆಲ್ಲ ಗುರುಗಳನ್ನು ನೆನಪಿಸಿಕೊಂಡು, ಅವರಿಗೆ ಕೃತಜ್ಞತೆ ಸಲ್ಲಿಸಲು ಇದು ಸೂಕ್ತ ದಿನ ಎಂದಿದ್ದಾರೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು.

ನಾವು ಗುರುವಿನ ಋಣದಲ್ಲಿದ್ದೇವೆ

ಗುರುಪೂರ್ಣಿಮೆಯ ಶುಭಾಶಯಗಳು. ನಮ್ಮೊಳಗೆ ಮೌಲ್ಯಗಳನ್ನು ತುಂಬಿ, ನಮಗೆ ಮಾರ್ಗದರ್ಶನ, ಸ್ಫೂರ್ತಿ ನೀಡಿದ ಗುರುಗಳಿಗಾಗಿ ಈ ದಿನ ಅರ್ಪಣೆ. ಅವರ ಋಣವನ್ನು ನಾವೆಂದಿಗೂ ತೀರಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್.

ಭಾರತದಲ್ಲಿ ಮಾತ್ರ ಈ ವಿಶಿಷ್ಟ ಆಚರಣೆ

ಭಾರತದಲ್ಲಿ ಮಾತಗ್ರವೇ ಇಂಥ ವಿಶಿಷ್ಟ ಆಚರಣೆ ಕಾಣುವುದಕ್ಕೆ ಸಾಧ್ಯ. ಗುರುವೇ ಬ್ರಹ್ಮಾಂಡದ ಶಕ್ತಿ ಎಂಬುದನ್ನು ಅರಿತವರು ಭಾರತೀಯರು ಎಂದಿದ್ದಾರೆ ಡಾ.ಡೇವಿಡ್ ಫ್ರಾಲಿ.

ಗುರುವಿನ ದಯೆ ನಮ್ಮ ಮೇಲಿರಲಿ

ವಿದ್ಯಾರ್ಥಿಗಳ ಬದುಕಲ್ಲಿ ಇದೊಂದು ಅಮೂಲ್ಯ ದಿನ. ಈ ಗುರು ಪೂರ್ಣಿಮೆಯಂದು ನಿಮಗೆ ಗುರುವಿನ ಆಶೀರ್ವಾದ ಲಭಿಸಲಿ. ಈ ಭೂಮಿಯ ಎಲ್ಲ ಗುರುಗಳಿಗೂ ನಮನಗಳು ಎಂದಿದ್ದಾರೆ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್.

English summary
Guru Purnima (Poornima) is an Indian spiritual tradition dedicated to spiritual and academic teachers. This is celebrated on fullmoon day of Ashada masa(this year July 27). Here are twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X