ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ರಕರ್ತನ ಹತ್ಯೆ ಪ್ರಕರಣ: ಬಾಬಾ ರಾಮ್ ರಹೀಮ್ ದೋಷಿ

|
Google Oneindia Kannada News

ಸಿರ್ಸಾ, ಜನವರಿ 11: ಪತ್ರಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ನನ್ನು ಪಂಚಕುಳ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ.

ಶಿಕ್ಷೆಯ ಪ್ರಮಾಣವನ್ನು ಜ.17 ರಂದು ಪ್ರಕಟಿಸಲಿದ್ದು, ರಾಮ್ ರಹೀಮ್ ಒಟ್ಟಿಗೆ ಮೂವರನ್ನೂ ದೋಷಿ ಎಂದು ಪರಿಗಣಿಸಿದೆ.

ಜೈಲಿನಲ್ಲೂ ರಾಮ್ ರಹೀಮ್ ಐಷಾರಾಮಿ ಬದುಕು ನಡೆಸುತ್ತಿದ್ದಾನಾ!?ಜೈಲಿನಲ್ಲೂ ರಾಮ್ ರಹೀಮ್ ಐಷಾರಾಮಿ ಬದುಕು ನಡೆಸುತ್ತಿದ್ದಾನಾ!?

ಪತ್ರಕರ್ತ ರಾಮಚಂದ್ರ ಛತ್ರಪತಿ ಎಂಬುವವರನ್ನು ಪಿತೂರಿ ಮಾಡಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಮ್ ರಹೀಮ್ ಈಗಾಗಲೇ ಇಪ್ಪತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

Gurmeet Ram Rahim convicted in journalist murder case

ತೀರ್ಪಿನ ನಿಮಿತ್ತ ಇಂದು ಹರ್ಯಾಣದ ಸಿರ್ಸಾ ಮತ್ತು ಪಂಚಕುಳದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿತ್ತು. 51 ವರ್ಷ ವಯಸ್ಸಿನ ರಾಮ್ ರಹೀಮ್ ಸದ್ಯಕ್ಕೆ ರೋಹ್ಟಕ್ ನ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇಬ್ಬರು ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ರಾಮ್ ರಹೀಮ್ ವಿರುದ್ಧ ಪತ್ರಕರ್ತನ ಹತ್ಯೆ ಪ್ರಕರಣ: ಇಂದು ತೀರ್ಪುರಾಮ್ ರಹೀಮ್ ವಿರುದ್ಧ ಪತ್ರಕರ್ತನ ಹತ್ಯೆ ಪ್ರಕರಣ: ಇಂದು ತೀರ್ಪು

ಡೇರಾ ಸಚ್ಛಾ ಸೌಧ ಆಶ್ರಮಗಳಲ್ಲಿ ಪುರುಷತ್ವ ಹರಣ ಮಾಡಲಾಗುತ್ತಿದೆ ಎಂಬ ಆರೋಪ ಹೊರೆಸಿ ಹಾಕಲಾಗಿದ್ದ ಪ್ರಕರಣ(castration case) ದಲ್ಲಿಇತ್ತೀಚೆಗೆ ರಾಮ್ ರಹೀಮ್ ಗೆ ಜಾಮೀನು ಸಿಕ್ಕಿತ್ತು.

English summary
A special CBI court in Panchkula in Haryana will pronounce its verdict in a case of murder of a journalist allegedly involving Dera Sacha Sauda chief Gurmeet Ram Rahim Singh on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X