ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮದಡಿ ನಾಪತ್ತೆಯಾಗಿದ್ದ ಇಬ್ಬರು ಸೈನಿಕರ ಮೃತದೇಹ ಪತ್ತೆ

|
Google Oneindia Kannada News

ಬಂಡಿಪೊರ, ಡಿಸೆಂಬರ್ 19: ಜಮ್ಮು ಕಾಶ್ಮೀರದ ಬಂಡಿಪೊರದಲ್ಲಿ ಡಿ.10 ರಂದು ನಡೆದ ಹಿಮಪಾತದಲ್ಲಿ ನಾಪತ್ತೆಯಾಗಿದ್ದ ಮೂವರಲ್ಲಿ ಇಬ್ಬರು ಸೈನಿಕರ ದೇಹ ನಿನ್ನೆ(ಡಿ.18) ಪತ್ತೆಯಾಗಿದೆ.

ಕಾಶ್ಮೀರದಲ್ಲಿ ಹಿಮಪಾತ: ಮೂರು ಸೈನಿಕರು ನಾಪತ್ತೆಕಾಶ್ಮೀರದಲ್ಲಿ ಹಿಮಪಾತ: ಮೂರು ಸೈನಿಕರು ನಾಪತ್ತೆ

ಅವರು ಹಿಡಿದಿದ್ದ ಆಯುಧದೊಂದಿಗೇ ಅವರ ಮೃತದೇಹವನ್ನು ಪತ್ತೆ ಮಾಡಲಾಗಿದ್ದು, ಇನ್ನೊಬ್ಬ ಸೈನಿಕನ ದೇಹದ ಪತ್ತೆಕಾರ್ಯ ನಡೆಯುತ್ತಿದೆ.

Gurez avalanche: Bodies of two missing soldiers recovered

ಮೃತ ಸೈನಿಕರನ್ನು ಗುರೆಜ್ ನ 36 ರಾಷ್ಟ್ರೀಯ ರೈಫಲ್ ಗೆ ಸೇರಿದ ಶಿವ್ ಸಿಂಗ್ ಮತ್ತು ಪ್ರಾಮಾಣಿಕ್ ಎಂದು ಗುರುತಿಸಲಾಗಿದ್ದು, ಅವರ ಕುಟುಂಬದ ಹಿನ್ನೆಲೆಯ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಇದೇ ವರ್ಷ ಜನವರಿಯಲ್ಲಿ ಸಂಭವಿಸಿದ್ಧ ಭೀಕರ ಹಿಮಪಾತಕ್ಕೆ 15 ಯೋಧರು ಹುತಾತ್ಮರಾಗಿದ್ದರು. 2016 ರ ಫೆಬ್ರವರಿಯಲ್ಲಿ ಸಿಯಾಚಿನ್ ನಲ್ಲಿ ಸಂಭವಿಸಿದ ಹಿಮಪಾತದಲ್ಲಿ 30 ಅಡಿ ಆಳದ ಹಿಮದಡಿಯಲ್ಲಿ, -45 ಡಿಗ್ರಿ ಕೊರೆವ ಚಳಿಯಲ್ಲಿ ಆರು ದಿನಗಳ ಕಾಲ ಬದುಕಿದ್ದು, ನಂತರ ಬಹು ಅಂಗಾಂಗ ವೈಫಲ್ಯದಿಂದ ಫೆಬ್ರವರಿ 11 ರಂದು ದೆಹಲಿಯ ಆಸ್ಪತ್ರೆಯಲ್ಲಿ ಹುತಾತ್ಮರಾದ ಹುಬ್ಬಳ್ಳಿಯ ಲಾನ್ಸ್ ನಾಯಕ್ ಹನುಮಂತಪ್ಪ ಅವರನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು

English summary
The bodies of two soldiers, who went missing after an avalanche hit Gurez region of Bandipora on December 10, were recovered on Dec 18th along with their weapons. A search operation is underway to find another soldier who went missing during the same period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X