ಪುಲ್ವಾಮಾ ಎನ್ ಕೌಂಟರ್: ಇಬ್ಬರು ಉಗ್ರರ ಹತ್ಯೆ, ಸಂಘರ್ಷ ಜಾರಿ

Posted By:
Subscribe to Oneindia Kannada

ಶ್ರೀನಗರ, ಮಾರ್ಚ್ 9: ಲಕನೌದಲ್ಲಿ ಉಗ್ರ ಸೈಫುಲ್ಲಾ ಜತೆಗಿನ 12 ಗಂಟೆಗಳ ಕಾದಾಟ ಮುಕ್ತಾಯವಾದ ಬೆನ್ನಿಗೇ, ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಡ್ಗಂಪೊರಾ ಎಂಬ ಪ್ರಾಂತ್ಯದಲ್ಲಿನ ಮನೆಯೊಂದರಲ್ಲಿ ಅಡಗಿ ಕುಳಿತಿರುವ ಉಗ್ರರ ಜತೆ ಭದ್ರತಾ ಪಡೆಗಳ ಕಾದಾಟ ಶುರುವಾಗಿದೆ.

ಲಷ್ಕರ್ ತೊಯ್ಬಾ ಸಂಘಟನೆಗೆ ಸೇರಿದ ಉಗ್ರರು ಈ ಮನೆಯಲ್ಲಿ ಅಡಗಿದ್ದಾರೆಂದು ಹೇಳಲಾಗಿದ್ದು, ಈವರೆಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆಂದು ತಿಳಿದುಬಂದಿದೆ. ಮನೆಯಲ್ಲಿ ಇನ್ನುಳಿದ ಉಗ್ರರ ಜತೆಗೆ ಭದ್ರತಾ ಪಡೆಗಳ ಗುಂಡಿನ ಕಾಳಗ ಮುಂದುವರಿದಿದೆ.

Gun battle In Kashmir's Pulwama, 3-4 Terrorists Reportedly Hiding In House

ಉಗ್ರರು ಮನೆಯೊಂದರಲ್ಲಿ ಅಡಗಿರುವ ಖಚಿತ ಸುಳಿವಿನ ಮೇರೆಗೆ ಭದ್ರತಾ ಪಡೆಗಳು ಗುರುವಾರ ನಸುಕಿನಲ್ಲೇ ಮನೆಯನ್ನು ಸುತ್ತುವರಿದಿದ್ದವು. ಭದ್ರತಾ ಪಡೆಗಳು ಆಗಮಿಸಿದ್ದನ್ನು ಅರಿತ ಉಗ್ರರು ಗುಂಡಿನ ದಾಳಿ ಶುರು ಮಾಡಿದ್ದರು. ಇದಕ್ಕೆ ಭದ್ರತಾ ಪಡೆಗಳು ಪ್ರತಿದಾಳಿ ಆರಂಭಿಸಿರುವುದರಿಂದ ಗುಂಡಿನ ಚಕಮಕಿ ಆರಂಭವಾಯಿತು ಎನ್ನಲಾಗಿದೆ.

ಮನೆಯಲ್ಲಿ ಸುಮಾರು ಮೂರರಿಂದ ನಾಲ್ವರು ಉಗ್ರರು ಅಡಗಿರು ಶಂಕೆಯಿದೆ ಎಂದು ಭದ್ರತಾ ಮೂಲಗಳು ಬೆಳಗ್ಗೆಯೇ ತಿಳಿಸಿದ್ದವು.

ಈ ಪ್ರಾಂತ್ಯದಲ್ಲಿ ಕಳೆದ ಐದು ದಿನಗಳಲ್ಲಿ ಹೀಗೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿರುವುದು ಇದು 2ನೇ ಬಾರಿ. ಭಾನುವಾರವಷ್ಟೇ ಇದೇ ಪ್ರಾಂತ್ಯದ ಮತ್ತೊಂದು ಮನೆಯಲ್ಲಿ ಅಡಗಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿತ್ತು. ಆದರೆ, ಆ ಹೋರಾಟದಲ್ಲಿ ಜಮ್ಮು ಕಾಶ್ಮೀರ ಪೊಲೀಸ್ ಪಡೆಯ ಪೇದೆಯೊಬ್ಬರು ಹುತಾತ್ಮರಾಗಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Security forces are fighting a group of terrorists hiding in a house in Padgampora in Jammu and Kashmir's Pulwama district, officials said today.
Please Wait while comments are loading...