ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಲ್ಬರ್ಗ್ ಹತ್ಯಾಕಂಡ ಪ್ರಕರಣ: 36 ಮಂದಿ ದೋಷಮುಕ್ತ, 11 ಮಂದಿಗೆ ಜೀವಾವಧಿ

By Mahesh
|
Google Oneindia Kannada News

ಅಹಮದಾಬಾದ್, ಜೂನ್ 14: ಗೋಧ್ರಾ ಹಿಂಸಾಚಾರದ ಬಳಿಕ ಸಂಭವಿಸಿದ 2002ರ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಕರಣದ ಅಂತಿಮ ತೀರ್ಪು ಶುಕ್ರವಾರ (ಜೂನ್ 17) ಪ್ರಕಟಗೊಂಡಿದೆ. ಅಹಮದಾಬಾದ್ ವಿಶೇಷ ನ್ಯಾಯಾಲಯವು ಪ್ರಕಟಿಸಿದ ತೀರ್ಪಿನಂತೆ ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ 66 ಮಂದಿ ಆರೋಪಿಗಳ ಪೈಕಿ ಅಪರಾಧಿಗಳಾದ 24 ಮಂದಿಯ ಪೈಕಿ 11 ಜನರಿಗೆ ಸಾಯುವ ತನಕ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ.

ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾ.ಪಿಬಿ ದೇಸಾಯಿ ಅವರು, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಬಿಜೆಪಿ ಕಾರ್ಪೋರೇಟರ್ ಬಿಪಿನ್ ಪಟೇಲ್, ವಿಎಎಚ್ ಪಿ ನಾಯಕ ಅತುಲ್ ವೈದ್ಯ ಸೇರಿ 36 ಮಂದಿಯನ್ನು ಖುಲಾಸೆಗೊಳಿಸಿ ಜೂನ್ 02 ರಂದು ಆದೇಶ ಹೊರಡಿಸಲಾಗಿತ್ತು.

Gulberg massacre case: 11 get life term

ಶಿಕ್ಷೆ ಪ್ರಮಾಣ ಪ್ರಕಟ: 24 ಮಂದಿ ಅಪರಾಧಿಗಳ ಪೈಕಿ 11 ಜನರಿಗೆ ಸಾಯುವ ತನಕ ಜೀವಾವಧಿ ಶಿಕ್ಷೆ, 12 ಮಂದಿಗೆ 7 ವರ್ಷಗಳ ಸಜೆ, ಒಬ್ಬ ವ್ಯಕ್ತಿಗೆ 10 ವರ್ಷಗಳ ಶಿಕ್ಷೆ ನೀಡಲಾಗಿದೆ.

ಮಾಜಿ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಅವರ ಪ್ರತಿಕ್ರಿಯೆ ಟ್ವೀಟ್ ನಲ್ಲಿ ಓದಿ

ಪ್ರಕರಣದ ಹಿನ್ನಲೆ: ಗೋದ್ರಾ ಹತ್ಯಾಕಾಂಡದ ಪ್ರತೀಕಾರವಾಗಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ನಡೆದಿದ್ದು, 2002 ಫೆ.28ರಂದು ನಡೆದ ಹತ್ಯಾಕಾಂಡದಲ್ಲಿ 10 ಅಪಾರ್ಟ್ಮೆಂಟ್, 29 ಬಂಗಲೆಗಳ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು, ಕಾಂಗ್ರೆಸ್ ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು 69 ಮಂದಿಯನ್ನು ಹತ್ಯೆ ಮಾಡಿದ್ದರು.

ಗುಲ್ಬರ್ಗ್ ಹತ್ಯಾಕಂಡ ಪ್ರಕರಣ:24 ಮಂದಿಗೆ ಶಿಕ್ಷೆ ಪ್ರಕಟ

ಈ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ(ಎಸ್‍ಐಟಿ) ನಡೆಸಿತ್ತು. ಎಸ್‍ಐಟಿ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ಹೆಸರಿಸಿದ್ದ ಆರೋಪಿಗಳ ಪೈಕಿ 9 ಮಂದಿ 14 ವರ್ಷಗಳಿಂದ ಜೈಲಿನಲ್ಲಿದ್ದರು. ಉಳಿದವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಹಿಂಸಾಚಾರದಲ್ಲಿ ಅಂದಿನ ಗುಜರಾತ್ ಸಿಎಂ ನರೇಂದ್ರ ಮೋದಿ ಭಾಗಿಯಾಗಿದ್ದಾರೆ ಎಂಬುದನ್ನು ದೃಢಪಡಿಸುವ ನಿಟ್ಟಿನಲ್ಲಿ ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ಅಂದಿನ ಎಸ್ ಐಟಿ ಮುಖ್ಯಸ್ಥ ರಾಘವನ್ ಅವರು ಮೋದಿ ಅವರಿಗೆ ಕ್ಲೀನ್ ಚಿಟ್ ನೀಡಿದ್ದರು.

English summary
The special court hearing the Gulbarg massacre case has awarded life terms to 11 persons.the court awarded seven years imprisonment to 12 while one more person was sentenced to 10 years of imprisonment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X