ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುತ್ತುವರಿದ ಸಿಂಹಗಳ ಆರ್ಭಟದ ಮಧ್ಯೆಯೇ ಮಗು ಹೆತ್ತ ತಾಯಿ!

ಗಿರ್ ಅರಣ್ಯ ಪ್ರಾಂತ್ಯದಲ್ಲಿ 12 ಸಿಂಹಗಳು ಸುತ್ತುವರಿದ ಆ್ಯಂಬುಲೆನ್ಸ್ ನಲ್ಲಿ ಹೆರಿಗೆ. ಮಗುವಿಗೆ ಜನ್ಮ ನೀಡಿದ ಗುಜರಾತ್ ನ ಮಹಿಳೆ.

|
Google Oneindia Kannada News

ಅಹ್ಮದಾಬಾದ್, ಜುಲೈ 1: ಅಮ್ರೇಲಿ ಜಿಲ್ಲೆಯ ಹಳ್ಳಿಯೊಂದರಿಂದ ಜೂನ್ 29ರ ಮಧ್ಯರಾತ್ರಿ 2:30ರ ಸುಮಾರಿಗೆ ತುಂಬು ಗರ್ಭಿಣಿಯನ್ನು ಹೆರಿಗೆಗಾಗಿ ಕರೆಯೊಯ್ಯುತ್ತಿದ್ದ ಆ್ಯಂಬುಲೆನ್ಸ್ ಅನ್ನು ಗಿರ್ ಅರಣ್ಯ ಮಾರ್ಗದಲ್ಲಿ ಅಡ್ಡಗಟ್ಟಿ ಸಿಂಹಗಳು ಸುತ್ತುವರಿದಿದ್ದ ಘಟನೆ ಜೂನ್ 29ರ ರಾತ್ರಿ ನಡೆದಿದ್ದು, ಆ ಸಂದರ್ಭದಲ್ಲೇ ಆ್ಯಂಬುಲೆನ್ಸ್ ಒಳಗಿದ್ದ ತಾಯಿಯು ಮಗುವಿಗೆ ಜನ್ಮ ನೀಡಿದ್ದಾಳೆ.

ಸುಮಾರು ನಿಮಿಷಗಳ ಕಾಲ ಸಿಂಹಗಳು ಆ್ಯಂಬುಲೆನ್ಸ್ ಬಳಿಗೆ ಬಾರದಂತೆ ಪರಿಸ್ಥಿತಿಯನ್ನು ಹಲವಾರು ತಂತ್ರಗಾರಿಕೆಗಳನ್ನು ಅನುಸರಿಸುತ್ತಾ ಪರಿಸ್ಥಿತಿಯನ್ನು ನಿಭಾಯಿಸಿದ್ದ ಡ್ರೈವರ್ ರಾಜು ಜಾಧವ್ ನ ಸಮಯ ಪ್ರಜ್ಞೆ ಬಗ್ಗೆ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದುಬಂದಿವೆ.

ಲುನಾಸಾಪುರದ ಹಳ್ಳಿಯೊಂದರಿಂದ ರಾತ್ರಿ 2:30ರ ಸುಮಾರಿಗೆ ಮಂಗುಬೆನ್ ಮಕ್ವಾನಾ ಎಂಬ ಗರ್ಭಿಣಿಯನ್ನು 108 ಆ್ಯಂಬುಲೆನ್ಸ್ ಹೆರಿಗೆಗಾಗಿ ಹತ್ತಿರದ ಜಫರ್ ಗಢ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆ್ಯಂಬುಲೆನ್ಸ್ ನಲ್ಲಿ ಗರ್ಭಿಣಿಯ ಒಬ್ಬ ಸಂಬಂಧಿ, ಪ್ಯಾರಾ ಮೆಡಿಕಲ್ ಒಬ್ಬ ಸಿಬ್ಬಂದಿ ಇದ್ದರು. ಮುಂದಿನ ಕ್ಯಾಬಿನ್ ನಲ್ಲಿ ಡ್ರೈವರ್ ಇದ್ದರು. ಮುಂದೇನಾಯ್ತು ಓದಿ ನೋಡಿ...

ದಟ್ಟಡವಿಯ ಪೊದೆಗಳಿಂದ ಬಂದರು ಕಾಡಿನ ರಾಜರು

ದಟ್ಟಡವಿಯ ಪೊದೆಗಳಿಂದ ಬಂದರು ಕಾಡಿನ ರಾಜರು

ಲುನಾಸಾಪುರದ ಹಳ್ಳಿಯೊಂದರಿಂದ ಹೊರಟ 20 ನಿಮಿಷಗಳ ನಂತರ, ಮಾರ್ಗ ಮಧ್ಯೆಯೇ ಹೆರಿಗೆ ಆಗುವ ಸಂದರ್ಭ ಒದಗಿಬಂದಿದ್ದರಿಂದ, ಪ್ಯಾರಾ ಮೆಡಿಕಲ್ ಸಿಬ್ಬಂದಿಯು ಆ್ಯಂಬುಲೆನ್ಸ್ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಅದರಂತೆ ವಾಹನ ನಿಂತಿದೆ.
ಆದರೆ, ಮನುಷ್ಯರ ವಾಸನೆಯನ್ನು ಹಿಡಿದ ಸುತ್ತಲಿನ ದಟ್ಟಡವಿಯ ಪೊದೆಗಳಿಂದ ಸುಮಾರು 12 ಸಿಂಹಗಳು ಆ್ಯಂಬುಲೆನ್ಸ್ ಬಳಿಗೆ ಧಾವಿಸಿದೆ. ಇದು ಆ್ಯಂಬುಲೆನ್ಸ್ ಒಳಗಿದ್ದವರ ಎದೆ ಝಲ್ಲೆನಿಸಿದೆ.

ಸವಾಲಿನ ಸಂದರ್ಭ

ಸವಾಲಿನ ಸಂದರ್ಭ

ಅಷ್ಟರಲ್ಲಿ ಪ್ಯಾರಾ ಮೆಡಿಕಲ್ ಸಿಬ್ಬಂದಿ ಅಶೋಕ್ ಮಕ್ವಾನಾ, ಪ್ರಸೂತಿ ತಜ್ಞರೊಬ್ಬರಿಗೆ ಫೋನಾಯಿಸಿ, ಸಲಹೆ ಕೋರಿದ್ದಾರೆ. ಅವರ ಸಲಹೆಯಂತೆ ಹೆರಿಗೆ ಮುಂದಾಗಿದ್ದಾರೆ.

ಹಲವಾರು ತಂತ್ರಗಾರಿಕೆಗಳ ಪ್ರಯೋಗ

ಹಲವಾರು ತಂತ್ರಗಾರಿಕೆಗಳ ಪ್ರಯೋಗ

ಆದರೆ, ಇತ್ತ ಡ್ರೈವರ್ ಕ್ಯಾಬಿನ್ ನಲ್ಲಿ ಕೂತಿದ್ದ ಚಾಲಕ ರಾಜು ಜಾಧವ್, ಸ್ಥಳೀಯನೇ ಆಗಿದ್ದರಿಂದ ಸಿಂಹಗಳ ನಡೆಗಳನ್ನು ಬಲ್ಲವನಾಗಿದ್ದ. ಹಾಗಾಗಿ, ಹೆಡ್ ಲೈಟ್ ಆಫ್ ಮಾಡಿ, ಗಾಡಿಯನ್ನು ಆಫ್ ಮಾಡಿ, ಅವುಗಳು ರೇಗದಂತೆ ಮಾಡಿದ. ಅವು ಹತ್ತಿರ ಬರುವಂತೆ ಮಾಡಿದಾಗ ಕೆಲವಾರು ಇನ್ನಿಷನ್ ಆನ್ ಮಾಡುವುದು, ಆಫ್ ಮಾಡುವುದು ಸೇರಿದಂತೆ ಇತ್ಯಾದಿ ತಂತ್ರಗಾರಿಕೆಯನ್ನು ಪ್ರಯೋಗಿಸಿ ಸಿಂಹಗಳು ಆ್ಯಂಬುಲೆನ್ಸ್ ಮೇಲೆ ದಾಳಿ ಮಾಡದಂತೆ ನೋಡಿಕೊಂಡ.

ಡ್ರೈವರ್ ಸಮಯಪ್ರಜ್ಞೆ

ಡ್ರೈವರ್ ಸಮಯಪ್ರಜ್ಞೆ

ಹೆರಿಗೆ ಸಂಪೂರ್ಣವಾಗಿ ಮುಗಿದು, ಮಕ್ವಾನಾ ಗಂಡು ಮಗುವಿಗೆ ಜನ್ಮವಿತ್ತಳು. ತಾಯಿ, ಮಗು ಸೌಖ್ಯವಾಗಿದ್ದಾರೆಂದು ಪ್ಯಾರಾ ಮೆಡಿಕಲ್ ಸಿಬ್ಬಂದಿ ತಿಳಿಸಿದ ನಂತರವೇ ಆತ ಹೆಡ್ ಲೈಟ್ ಅನ್ನು ಆಫ್ ಹಾಗೂ ಆನ್ ಮಾಡುತ್ತಾ ನಿಧಾನವಾಗಿ ಆ್ಯಂಬುಲೆನ್ಸ್ ಮುಂದಕ್ಕೆ ಚಲಾಯಿಸಿದ. ಹೆಡ್ ಲೈಟ್ ಬೆಳಕು ಆನ್, ಆಫ್ ಆಗುತ್ತಿದ್ದುದನೇ ನೋಡುತ್ತಾ ಕೊಂಚ ದಿಗಿಲುಗೊಂಡ ಸಿಂಹಗಳು, ನಿಧಾನವಾಗಿ ರಸ್ತೆಯಿಂದ ಆಚೆ ಸರಿದು ಆ್ಯಂಬುಲೆನ್ಸ್ ಗೆ ದಾರಿ ಬಿಟ್ಟುಕೊಟ್ಟಿವೆ.

ಜಿಲ್ಲಾಸ್ಪತ್ರೆಯಲ್ಲಿ ಶುಶ್ರೂಷೆ

ಜಿಲ್ಲಾಸ್ಪತ್ರೆಯಲ್ಲಿ ಶುಶ್ರೂಷೆ

ಇದೀಗ, ತಾಯಿ- ಮಗು ತಾಲೂಕು ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿದ್ದಾರೆ. ಸಿಂಹಗಳಿಂದ ಬಚಾವಾಗಲು ಡ್ರೈವರ್ ತೋರಿದ ಸಮಯ ಪ್ರಜ್ಞೆಗೆ, ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಆ ಯುವತಿಯ ಕುಟುಂಬ ಹಾಗೂ ಜನತೆ ಧನ್ಯವಾದ ಅರ್ಪಿಸಿದ್ದಾರೆ.

English summary
Manguben Makwana a resident of Lunasapur village of Gujarat, gave birth to child when 12 lions surrounded the ambulance which was moving towards hospital in Gir Forest area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X