ಚುನಾವಣೆಗೂ ಮುನ್ನ ಗುಜರಾತ್ ಮುಸ್ಲಿಮರಿಗೆ ಇವಿಎಂ 'ದೆವ್ವ'ದ ಭಯ

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಅಹಮದಾಬಾದ್, ಡಿಸೆಂಬರ್ 13: ಗುಜರಾತ್ ವಿಧಾನಸಭೆಗೆ ಗುರುವಾರ ಎರಡನೇ ಹಂತದ ಮತದಾನ ನಡೆಯಲಿದೆ. ಇದಕ್ಕೂ ಮೊದಲು ಹಲವು ಮುಸ್ಲಿಂ ಸಮುದಾಯದ ಜನರು ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಗಳನ್ನು ತಮ್ಮ ಪಾಲಿನ 'ದೆವ್ವ' ಎಂದು ಬಣ್ಣಿಸಿದ್ದಾರೆ.

ಸದ್ಯ ಇಲ್ಲಿನ ಮುಸ್ಲಿಂ ಸಮುದಾಯದವರಲ್ಲಿ ಇದೇ ವಿಚಾರ ಪ್ರಮುಖವಾಗಿ ಚರ್ಚೆಯಾಗುತ್ತಿದೆ. ಹೀಗಿದ್ದೂ ಗುರುವಾರ ನಡೆಯಲಿರುವ ಚುನಾವಣೆಯಲ್ಲಿ ತಾವು ಮತ ಚಲಾಯಿಸಲಿದ್ದೇವೆ ಎಂದು ಇವರು ಹೇಳಿಕೊಂಡಿದ್ದಾರೆ.

ಗುಜರಾತ್ ಚುನಾವಣಾ ಪ್ರಚಾರಕ್ಕೆ ತೆರೆ, ಡಿ.14ರಂದು ಮತದಾನ

ಗಡಿ ಭಾಗದಲ್ಲಿರುವ ಛೋಟಾ ಉದಯಪುರ ಮೊದಲಾದ ಜಿಲ್ಲೆಗಳಲ್ಲಿ ಇವಿಎಂ ತಿರುಚುವ ಭಯ ಹೆಚ್ಚಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡುತ್ತಿವೆ. ತಮ್ಮ ಅಮೂಲ್ಯ ಮತಗಳು ಬೇರೊಬ್ಬ ಅಭ್ಯರ್ಥಿಗೆ ಹೋಗಬಹುದು ಎಂದು ಜನರು ಭೀತಿಗೊಂಡಿದ್ದಾರೆ.

Gujarat polls: Why Muslims consider the EVM as a ‘devil’

"ಮತಗಳು ನಮಗಿರುವ ಏಕೈಕ ಶಕ್ತಿ. ಅದನ್ನೂ ಯಾರಾದರು ಕಿತ್ತುಕೊಂಡರೆ ಪ್ರಜಾಪ್ರಭುತ್ವದಲ್ಲಿ ನಮಗೆ ಬೇರೆ ಏನು ಉಳಿದಿದೆ?" ಎಂದು ಪ್ರಶ್ನಿಸುತ್ತಾರೆ ಸಯ್ಯದ್ ಮಾಲ ಎಂಬ ನಿರ್ಮಾಣ ಕಾರ್ಮಿಕರೊಬ್ಬರು.

ಸಯ್ಯದ್ ಅವರಿಗೆ ಇವಿಎಂಗಳ ಬಗ್ಗೆ ನಂಬಿಕೆ ಇಲ್ಲ ಇವಿಎಂಗಿಂತ ಬ್ಯಾಲೆಟ್ ಪೇಪರ್ ಗಳನ್ನು ನಂಬಬಹುದು ಎಂಬುದು ಸಯ್ಯದ್ ಅವರ ವಾದ. ಇದೇ ಅಭಿಪ್ರಾಯವನ್ನ ಇಲ್ಲಿನ ಮೂರು ವಿಧಾನಸಭೆ ಕ್ಷೇತ್ರಗಳ ಹೆಚ್ಚಿನ ಮುಸ್ಲಿಂ ಸಮುದಾಯದವರು ವ್ಯಕ್ತಪಡಿಸುತ್ತಾರೆ.

ಇದಲ್ಲದೆ ವಾಟ್ಸಾಪ್ ಮತ್ತು ಫೇಸ್ಬುಕ್ ನಂಥ ಸಾಮಾಜಿಕ ಜಾಲತಾಣಗಳನ್ನು ಬಳಸುವ ವಿದ್ಯಾವಂತರು ಇವಿಎಂ ಬಗ್ಗೆ ಮತ್ತಷ್ಟು ಹೆಚ್ಚು ಚಿಂತಿತರಾಗಿದ್ದಾರೆ.

"ನಾನು ಯಾರಿಗೆ ಮತ ಹಾಕುತ್ತೇನೆ ಎಂದು ನನಗೆ ಗೊತ್ತಿದೆ. ಆದರೆ ಅದು ಅವರಿಗೇ ಬೀಳುತ್ತದೆ ಎಂಬ ನಂಬಿಕೆ ಇಲ್ಲ. ಬ್ಯಾಲೆಟ್ ಪೇಪರ್ ನಲ್ಲಾದರೆ ನನ್ನ ಮತಗಳನ್ನು ಬದಲಾಯಿಸಲು ಸಾಧ್ಯವಿಲ್ಲ," ಎನ್ನುತ್ತಾರೆ ಕಲೋಲ್ ನ ಕಾಲೇಜು ವಿದ್ಯಾರ್ಥಿ ಸುಲ್ತಾನ್ ಹುಸೇನ್.

ಹುಸೇನ್ ಗೆ ಮತ ಸರಿಯಾಗಿ ಬಿದ್ದಿದೆಯೇ ಎಂಬುದನ್ನು ಪರೀಕ್ಷಿಸುವ ವಿವಿ ಪ್ಯಾಟ್ ಗಳ ಮೇಲೆಯೂ ಅಷ್ಟಾಗಿ ನಂಬಿಕೆ ಇಲ್ಲ.

ಇವೆಲ್ಲದರ ಮಧ್ಯೆ ಛೋಟಾ ಉದಯ್ ಪುರದ ತಿಮ್ಲಾ ಗ್ರಾಮಸ್ಥರಾದ ಫಾರೂಕ್ ಸಯ್ಯದ್ ಇವಿಎಂನ್ನು ತಮ್ಮ ಪಾಲಿನ ದೆವ್ವ ಎಂದು ಬಣ್ಣಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Many Muslim voters in Gujarat are describing the EVM as a ‘devil. EVM — described as the “devil” by one worried voter — was the hot topic of discussion among the people, who, however, said they would vote in the December 14 election in the state, despite their concerns.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ