ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಗೆಲುವಿನ ಮೇಲೆ ಸಾವಿರಾರು ಕೋಟಿ ರು ಬೆಟ್ಟಿಂಗ್!

By ವಿಕಾಸ್ ನಂಜಪ್ಪ
|
Google Oneindia Kannada News

Recommended Video

ಬಿಜೆಪಿ ಗೆಲುವಿನ ಮೇಲೆ ಸಾವಿರಾರು ಕೋಟಿ ರು ಬೆಟ್ಟಿಂಗ್! | Oneindia Kannada

ಅಹಮದಾಬಾದ್, ನವೆಂಬರ್ 27: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಗೆಲುವು ಕಾಣಲು ಯತ್ನಿಸುತ್ತಿರುವ ಬಿಜೆಪಿ ಪರ ಬುಕ್ಕಿಗಳು ಕೂಡಾ ನಿಂತಿದ್ದಾರೆ.

ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲ


ಗುಜರಾತಿನಲ್ಲಿ ಮತ್ತೊಮ್ಮೆ ಕೇಸರಿ ಬಾವುಟ ಹಾರಲಿದೆ ಎಂದು ಬುಕ್ಕಿಗಳು ಸಾವಿರಾರು ಕೋಟಿ ರು ಬೆಟ್ಟಿಂಗ್ ಕಟ್ಟಿರುವ ಸುದ್ದಿ ಬಂದಿದೆ.

ಆಸ್ತಿ ಮೌಲ್ಯ ಏರಿಕೆ : ರಾಜ್ಯಗುರುವನ್ನು ಮೀರಿಸಿದ ರೂಪಾನಿಆಸ್ತಿ ಮೌಲ್ಯ ಏರಿಕೆ : ರಾಜ್ಯಗುರುವನ್ನು ಮೀರಿಸಿದ ರೂಪಾನಿ

ಬೆಟ್ಟಿಂಗ್ ಅಕ್ರಮವಾಗಿದ್ದರೂ ಬಿಜೆಪಿ ಪರ ಬುಕ್ಕಿಗಳು ಬೆಟ್ಟಿಂಗ್ ನಡೆಸುತ್ತಿದ್ದಾರೆ. ಸದ್ಯದ ರೇಟಿಂಗ್ ಪಟ್ಟಿಯಂತೆ ಬಿಜೆಪಿ ಗೆಲುವಿಗೆ 1 ರು ಗೆ 1.25ರಂತೆ ಟ್ರೆಂಡ್ ನಡೆಯುತ್ತಿದೆ.

ಹೊಸ ಹವಾ ನೀಡಲಿದೆಯಾ ಮೋದಿ rally?!ಹೊಸ ಹವಾ ನೀಡಲಿದೆಯಾ ಮೋದಿ rally?!

ಇದೇ ರೀತಿ ಕಾಂಗ್ರೆಸ್ ಗೆದ್ದರೆ 1 ರುಗೆ 2 ರು ನಂತೆ ಬೆಟ್ಟಿಂಗ್ ರೇಟ್ ಇದೆ. ನವೆಂಬರ್ ತಿಂಗಳ ಆರಂಭದಲ್ಲಿ ಕಾಂಗ್ರೆಸ್ ಮೇಲೆ 1 ರು ಗೆ 7ರು ನಂತೆ ಇತ್ತು. ಆದರೆ, ಈಗ ಕಾಂಗ್ರೆಸ್ಸಿನ ಪ್ರಚಾರದ ಭರಾಟೆ ನೋಡಿದ ಮೇಲೆ ಕಾಂಗ್ರೆಸ್ ಬೆಲೆ ಹೆಚ್ಚಳವಾಗಿದೆ. ಆದರೆ, ಪ್ರಧಾನಿ ಮೋದಿ ಅವರು ಕೊನೆ ಕ್ಷಣದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದು ಮತ್ತೊಮ್ಮೆ ಮೋದಿ ಮಾತಿಗೆ ಜನತೆ ತಲೆದೂಗುತ್ತಿದ್ದು, ಬಿಜೆಪಿ ಪರ ಅಲೆ ಎದ್ದಿದೆ.

ಬುಕ್ಕಿಗಳ ಪ್ರಕಾರ ಯಾವ ಪಕ್ಷಕ್ಕೆ ಗೆಲುವು

ಬುಕ್ಕಿಗಳ ಪ್ರಕಾರ ಯಾವ ಪಕ್ಷಕ್ಕೆ ಗೆಲುವು

ಬುಕ್ಕಿಗಳ ಪ್ರಕಾರ ಭಾರತೀಯ ಜನತಾ ಪಕ್ಷ (ಬಿಜೆಪಿ) ಗೆಲುವು ತಪ್ಪಿಸಲು ಸಾಧ್ಯವಿಲ್ಲ. ವಿಜಯ್ ರೂಪಾಣಿ ನೇತೃತ್ವದ ಬಿಜೆಪಿ ಈ ಬಾರಿ 118 ಸ್ಥಾನಗಳನ್ನು ಗೆಲ್ಲಲ್ಲಿದೆ (2012ರಲ್ಲಿ 119). ಮತ್ತೊಂದು ಬುಕ್ಕಿಗಳ ತಂಡದ ಪ್ರಕಾರ ಬಿಜೆಪಿಗೆ 100 ಸ್ಥಾನ ಲಭಿಸಬಹುದು. ಕಾಂಗ್ರೆಸ್ಸಿಗೆ 80 ಸೀಟು ಸಿಗುವ ಸಾಧ್ಯತೆಯಿದೆ.

 ಮತ್ತೆ ಮೋದಿ ಮ್ಯಾಜಿಕ್ ಎಲ್ಲೆಡೆ ಹಬ್ಬುತ್ತಿದೆ

ಮತ್ತೆ ಮೋದಿ ಮ್ಯಾಜಿಕ್ ಎಲ್ಲೆಡೆ ಹಬ್ಬುತ್ತಿದೆ

ಒನ್ಇಂಡಿಯಾ ಪ್ರತಿನಿಧಿ ಜತೆ ಮಾತನಾಡಿದ ಬುಕ್ಕಿಯೊಬ್ಬ, ಮತ್ತೆ ಮೋದಿ ಮ್ಯಾಜಿಕ್ ಎಲ್ಲೆಡೆ ಹಬ್ಬುತ್ತಿದೆ. ಸೋಮವಾರಂದು ನಾಲ್ಕು ಕಡೆಗಳಲ್ಲಿ ಮೋದಿ ಅವರ ಚುನಾವಣಾ ಪ್ರಚಾರ ಸಮಾವೇಶಗಳಿವೆ. ಮೋದಿ ಅವರು ಹಾಕಿಕೊಟ್ಟ ಪ್ರಗತಿ ಪಥದಲ್ಲಿ ಗುಜರಾತಿನ ಬಿಜೆಪಿ ಸಾಗುತ್ತಿದೆ ಎಂಬ ನಂಬಿಕೆ ಜನರಲ್ಲಿ ಇನ್ನೂ ಇದೆ. ಹೀಗಾಗಿ, ಮತ್ತೊಮ್ಮೆ ಮೋದಿ ಬಲದಿಂದ ಬಿಜೆಪಿ ಗೆಲ್ಲಲಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಬಿಜೆಪಿ ಗೆಲುವು

ಗ್ರಾಮೀಣ ಭಾಗದಲ್ಲಿ ಬಿಜೆಪಿ ಗೆಲುವು

ಪಾಟೀದಾರ್ ಗಳನ್ನು ಸಂಭಾಳಿಸುವಲ್ಲಿ ಕಾಂಗ್ರೆಸ್ ಸೋತಿರುವುದು ಆ ಪಕ್ಷಕ್ಕೆ ಮುಳುವಾಗಲಿದೆ. ನಗರ ಪ್ರದೇಶಗಳಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಕೋರ್ ಮಾಡಬಹುದು ಆದರೆ, ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಬಿಜೆಪಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ಹೆಚ್ಚಿನ ಅಂತರದ ಗೆಲುವು ಸಾಧಿಸಲಿದೆ. ಜಿಎಸ್ ಟಿ ವಿರುದ್ಧ ಕಾಂಗ್ರೆಸ್ ಹೋರಾಟ ವ್ಯರ್ಥವಾಗಲಿದೆ ಎಂದು ಬುಕ್ಕಿ ಹೇಳಿದರು.

ಮೀಸಲಾತಿ ಯುದ್ಧ

ಮೀಸಲಾತಿ ಯುದ್ಧ

ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ, ಅಲ್ಪೇಶ್ ಠಾಕೂರ್ ಅವರು ಕಾಂಗ್ರೆಸ್ ಪರ ನಿಂತಿರುವುದು ತುಂಬಾ ತಡವಾಗಿದ್ದರಿಂದ ಹೆಚ್ಚಿನ ಲಾಭ ಸಿಗುತ್ತಿಲ್ಲ. ಇನ್ನೂ ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲವಿದೆ. ಮೀಸಲಾತಿಯೊಂದೇ ಈ ಬಾರಿಯ ಸಮಸ್ಯೆಯಲ್ಲ, ಇದು ಬಿಜೆಪಿಗೆ ಪ್ರತಿಷ್ಠೆಯ ಯುದ್ಧವಾಗಿದೆ ಎಂದು ಬುಕ್ಕಿ ಮಾಹಿತಿ ನೀಡಿದರು.

English summary
As the BJP aims at a big victory in Gujarat, bookies have placed bets to the tune of Rs 1,000 crore. Although illegal, betting continues ahead of the Gujarat assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X