ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್, ಕರ್ನಾಟಕ ಚುನಾವಣೆಯ ಎಕ್ಸಿಟ್ ಪೋಲ್ ಹೇಳಿದ್ದೇನು, ಫಲಿತಾಂಶ ಬಂದಿದ್ದೇನು?

|
Google Oneindia Kannada News

ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಭಾರೀ ಕುತೂಹಲ ಹುಟ್ಟಿಸಿದ್ದ ಎರಡು ಅಸೆಂಬ್ಲಿ ಚುನಾವಣೆಯಲ್ಲಿ ಒಂದು ಕಳೆದ ವರ್ಷ ನಡೆದ ಗುಜರಾತ್ ಅಸೆಂಬ್ಲಿ ಚುನಾವಣೆ, ಇನ್ನೊಂದು ಈ ವರ್ಷ ನಡೆದ ಕರ್ನಾಟಕದ ವಿಧಾನಸಭಾ ಚುನಾವಣೆ. ಕಾರಣ, ಅಲ್ಲಿ ಮೋದಿ ವರ್ಸಸ್ ರಾಹುಲ್, ಇಲ್ಲಿ ಮೋದಿ ವರ್ಸಸ್ ಸಿದ್ದರಾಮಯ್ಯ.

ಈ ಎರಡೂ ಚುನಾವಣೆಗಳ ಫಲಿತಾಂಶ ದೇಶದ ಜನರನ್ನು ತುದಿಗಾಲಿನಲ್ಲಿ ನಿಲ್ಲಿಸಿತ್ತು. ಚುನಾವಣಾಪೂರ್ವ ಮತ್ತು ಮತಗಟ್ಟೆ ಸಮೀಕ್ಷೆಯ ನಡುವೆ ವ್ಯತ್ಯಾಸ ಇರುವುದರಿಂದ, ಜೊತೆಗೆ ಎಕ್ಸಿಟ್ ಪೋಲ್ ಹೆಚ್ಚುಕಮ್ಮಿ ಕರಾರುವಕ್ಕಾದ ಫಲಿತಾಂಶ ನೀಡುತ್ತದೆ ಎನ್ನುವ ನಂಬಿಕೆಯಿರುವುದರಿಂದ, ಚುನಾವಣಾ ಫಲಿತಾಂಶದಷ್ಟೇ ಕುತೂಹಲದಿಂದ ಎಕ್ಸಿಟ್ ಪೋಲ್ ಕಡೆ ಮುಖ ಮಾಡುತ್ತಾರೆ.

ಗುಜರಾತ್ ಚುನಾವಣೆಯ ಮತಗಟ್ಟೆ ಸಮೀಕ್ಷೆಯನ್ನು ಹತ್ತು ವಿವಿಧ ಸಂಸ್ಥೆ/ವಾಹಿನಿಗಳು ನಡೆಸಿದ್ದವು. ಅದೇ ರೀತಿ, ಕರ್ನಾಟಕ ಚುನಾವಣೆಯ ಎಂಟು ಸಮೀಕ್ಷೆಗಳು ಬಂದಿದ್ದವು. ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಡಲಿದೆ, ಕೆಲವೊಂದು ಅತಂತ್ರ ಫಲಿತಾಂಶ ಬರಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು.

ಗುಜರಾತ್ ಗೆಲುವು: ಕಾಂಗ್ರೆಸ್ಸನ್ನು ಅಮಿತ್ ಶಾ ಕೆಣಕಿದ್ದು ಹೀಗೆ ಗುಜರಾತ್ ಗೆಲುವು: ಕಾಂಗ್ರೆಸ್ಸನ್ನು ಅಮಿತ್ ಶಾ ಕೆಣಕಿದ್ದು ಹೀಗೆ

ಆದರೆ, ಗುಜರಾತ್ ಚುನಾವಣೆಯ ಸಮೀಕ್ಷೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಜಯಸಿಗಲಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಬಿಜೆಪಿ ಮತ್ತೆ ಗುಜರಾತ್ ನಲ್ಲಿ ಅಧಿಕಾರಕ್ಕೆ ಬಂದಿದ್ದರೂ, ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಲು ಯಶಸ್ವಿಯಾಗಿತ್ತು.

ಗುಜರಾತ್ (ಡಿ 9, 14) ಮತ್ತು ಕರ್ನಾಟಕ ಚುನಾವಣೆಯ (ಮೇ 12) ಒಟ್ಟಾರೆ ಫಲಿತಾಂಶ ಏನು, ವಿವಿಧ ಮತಗಟ್ಟೆ ಸಮೀಕ್ಷೆಗಳು ಏನು ಹೇಳಿದ್ದವು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ಗುಜರಾತ್, ಕರ್ನಾಟಕ ಪ್ರಕಟಿತ ಫಲಿತಾಂಶ

ಗುಜರಾತ್, ಕರ್ನಾಟಕ ಪ್ರಕಟಿತ ಫಲಿತಾಂಶ

ಗುಜರಾತ್ ಪ್ರಕಟಿತ ಫಲಿತಾಂಶ
ಒಟ್ಟು ಸ್ಥಾನಗಳು: 182
ಬಿಜೆಪಿ: 99
ಕಾಂಗ್ರೆಸ್: 77
ಇತರರು: 06

ಕರ್ನಾಟಕ ಪ್ರಕಟಿತ ಫಲಿತಾಂಶ
ಒಟ್ಟು ಸ್ಥಾನಗಳು: 224
ಬಿಜೆಪಿ: 104
ಕಾಂಗ್ರೆಸ್: 80
ಜೆಡಿಎಸ್: 37
ಇತರರು:03

ಗುಜರಾತಿನಲ್ಲಿ ಬಿಜೆಪಿ ಗೆಲುವಿನ ರಹಸ್ಯ ಬಹಿರಂಗ ಗುಜರಾತಿನಲ್ಲಿ ಬಿಜೆಪಿ ಗೆಲುವಿನ ರಹಸ್ಯ ಬಹಿರಂಗ

ವಿವಿಧ ವಾಹಿನಿಗಳ ಸಮೀಕ್ಷೆ - 1

ವಿವಿಧ ವಾಹಿನಿಗಳ ಸಮೀಕ್ಷೆ - 1

ಎಬಿಪಿ ನ್ಯೂಸ್-ಸಿಎಸ್ಡಿಎಸ್ : 117 (ಬಿಜೆಪಿ), 64 (ಕಾಂಗ್ರೆಸ್), 01 (ಇತರರು)
ಟಿವಿ 9, ಸಿವೋಟರ್ : 109 (ಬಿಜೆಪಿ), 74 (ಕಾಂಗ್ರೆಸ್), 0 (ಇತರರು)
ಏಕ್ಸಿಸ್ - ಇಂಡಿಯಾ ಟುಡೇ : 99-113 (ಬಿಜೆಪಿ), 68-82 (ಕಾಂಗ್ರೆಸ್), 0 (ಇತರರು)
ವಿಎಂಆರ್ - ಟೈಮ್ಸ್ ನೌ: 108-118 (ಬಿಜೆಪಿ), 61-71 (ಕಾಂಗ್ರೆಸ್), 0-3 (ಇತರರು)
ರಿಪಬ್ಲಿಕ್ - ಜನ್ ಕೀ ಬಾತ್ : 115-130 (ಬಿಜೆಪಿ), 50-65 (ಕಾಂಗ್ರೆಸ್), 0-2 (ಇತರರು)

ಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆಯಿಂದಾಗಿ ಸೋಲು : ಬಿಎಸ್‌ವೈಕಾಂಗ್ರೆಸ್‌-ಜೆಡಿಎಸ್‌ ಹೊಂದಾಣಿಕೆಯಿಂದಾಗಿ ಸೋಲು : ಬಿಎಸ್‌ವೈ

ವಿವಿಧ ವಾಹಿನಿಗಳ ಸಮೀಕ್ಷೆ - 2

ವಿವಿಧ ವಾಹಿನಿಗಳ ಸಮೀಕ್ಷೆ - 2

ವಿಡಿಪಿ ಅಸೋಶಿಯೇಟ್ಸ್ : 142 (ಬಿಜೆಪಿ), 37 (ಕಾಂಗ್ರೆಸ್), 03 (ಇತರರು)
ಸಿ ಎನ್ ಎಕ್ಸ್, ಸಮಯ್ : 110-120 (ಬಿಜೆಪಿ), 65-75 (ಕಾಂಗ್ರೆಸ್), 2-4 (ಇತರರು)
ಟುಡೇಸ್ ಚಾಣಕ್ಯ : 135 (ಬಿಜೆಪಿ), 47 (ಕಾಂಗ್ರೆಸ್), 0 (ಇತರರು)
ನಿರ್ಮಣ್ ಟಿವಿ: 104 (ಬಿಜೆಪಿ), 74 (ಕಾಂಗ್ರೆಸ್), 0-4 (ಇತರರು)
ರಿಪಬ್ಲಿಕ್ ಟಿವಿ- ಸಿವೋಟರ್ : 108 (ಬಿಜೆಪಿ), 74 (ಕಾಂಗ್ರೆಸ್), 0 (ಇತರರು)

ವಿವಿಧ ವಾಹಿನಿಗಳ ಸಮೀಕ್ಷೆ -1

ವಿವಿಧ ವಾಹಿನಿಗಳ ಸಮೀಕ್ಷೆ -1

ಇಂಡಿಯಾ ಟಿವಿ - ವಿಎಂಆರ್ : 94 (ಬಿಜೆಪಿ), 97 (ಕಾಂಗ್ರೆಸ್), 28 (ಜೆಡಿಎಸ್) , 03 (ಇತರರು)
ರಿಪಬ್ಲಿಕ್ ಟಿವಿ - ಜನ್ ಕೀಬಾತ್ : 105 (ಬಿಜೆಪಿ), 78 (ಕಾಂಗ್ರೆಸ್), 37 (ಜೆಡಿಎಸ್) , 02 (ಇತರರು)
ಎಬಿಪಿ ನ್ಯೂಸ್ - ಸಿವೋಟರ್ : 110 (ಬಿಜೆಪಿ), 88 (ಕಾಂಗ್ರೆಸ್), 24 (ಜೆಡಿಎಸ್) , 02 (ಇತರರು)
ಟೈಮ್ಸ್ ನೌ - ವಿಎಂಆರ್ : 87 (ಬಿಜೆಪಿ), 97 (ಕಾಂಗ್ರೆಸ್), 35 (ಜೆಡಿಎಸ್) , 03 (ಇತರರು)

ವಿವಿಧ ವಾಹಿನಿಗಳ ಸಮೀಕ್ಷೆ - 2

ವಿವಿಧ ವಾಹಿನಿಗಳ ಸಮೀಕ್ಷೆ - 2

ಟೈಮ್ಸ್ ನೌ - ಟುಡೇಸ್ ಚಾಣಕ್ಯ : 120 (ಬಿಜೆಪಿ), 73 (ಕಾಂಗ್ರೆಸ್), 26 (ಜೆಡಿಎಸ್) , 03 (ಇತರರು)
ಇಂಡಿಯಾ ಟುಡೇ - ಆಕ್ಸಿಸ್ : 85 (ಬಿಜೆಪಿ), 111 (ಕಾಂಗ್ರೆಸ್), 26 (ಜೆಡಿಎಸ್) , 0 (ಇತರರು)
ನ್ಯೂಸ್ X- CNX : 106 (ಬಿಜೆಪಿ), 75 (ಕಾಂಗ್ರೆಸ್), 37 (ಜೆಡಿಎಸ್) , 04 (ಇತರರು)
ನ್ಯೂಶ್ ನೇಶನ್ : 107 (ಬಿಜೆಪಿ), 73 (ಕಾಂಗ್ರೆಸ್), 38 (ಜೆಡಿಎಸ್) , 04 (ಇತರರು)

English summary
Gujarat and Karnataka Assembly Elections Exit Poll comparison with actual results. Last December 2017 Gujarat election and May 2018 Karnataka assembly elections was held. Nearly 8-10 agencies/media conducted the exit poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X