ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2002ರ ಗೋಧ್ರಾ ಹತ್ಯಾಕಾಂಡ Timeline

|
Google Oneindia Kannada News

ಅಹಮದಾಬಾದ್, ಅಕ್ಟೋಬರ್ 09 : ಗುಜರಾತ್ ಹೈಕೋರ್ಟ್ ಗೋಧ್ರಾ ಹತ್ಯಾಕಾಂಡದ ಕುರಿತ ತೀರ್ಪು ಪ್ರಕಟಿಸಿದೆ. 11 ಅಪರಾಧಿಗಳಿಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಜೀವಾವಧಿಗೆ ಪರಿವರ್ತನೆ ಮಾಡಿದೆ. 2002ರಲ್ಲಿ ಹತ್ಯಾಕಾಂಡ ನಡೆದಿತ್ತು.

ಗೋಧ್ರಾ ಹತ್ಯಾಕಾಂಡ, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಗೋಧ್ರಾ ಹತ್ಯಾಕಾಂಡ, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಗುಜರಾತ್ ಹೈಕೋರ್ಟ್‌ನಲ್ಲಿ ಗೋಧ್ರಾ ಹತ್ಯಾಕಾಂಡದ ಕುರಿತು ವಿಚಾರಣೆ ನಡೆಯುತ್ತಿತ್ತು. ಸೋಮವಾರ ಕೋರ್ಟ್ ತೀರ್ಪು ಪ್ರಕಟಗೊಂಡಿದೆ. ಗೋಧ್ರಾ ರೈಲು ದುರಂತದಲ್ಲಿ ಸಜೀವವಾಗಿ ದಹನವಾದ 59 ಕರ ಸೇವಕರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಎಂದು ಗುಜರಾತ್ ಸರ್ಕಾರ ಮತ್ತು ರೈಲ್ವೆ ಇಲಾಖೆಗೆ ಸೂಚನೆ ನೀಡಲಾಗಿದೆ.

ಗೋಧ್ರಾ ಹತ್ಯಾಕಾಂಡದ Timeline

Gujarat Godhra train burning case timeline

* 2002ರ ಫೆಬ್ರವರಿ 27 : ಗುಜರಾತ್‌ನ ಗೋಧ್ರಾ ರೈಲು ನಿಲ್ದಾಣದಲ್ಲಿ ಅಯೋಧ್ಯೆಯಿಂದ ವಾಪಸ್ ಆಗುತ್ತಿದ್ದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ. ಎಸ್ 6 ಕೋಚ್‌ ನಲ್ಲಿದ್ದ 59 ಯಾತ್ರಾರ್ಥಿಗಳ ಸಜೀವ ದಹನ. ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಬಳಿಕ ಗುಜರಾತ್‌ನ ಹಲವು ಪ್ರದೇಶಗಳಲ್ಲಿ ಕೋಮು ಗಲಭೆ, 1000ಕ್ಕೂ ಅಧಿಕ ಜನರ ಸಾವು

* 2002 : ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ 50ಕ್ಕೂ ಅಧಿಕ ಜನರ ಬಂಧನ, ಹತ್ಯಾಕಾಂಡದ ತನಿಖೆಗೆ ಗುಜರಾತ್ ಸರ್ಕಾರದಿಂದ ನಾನಾವತಿ-ಶಾ ಕಮೀಷನ್ ನೇಮಕ

* 2002 ಮೇ 24 : 54 ಆರೋಪಿಗಳ ವಿರುದ್ಧ ಗೋಧ್ರಾ ಹತ್ಯಾಕಾಂಡದ ಮೊದಲ ಚಾರ್ಚ್ ಶೀಟ್ ಸಲ್ಲಿಕೆ. ಡಿಸೆಂಬರ್ 19ರಂದು ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ.

* 2003ರ ಫೆಬ್ರವರಿ : ಎಲ್ಲಾ ಆರೋಪಿಗಳ ವಿರುದ್ಧ Prevention Of Terrorism Act (POTA) ಅಡಿ ಪ್ರಕರಣ ದಾಖಲು. ಮಾರ್ಚ್‌ನಲ್ಲಿ ವಿಶೇಷ ಪೋಟಾ ಕೋರ್ಟ್ ಸ್ಥಾಪನೆ. ಏಪ್ರಿಲ್‌ನಲ್ಲಿ ಮೂರನೇ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ.

* 2003 ನವೆಂಬರ್ : ಆರೋಪಿಗಳ ವಿರುದ್ಧ ಪೋಟಾ ಕಾಯ್ದೆ ಹಾಕಿದ್ದನ್ನು ಪ್ರಶ್ನಿಸಿ ಮಾವನ ಹಕ್ಕುಗಳ ಆಯೋಗ ಮತ್ತು ಇತರ ಸಂಘಟನೆಗಳಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ. ನವೆಂಬರ್‌ನಲ್ಲಿ ಪ್ರಕರಣ ಗುಜರಾತ್ ಹೈಕೋರ್ಟ್‌ಗೆ ವರ್ಗಾವಣೆ. ಪೋಟಾ ಕಾಯ್ದೆಯ ವಿವಾದದ ತೀರ್ಪು ಬರುವ ತನಕ ವಿಚಾರಣೆಗೆ ತಡೆ.

* 2006 : ಕೇಂದ್ರ ಸರ್ಕಾರದಿಂದ ಯು.ಸಿ.ಬ್ಯಾನರ್ಜಿ ನೇತೃತ್ವದಲ್ಲಿ ಪ್ರತ್ಯೇಕ ವಿಚಾರಣಾ ಸಮಿತಿ ರಚನೆ. ಸಮಿತಿ ಸಲ್ಲಿಸಿದ ವರದಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್

* 2008 : ನಾನಾವತಿ-ಶಾ ಕಮೀಷನ್‌ನಿಂದ ವರದಿ ಸಲ್ಲಿಕೆ. ರೈಲಿಗೆ ಬೆಂಕಿ ಹಚ್ಚಿರುವುದು ಒಳಸಂಚು ಎಂದು ಉಲ್ಲೇಖ. ವಿಚಾರಣೆಗೆ ಇದ್ದ ತಡೆಯಾಜ್ಞೆ ತೆರವುಗೊಳಿಸಿದ ಸುಪ್ರೀಂಕೋರ್ಟ್. ಸಿಬಿಐ ನಿವೃತ್ತ ನಿರ್ದೇಶಕ ಆರ್.ಕೆ.ರಾಘವನ್ ನೇತೃತ್ವದಲ್ಲಿ ವಿಚಾರಣೆಗೆ ಎಸ್‌ಐಟಿ ರಚನೆ.

* 2009 : ಆರೋಪಿಗಳ ವಿರುದ್ಧ ದಾಖಲಾಗಿದ್ದ ಪೋಟಾ ಕಾಯ್ದೆ ತೆರವುಗೊಳಿಸಿದ ಗುಜರಾತ್ ಹೈಕೋರ್ಟ್. ಏಪ್ರಿಲ್‌ನಲ್ಲಿ ಪ್ರಕರಣದ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪನೆ. ಸೆಪ್ಟೆಂಬರ್‌ನಲ್ಲಿ ವಿಚಾರಣೆ ಆರಂಭಿಸಿದ ಕೋರ್ಟ್

* 2010ರ ಸೆಪ್ಟೆಂಬರ್ 28 : ವಿಚಾರಣೆ ಪೂರ್ಣಗೊಳಿಸಿ, ತೀರ್ಪನ್ನು ಕಾಯ್ದಿರಿಸಿದ ವಿಶೇಷ ಕೋರ್ಟ್. ಸುಪ್ರೀಂಕೋರ್ಟ್ ಆದೇಶದ ತನಕ ತೀರ್ಪು ಪ್ರಕಟಿಸಲು ಕಾದ ಕೋರ್ಟ್.

* 2011ರ ಜನವರಿ 28 : ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಲು ಇದ್ದ ತಡೆಯನ್ನು ತೆರವು ಮಾಡಿದ ಸುಪ್ರೀಂಕೋರ್ಟ್.

* 2011ರ ಫೆಬ್ರವರಿ : 31 ಜನರು ದೋಷಿ ಎಂದು ವಿಶೇಷ ಕೋರ್ಟ್ ತೀರ್ಪು. 63 ಜನರು ಖುಲಾಸೆ. 11 ಜನರಿಗೆ ಮರಣದಂಡನೆ, 20 ದೋಷಿಗಳಿಗೆ ಜೀವಾವಧಿ ಶಿಕ್ಷೆ

* 2017ರ ಅಕ್ಟೋಬರ್ : ಗುಜರಾತ್ ಹೈಕೋರ್ಟ್ ತೀರ್ಪು ಪ್ರಕಟ 11 ದೋಷಿಗಳ ಮರಣದಂಡನೆ ಜೀವಾವಧಿ ಶಿಕ್ಷೆಗೆ ಪರಿವರ್ತನೆ

English summary
The Gujarat High Court on Monday delivered its verdict in Godhra train burning case, commuting death penalty of 11 convicts to lifeimprisonment. Timeline of Godhra train burning case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X