ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ : ಎಕ್ಸಿಟ್‌ ಪೋಲ್, ಫಲಿತಾಂಶದ ವಿಶ್ಲೇಷಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 18 : ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿದ್ದ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. 99 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ಸರಳ ಬಹುಮತ ಪಡೆದಿದೆ.

ಡಿಸೆಂಬರ್ 14ರಂದು 2ನೇ ಹಂತದ ಚುನಾವಣೆ ಮುಗಿದ ಬಳಿಕ ಹಲವು ಸಂಸ್ಥೆಗಳು ಎಕ್ಸಿಟ್‌ ಪೋಲ್ ಸಮೀಕ್ಷೆ ನಡೆಸಿದ್ದವು. ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ವರದಿಗಳು ಹೇಳಿದ್ದವು.

ಗುಜರಾತ್ : ಚುನಾವಣಾ ಪೂರ್ವ ಸಮೀಕ್ಷೆ, ಫಲಿತಾಂಶಗುಜರಾತ್ : ಚುನಾವಣಾ ಪೂರ್ವ ಸಮೀಕ್ಷೆ, ಫಲಿತಾಂಶ

182 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 112 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಎಲ್ಲಾ ಸಮೀಕ್ಷೆಗಳು ಹೇಳಿದ್ದವು. ಇಂದು ಫಲಿತಾಂಶ ಪ್ರಕಟವಾಗಿದ್ದು 99 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿದೆ.

ಸೋತು ಗೆದ್ದ ಕಾಂಗ್ರೆಸ್, ಗುಜರಾತ್ ನಲ್ಲಿ ಹೆಚ್ಚಿದ 'ಕೈ' ಮತಗಳಿಕೆಸೋತು ಗೆದ್ದ ಕಾಂಗ್ರೆಸ್, ಗುಜರಾತ್ ನಲ್ಲಿ ಹೆಚ್ಚಿದ 'ಕೈ' ಮತಗಳಿಕೆ

ಕಾಂಗ್ರೆಸ್ ಪಕ್ಷ 70 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೇಳಿದ್ದವು. ಅಂತಿಮವಾಗಿ ಇಂದು ಚುನಾವಣೆ ಫಲಿತಾಂಶ ಪ್ರಕಟವಾದಾಗ ಕಾಂಗ್ರೆಸ್ 80 ಸ್ಥಾನಗಳಲ್ಲಿ ಜಯಗಳಿಸಿದೆ.

ಚುನಾವಣಾ ಪೂರ್ವ, ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೇಳಿದಂತೆ ಬಿಜೆಪಿ ಬಹುಮತ ಪಡೆದಿದೆ. ಆದರೆ, ಪಕ್ಷ ಹೇಳಿದಂತೆ 150 ಸ್ಥಾನಗಳಲ್ಲಿ ಜಯಗಳಿಸಿಲ್ಲ.

112 ಸ್ಥಾನದ ನಿರೀಕ್ಷೆ ಇತ್ತು

112 ಸ್ಥಾನದ ನಿರೀಕ್ಷೆ ಇತ್ತು

ಟೈಮ್ಸ್‌ ನೌ, ವಿಎಂಆರ್ ಪ್ರಕಾರ 109, ರಿಪಬ್ಲಿಕ್-ಸಿ ವೋಟರ್ 108, ನ್ಯೂಸ್ ಎಕ್ಸ್ 110-120, ನ್ಯೂಸ್ 18-ಸಿವೋಟರ್ 108, ಇಂಡಿಯಾ ಟಿವಿ 99-113, ನ್ಯೂಸ್ ನೇಷನ್ 124-128, ಜೀ ನ್ಯೂಸ್ ಆಕ್ಸಿಸ್ 99-113 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದವು.

70 ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆ

70 ಸ್ಥಾನ ಪಡೆಯಬಹುದು ಎಂಬ ನಿರೀಕ್ಷೆ

ಎಕ್ಸಿಟ್ ಪೋಲ್ ಸಮೀಕ್ಷೆಯಲ್ಲಿ ಕಾಂಗ್ರೆಸ್ 70 ಸ್ಥಾನಗಳನ್ನು ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಟೈಮ್ಸ್ ನೌ ವಿಎಂಆರ್ ಸಮೀಕ್ಷೆ 70, ರಿಪಬ್ಲಿಕ್-ಸಿ ವೋಟರ್ 74, ನ್ಯೂಸ್ 18 ಸಿ ವೋಟರ್ 74, ನ್ಯೂಸ್ ಎಕ್ಸ್ 65-75, ನ್ಯೂಸ್ ನೇಷನ್ 52-56, ಇಂಡಿಯಾ ಟುಡೆ 68-82, ಜೀ ನ್ಯೂಸ್ 68-82 ಸ್ಥಾನಗಳಲ್ಲಿ ಪಕ್ಷ ಜಯಗಳಿಸಬಹುದು ಎಂದು ಹೇಳಿತ್ತು.

ಇತರ ಪಕ್ಷಗಳು ಗೆಲ್ಲುವುದಿಲ್ಲ

ಇತರ ಪಕ್ಷಗಳು ಗೆಲ್ಲುವುದಿಲ್ಲ

ಎಕ್ಸಿಟ್ ಪೋಲ್ ಸಮೀಕ್ಷೆಗಳ ಪ್ರಕಾರ ಇತರ ಪಕ್ಷಗಳು ಗುಜರಾತ್‌ನಲ್ಲಿ ಯಾವುದೇ ಸ್ಥಾನ ಗೆಲ್ಲುವುದಿಲ್ಲ ಎಂದು ಫಲಿತಾಂಶ ಬಂದಿತ್ತು. ಟೈಮ್ಸ್ ನೌ ವಿಎಂಆರ್ ಎಕ್ಸಿಟ್ ಪೋಲ್ 2, ರಿಪಬ್ಲಿಕ್ ಸಿ ವೋಟರ್ 0, ನ್ಯೂಸ್ ಎಕ್ಸ್ 2-4, ನ್ಯೂಸ್ ನೇಷನ್ 1-3, ಇಂಡಿಯಾ ಟುಡೆ 1-4, ಜೀ ನ್ಯೂಸ್ 1 ಸ್ಥಾನದಲ್ಲಿ ಇತರ ಪಕ್ಷ ಗೆಲ್ಲುತ್ತದೆ ಎಂದು ಫಲಿತಾಂಶ ಬಂದಿತ್ತು.

ಇಂದು ಪ್ರಕಟವಾದ ಫಲಿತಾಂಶ

ಇಂದು ಪ್ರಕಟವಾದ ಫಲಿತಾಂಶ

ಇಂದು ಪ್ರಕಟವಾದ ಫಲಿತಾಂಶದ ಪ್ರಕಾರ ಬಿಜೆಪಿ 99, ಕಾಂಗ್ರೆಸ್ 80, ಇತರೆ ಪಕ್ಷಗಳು 3 ಕ್ಷೇತ್ರದಲ್ಲಿ ಗೆಲುವು ಸಾಧಿಸಿವೆ.

English summary
Gujarat assembly elections 2017 : Exit poll survey and election result comparison. BJP will come back to power in Gujarat, party won 99 seats in election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X