ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಗೆ ದಿನಕ್ಕೊಂದು ಪ್ರಶ್ನೆ : ರಾಹುಲ್ ಕೇಳಿದ 4 ಪ್ರಶ್ನೆಗಳು!

|
Google Oneindia Kannada News

ಅಹಮದಾಬಾದ್, ಡಿಸೆಂಬರ್ 03 : ಗುಜರಾತ್ ವಿಧಾನಸಭೆ ಚುನಾವಣ ಕಣ ರಂಗೇರುತ್ತಿದೆ. ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಿನಕ್ಕೊಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಗುಜರಾತ್ ಗೆಲುವು ಬಿಜೆಪಿಗೇಕೆ ಮುಖ್ಯ?ಗುಜರಾತ್ ಗೆಲುವು ಬಿಜೆಪಿಗೇಕೆ ಮುಖ್ಯ?

'22 ವರ್ಷದ ಆಡಳಿತ, ಗುಜರಾತ್‌ಗೆ ಉತ್ತರ ಬೇಕು' ಎಂಬ ಶೀರ್ಷಿಕೆಯಡಿ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ದಿನಕ್ಕೊಂದು ಪ್ರಶ್ನೆಯನ್ನು ಟ್ವಿಟರ್‌ ಮೂಲಕ ಕೇಳುತ್ತಿದ್ದಾರೆ. ಭಾನುವಾರಕ್ಕೆ 4 ಪ್ರಶ್ನೆಗಳನ್ನು ರಾಹುಲ್ ಕೇಳಿದ್ದಾರೆ.

ಮೋದಿ ರ‍್ಯಾಲಿ ಪಕ್ಕದಲ್ಲೇ ಹಾರ್ದಿಕ್ ಪಟೇಲ್ ಶಕ್ತಿ ಪ್ರದರ್ಶನಮೋದಿ ರ‍್ಯಾಲಿ ಪಕ್ಕದಲ್ಲೇ ಹಾರ್ದಿಕ್ ಪಟೇಲ್ ಶಕ್ತಿ ಪ್ರದರ್ಶನ

ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ಡಿಸೆಂಬರ್ 9 ಮತ್ತು 14ರಂದು ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಡಿಸೆಂಬರ್ 18 ರಂದು ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ರಾಜ್ಯದಲ್ಲಿ ಬಿರುಸಿನಿಂದ ಪ್ರಚಾರ ನಡೆಸುತ್ತಿವೆ.

ಉತ್ತರಪ್ರದೇಶ ಚುನಾವಣೆಗೆ ಹೋಲಿಸಿದರೆ ಗುಜರಾತಿನ ಮಾರ್ಕೆಟ್ ಡೌನ್!ಉತ್ತರಪ್ರದೇಶ ಚುನಾವಣೆಗೆ ಹೋಲಿಸಿದರೆ ಗುಜರಾತಿನ ಮಾರ್ಕೆಟ್ ಡೌನ್!

ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರಾಹುಲ್ ಗಾಂಧಿ, ಗುಜರಾತ್‌ನಲ್ಲಿ ಭರ್ಜರಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಆದ್ದರಿಂದ, ಬಿಜೆಪಿಗೆ ಒಂದೊಂದೇ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ರಾಹುಲ್ ಗಾಂಧಿ ಪ್ರಶ್ನೆ - 1

ರಾಹುಲ್ ಗಾಂಧಿ ಪ್ರಶ್ನೆ - 1

ಗುಜರಾತಿಗಳಿಗೆ ಮನೆಗಳನ್ನು ನೀಡಲು ಇನ್ನೂ ಸುಮಾರು 45 ವರ್ಷಗಳು ಬೇಕೆ? ಎಂದು ರಾಹುಲ್ ಗಾಂಧಿ ಮೊದಲ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ತಮ್ಮ ಪ್ರಶ್ನೆಗೆ ಅಂಕಿ-ಸಂಖ್ಯೆಗಳ ವಿವರ ನೀಡಿರುವ ಅವರು 2012ರಲ್ಲಿ 50 ಲಕ್ಷ ಹೊಸ ಮನೆಗಳನ್ನು ನೀಡುವುದಾಗಿ ಘೋಷಣೆ ಮಾಡಲಾಗಿತ್ತು. 5 ವರ್ಷಗಳಲ್ಲಿ 4.72 ಲಕ್ಷ ಮನೆಗಳನ್ನು ನೀಡಲಾಗಿದೆ. ಉಳಿದ ಮನೆಗಳನ್ನು ನೀಡಲು 45 ವರ್ಷಗಳು ಬೇಕೆ? ಎಂದು ರಾಹುಲ್ ಮೋದಿಗೆ ಪ್ರಶ್ನಿಸಿದ್ದಾರೆ.

ಗುಜರಾತಿಗಳ ಹೆಗಲ ಮೇಲೆ ಸಾಲವೇಕೆ?

ಗುಜರಾತಿಗಳ ಹೆಗಲ ಮೇಲೆ ಸಾಲವೇಕೆ?

ಪ್ರತಿ ಗುಜರಾತಿಗಳ ಹೆಗಲ ಮೇಲೆ 37,000 ರೂ. ಸಾಲ ಏಕಿದೆ? ಎಂದು ರಾಹುಲ್ ಗಾಂಧಿ 2ನೇ ಪ್ರಶ್ನೆಯನ್ನು ಕೇಳಿದ್ದಾರೆ. ತಮ್ಮ ಪ್ರಶ್ನೆಗೆ ಅಂಕಿ ಸಂಖ್ಯೆಗಳನ್ನು ನೀಡಿರುವ ಅವರು, '1995ರಲ್ಲಿ ಗುಜರಾತ್ ರಾಜ್ಯದ ಸಾಲ 9,183 ಕೋಟಿ ಗಳಾಗಿತ್ತು. 2017ರಲ್ಲಿ 2,41,000 ಕೋಟಿ ಇದೆ. ಪ್ರತಿ ಗುಜರಾತಿ ಮೇಲೆ 37,000 ರೂ. ಸಾಲವಿದೆ. ನಿಮ್ಮ ತಪ್ಪು ಆರ್ಥಿಕ ನೀತಿ, ಪ್ರಚಾರಕ್ಕಾಗಿ ಜನರು ಏಕೆ ಹಣ ತೆರಬೇಕು?' ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಪ್ರಶ್ನೆ - 3

ರಾಹುಲ್ ಗಾಂಧಿ ಪ್ರಶ್ನೆ - 3

ರಾಹುಲ್ ಗಾಂಧಿ 3ನೇ ಪ್ರಶ್ನೆಯನ್ನು ವಿದ್ಯುತ್ ಖರೀದಿ ಬಗ್ಗೆ ಕೇಳಿದ್ದಾರೆ. 'ಗುಜರಾತ್ 2002 ರಿಂದ 2016ರ ತನಕ ವಿದ್ಯುತ್ ಖರೀದಿಗಾಗಿ ಖಾಸಗಿ ಕಂಪನಿಗಳಿಗೆ 62,549 ಕೋಟಿ ರೂ. ಪಾವತಿ ಮಾಡಿದೆ. ಇದರ ಬಗ್ಗೆ ವಿವರಣೆ ನೀಡಿ ಎಂದು ಕೇಳಿದ್ದಾರೆ. 62,549 ಕೋಟಿಯ ವಿದ್ಯುತ್ ಖರೀದಿ ಮಾಡಿ ಖಾಸಗಿ ಕಂಪನಿಗಳ ಜೇಬು ತುಂಬಿಸುವ ಕೆಲಸ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ವಿದ್ಯುತ್ ದರ ಯೂನಿಟ್‌ಗೆ 3 ರೂ. ಇದೆ. ಆದರೆ, ಯೂನಿಟ್‌ಗೆ 24 ರೂ. ನೀಡಲಾಗಿದೆ ಎಂದು ಹೇಳಿದ್ದಾರೆ.

ಗುಜರಾತ್ 26ನೇ ಸ್ಥಾನದಲ್ಲಿ ಏಕಿದೆ?

ಗುಜರಾತ್ 26ನೇ ಸ್ಥಾನದಲ್ಲಿ ಏಕಿದೆ?

ಶಿಕ್ಷಣ ವ್ಯವಸ್ಥೆ ಬಗ್ಗೆ ರಾಹುಲ್ 4ನೇ ಪ್ರಶ್ನೆ ಕೇಳಿದ್ದಾರೆ. ಶಿಕ್ಷಣಕ್ಕೆ ಸರ್ಕಾರ ವೆಚ್ಚ ಮಾಡುವುದರಲ್ಲಿ ಗುಜರಾತ್ 26ನೇ ಸ್ಥಾನದಲ್ಲಿ ಏಕಿದೆ? ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಯುವಕರು ಮಾಡಿರುವ ತಪ್ಪೇನು? ಎಂದು ಅವರು ಮೋದಿಯನ್ನು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ವ್ಯಾಪಾರೀಕರಣವಾಗಿದೆ. ಸರ್ಕಾರಿ ಶಾಲಾ-ಕಾಲೇಜುಗಳ ಅತಿಯಾದ ಶುಲ್ಕದಿಂದಾಗಿ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

English summary
Stepping up his offensive against PM Narendra Modi ahead of the Gujarat elections, Congress vice president Rahul Gandhi sought to make the state's ruling BJP accountable for its promises in the last polls. In the name of 22 salon ka hisaab, Gujarat mange jawaab (Gujarat demands answers for 22 years of BJP rule) he is posting questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X