ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್: ಅಡ್ಡ ಮತದಾನ ಮಾಡಿದ್ದ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಟಿಕೆಟ್

By Sachhidananda Acharya
|
Google Oneindia Kannada News

ಅಹಮದಾಬಾದ್, ನವೆಂಬರ್ 17: ಗುಜರಾತ್ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಇಂದು ತನ್ನ 70 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ 5 ಬಂಡಾಯ ಕಾಂಗ್ರೆಸ್ ಶಾಸಕರೂ ಸ್ಥಾನ ಪಡೆದಿದ್ದಾರೆ.

ಬಿಜೆಟಿ ಟಿಕೆಟ್ ಗಿಟ್ಟಿಸಿದ ಕಾಂಗ್ರೆಸ್ ನಾಯಕರು ಈ ವರ್ಷದ ಆರಂಭದಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿದವರಾಗಿದ್ದಾರೆ.

Gujarat elections: BJP fielded five rebel Congress legislators

ಜಾಮ್ನಗರ ಗ್ರಾಮೀಣ ಕ್ಷೇತ್ರದಿಂದ ರಾಘವ್ಜೀ ಪಟೇಲ್, ಜಾಮ್ನಗರ ಉತ್ತರದಿಂದ ಧರ್ಮೇಂದ್ರಸಿನ್ಹಾ ಜಡೇಜಾ, ಗೋಧ್ರಾದಿಂದ ಸಿಕೆ ರೌಲ್ಜೀ, ಬಾಲಸಿನೋರ್ ನಿಂದ ಮನ್ ಸಿನ್ಹಾ ಚೌಹಾಣ್, ಥಸ್ರಾದಿಂದ ರಾಮ್ ಸಿನ್ಹಾ ಪರ್ಮಾರ್ ಬಿಜೆಪಿ ಟಿಕೆಟ್ ಪಡೆದುಕೊಂಡ ಐವರು ಕಾಂಗ್ರೆಸ್ ಶಾಸಕರಾಗಿದ್ದಾರೆ.

ಈ ಐವರೂ ಕಾಂಗ್ರೆಸ್ ಶಾಸಕರು ರಾಜ್ಯಸಭೆ ಚುನಾವಣೆ ವೇಳೆ ಅಹ್ಮದ್ ಪಟೇಲ್ ರಿಗೆ ಮತ ಚಲಾಯಿಸದೆ ಅಡ್ಡ ಮತದಾನ ಮಾಡಿದ್ದರು.

ಆದರೆ ಬಿಜೆಪಿ ಸೇರಿದ್ದ ಮತ್ತೋರ್ವ ಕಾಂಗ್ರೆಸ್ ಶಾಸಕ ಭೋಲಾಭಾಯ್ ಗೋಹೆಲ್ ಬಿಜೆಪಿ ಟಿಕೆಟ್ ಗಿಟ್ಟಿಸುವಲ್ಲಿ ವಿಫಲರಾಗಿದ್ದಾರೆ.

ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಿಗೆ ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನ 93 ಕ್ಷೇತ್ರಗಳಿಗೆ ಡಿಸೆಂಬರ್ 14ರಂದು ನಡೆಯಲಿದೆ. ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.

English summary
The BJP today released its first list of 70 candidates for next month's Gujarat Assembly elections, which includes five former Congress legislators, who had switched over to the BJP earlier this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X