ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಫಲಿತಾಂಶ 'ಫಿಕ್ಸೆಡ್ ಮ್ಯಾಚ್', ಮರು ಮತಎಣಿಕೆಗೆ ಹಾರ್ದಿಕ್ ಆಗ್ರಹ

By Sachhidananda Acharya
|
Google Oneindia Kannada News

ಅಹಮದಾಬಾದ್, ಡಿಸೆಂಬರ್ 18: ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಗೆಲ್ಲಲು ಇವಿಎಂ ತಿರುಚಿದ್ದೇ ಕಾರಣ ಎಂದು ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.

ಗುಜರಾತ್ LIVE : ಸರಳ ಬಹುಮತದ ಹಾದಿಯಲ್ಲಿ ಬಿಜೆಪಿಗುಜರಾತ್ LIVE : ಸರಳ ಬಹುಮತದ ಹಾದಿಯಲ್ಲಿ ಬಿಜೆಪಿ

ಗುಜರಾತ್ ಚುನಾವಣಾ ಫಲಿತಾಂಶದ ಬೆನ್ನಿಗೆ ಅಹಮದಾಬಾದ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಸೂರತ್, ರಾಜ್ ಕೋಟ್, ಅಹಮದಾಬಾದ್ ನಲ್ಲಿ ಇವಿಎಂ ತಿರುಚಲಾಗಿದೆ. ಎಲ್ಲೆಲ್ಲಿ ಟ್ಯಾಂಪರಿಂಗ್ ನಡೆದಿದೆಯೋ ಅಲ್ಲೆಲ್ಲಾ ಗೆಲುವಿನ ಅಂತರ ಕಡಿಮೆಯಾಗಿದೆ. ಇವಿಎಂಗಳನ್ನು ಹ್ಯಾಕ್ ಮಾಡಬಹುದು," ಎಂದು ಹೇಳಿಕೆ ನೀಡಿದ್ದಾರೆ.

ಸೋತರೂ ಗುಜರಾತ್ ಪಾಟೀದಾರರ ಕಣ್ಮಣಿಯಾದ ಹಾರ್ದಿಕ್ ಪಟೇಲ್ಸೋತರೂ ಗುಜರಾತ್ ಪಾಟೀದಾರರ ಕಣ್ಮಣಿಯಾದ ಹಾರ್ದಿಕ್ ಪಟೇಲ್

Gujarat election

ನಮಗಿನ್ನೂ ಇವಿಎಂಗಳ ಬಗ್ಗೆ ನಂಬಿಕೆ ಬಂದಿಲ್ಲ ಎಂದು ಹೇಳಿರುವ ಹಾರ್ದಿಕ್ ಪಟೇಲ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕೇವಲ 12-15 ಸೀಟುಗಳ ಅಂತರವಿದೆ. ನಾವು ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಗುಡುಗಿದ್ದಾರೆ.

5000 ಇವಿಎಂ ತಿರುಚಲು 140 ಎಂಜಿನಿಯರ್ ಗಳ ನೇಮಕ: ಹಾರ್ದಿಕ್ ಪಟೇಲ್5000 ಇವಿಎಂ ತಿರುಚಲು 140 ಎಂಜಿನಿಯರ್ ಗಳ ನೇಮಕ: ಹಾರ್ದಿಕ್ ಪಟೇಲ್

ಗುಜರಾತ್ ಚುನಾವಣೆ 'ಫಿಕ್ಸೆಡ್ ಮ್ಯಾಚ್' ಇದ್ದಂತೆ ಎಂದು ಬಣ್ಣಿಸಿರುವ ಹಾರ್ದಿಕ್ ಪಟೇಲ್ ಮರು ಮತಎಣಿಕೆ ನಡೆಸುವಂತೆ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

ಇನ್ನು ಗುಜರಾತಿನ ಜನರು ಒಳ್ಳೆಯವರು. ಆದರೆ ಹಣಬಲ ಮತ್ತು ಕೊಳಕು ತಂತ್ರಗಳ ಮೂಲಕ ಜನರ ಮೇಲೆ ಪ್ರಭಾವ ಬೀರಲಾಯಿತು ಎಂದು ಅವರು ದೂರಿದ್ದಾರೆ.

English summary
Gujarat Assembly Election Results 2017: There has been tampering in EVMs in Surat, Rajkot and Ahmedabad. Hence the gap is very less wherever tampering happened. EVMs are hackable said Hardik Patel in Ahmedabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X