• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ಬಿಜೆಪಿ ಅಭ್ಯರ್ಥಿ ರಿವಾಬಾ ಜಡೇಜಾಗೆ ಹೆಚ್ಚಿದ ಸಂಕಷ್ಟ

|
Google Oneindia Kannada News

ಅಹಮದಾಬಾದ್ ನವೆಂಬರ್ 30: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಜಾಮ್‌ನಗರ ಉತ್ತರ ವಿಧಾನಸಭಾ ಸ್ಥಾನದ ಸ್ಪರ್ಧೆಯು ಹೆಚ್ಚು ಸುದ್ದಿ ಮಾಡುತ್ತಿದೆ. ಏಕೆಂದರೆ ಈ ಕ್ಷೇತ್ರದಲ್ಲಿ ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದರೆ, ರವೀಂದ್ರ ಜಡೇಜಾ ಅವರ ಸಹೋದರಿ ನೈನಾ ಜಡೇಜಾ ಅದೇ ಜಾಮ್‌ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಚಾರ ನಡೆಸುತ್ತಿರುವುದು ಕಂಡುಬಂದಿದೆ. ಮತ್ತೊಂದೆಡೆ, ಮಂಗಳವಾರ ಜಡೇಜಾ ಅವರ ತಂದೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದ ಕಾರಣ ರಿವಾಬ ಜಡೇಜಾ ಅವರ ಕಷ್ಟಗಳು ಹೆಚ್ಚಾಗಿವೆ. ಇದಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಜನ ಖುಷಿ ಪಡುತ್ತಿದ್ದಾರೆ. ಇದರಿಂದ ಮಾವನ ಒಲವು ಕಾಂಗ್ರೆಸ್‌ ಕಡೆಗೆ ಇರುವುದರಿಂದ ರಿವಾಬಾಗೆ ಪತ್ನಿಯ ಸಹಕಾರ ಮಾತ್ರ ಸಿಕ್ಕಂತಾಗಿದೆ.

ಜಾಮ್‌ನಗರ ಜಿಲ್ಲೆಯ ಭಾಗವಾಗಿರುವ ಜಾಮ್‌ನಗರ ಉತ್ತರ ವಿಧಾನಸಭಾ ಕ್ಷೇತ್ರವು 2008 ರ ವಿಂಗಡಣೆಯ ನಂತರ ಅಸ್ತಿತ್ವಕ್ಕೆ ಬಂದಿತು. ಇದು ಜಾಮ್‌ನಗರ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. ಈ ಸ್ಥಾನವನ್ನು 2012 ರಲ್ಲಿ ಕಾಂಗ್ರೆಸ್ ಮತ್ತು 2017 ರಲ್ಲಿ ಬಿಜೆಪಿ ಗೆದ್ದಿತ್ತು. ಭಾರತೀಯ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಬಿಜೆಪಿ ಟಿಕೆಟ್‌ನಲ್ಲಿ ಈ ಸ್ಥಾನದಿಂದ ಸ್ಪರ್ಧಿಸುತ್ತಿದ್ದಾರೆ. ಕ್ರಿಕೆಟಿಗ ಜಡೇಜಾ ಅವರು ವಿಡಿಯೋವನ್ನು ಟ್ವೀಟ್ ಮಾಡಿ ಜಾಮ್‌ನಗರದ ಜನತೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ತಮ್ಮ ಪತ್ನಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ.

ಮಂಗಳವಾರ, ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿಂಗ್ ಜಡೇಜಾ ಅವರು ತಮ್ಮ ಸೊಸೆ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡುತ್ತಿರುವ ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ವಿಡಿಯೋದಲ್ಲಿ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚಿನ ಮತಗಳ ಅಂತರದಿಂದ ಮತ ನೀಡುವಂತೆ ಮನವಿ ಮಾಡುತ್ತಿರುವುದು ಕಂಡುಬಂದಿದೆ.

Gujarat Election: BJP candidate Riwaba Jadeja faces more trouble

ಆದರೆ, ತಮ್ಮ ಪತಿಯ ಸಹೋದರಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವ ಕುರಿತು ರಿವಾಬಾ ಅವರು, ಒಂದೇ ಕುಟುಂಬದ ಪ್ರತಿಸ್ಪರ್ಧಿ ಸಿದ್ಧಾಂತಗಳು ಚುನಾವಣಾ ಪ್ರಚಾರದ ಸಮಯದಲ್ಲಿ ಯಾವುದೇ ಸಮಸ್ಯೆ ಸೃಷ್ಟಿಸಲಿಲ್ಲ. "ನನ್ನ ಗಂಡನ ಸಹೋದರಿ ಬೇರೆ ಕೆಲವು ಸಿದ್ಧಾಂತಗಳಿಂದ ಪ್ರಭಾವಿತರಾಗಿದ್ದಾರೆ ಮತ್ತು ಅದಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಅದೇ ರೀತಿ ನಾನು ಬಿಜೆಪಿಯಿಂದ ಪ್ರಭಾವಿತಳಾಗಿ ನನ್ನ ಕರ್ತವ್ಯಗಳನ್ನು ಮಾಡುತ್ತಿದ್ದೇನೆ. ಕೇವಲ ಆಲೋಚನೆಯಲ್ಲಿ ವ್ಯತ್ಯಾಸವಿದೆ. ವೈಯಕ್ತಿಕವಾಗಿ ನಾವು ಚೆನ್ನಾಗಿದ್ದೇವೆ'' ಎಂದಿದ್ದಾರೆ.

English summary
Ravindra Jadeja's father has requested to vote for the Congress candidate from Jamnagar constituency in the Gujarat assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X