ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣೆ: ದ್ವಾರಕಾದಲ್ಲಿ ಮತ್ತೆ ಬಿಜೆಪಿಗೆ ಗೆಲುವು ಖಚಿತ

|
Google Oneindia Kannada News

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಪ್ರಚಾರ ಶುರು ಮಾಡಿದೆ. ತನ್ನ ಭದ್ರಕೋಟೆಯನ್ನು ಭದ್ರಗೊಳಿಸಲು ಸಕಲ ತಯಾರಿ ಮಾಡಿಕೊಳ್ಳುತ್ತಿದೆ. ತನ್ನ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಹಾಗೂ ಭರವಸೆಗಳನ್ನು ನೀಡುತ್ತಾ ಮತದಾರರನ್ನು ಸೆಳೆಯುತ್ತಿದೆ. ಈ ನಡುವೆ ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದ್ದು ಗೆಲುವಿನ ವಿಶ್ವಾಸ ಹೊಂದಿದೆ. ಇಂತಹ ಕ್ಷೇತ್ರಗಳಲ್ಲಿ ದ್ವರಕಾವೂ ಒಂದು.

ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ದ್ವಾರಕಾ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿಗೆ ಸುರಕ್ಷಿತ ಸ್ಥಾನವೆಂದು ಪರಿಗಣಿಸಲಾಗುತ್ತಿದೆ. ಇದಕ್ಕೆ ಕಾರಣ ಈ ಕ್ಷೇತ್ರದಲ್ಲಿ ಕಳೆದ 32 ವರ್ಷಗಳಲ್ಲಿ ಒಂದೇ ಒಂದು ಚುನಾವಣೆಯಲ್ಲಿ ಅಭ್ಯರ್ಥಿ ಸೋಲನ್ನು ಅನುಭವಿಸಿಲ್ಲ. ಅವರು ಪಬುಭಾ ಮಾಣೆಕ್. ಇವರು ಕಳೆದ 32 ವರ್ಷಗಳಲ್ಲಿ ಒಂದೇ ಒಂದು ಚುನಾವಣೆಯಲ್ಲಿ ಸೋಲದ ಶಾಸಕರು. ಹೀಗಾಗಿ ದೇವಭೂಮಿ ದ್ವಾರಕಾ ಸ್ಥಾನವನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಬಿಜೆಪಿ ಅವರಿಗೆ ವಹಿಸಿದೆ.

1990 ರಿಂದ ಯಾವುದೇ ಚುನಾವಣೆಯಲ್ಲಿ ಸೋಲನ್ನು ಅನಭವಿಸದ ಪಬುಭಾ ಮಾಣೆಕ್ ಮೊದಲ ಮೂರು ಚುನಾವಣೆಗಳಲ್ಲಿ ಸ್ವತಂತ್ರವಾಗಿ (1990, 95, 98) ಗೆದ್ದರು. ನಂತರ ಕಾಂಗ್ರೆಸ್ ಸೇರಿ 2002 ರಲ್ಲಿ ಮತ್ತೆ ಅದೇ ಕ್ಷೇತ್ರದಲ್ಲಿ ಗೆದ್ದರು. ನಂತರ 2007, 2012ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು 2017ರಲ್ಲಿಯೂ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿದ್ದರು. ಕ್ಷೇತ್ರದ ಎಲ್ಲಾ ಸಮುದಾಯದ ಜನರ ಬೆಂಬಲ ಮತ್ತು ಪ್ರೀತಿಯನ್ನು ಪಡೆದ ಅವರು 2017ರಿಂದಲೂ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಈ ಬಾರಿಯೂ ಗೆಲುವು ಸಾಧಿಸುವ ಭರವಸೆಯನ್ನು ಹೊಂದಿದ್ದಾರೆ.

'ಈ ಬಾರಿ ಗೆಲುವು ನಮ್ಮದೆ' ಪಬುಭಾ ಮಾಣೆಕ್

'ಈ ಬಾರಿ ಗೆಲುವು ನಮ್ಮದೆ' ಪಬುಭಾ ಮಾಣೆಕ್

ಕಳೆದ ಎಂಟು ಅವಧಿಗಳಿಂದ ದ್ವಾರಕಾ ಕ್ಷೇತ್ರವನ್ನು ಗೆಲ್ಲುತ್ತಾ ಬಂದಿದ್ದೇನೆ. ಅದರಲ್ಲಿ ಮೂರು ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ, ಜೊತೆಗೆ ಒಮ್ಮೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದೇನೆ. ನಾನು ಎಲ್ಲ ಸಮುದಾಯಗಳ ಪ್ರೀತಿಗೆ ಪಾತ್ರನಾಗಿದ್ದೇನೆ. ಈಗ ಬಿಜೆಪಿಯಲ್ಲಿದ್ದು ಈ ಬಾರಿಯ ಚುನಾವಣೆಯನ್ನೂ ನಾನು ಗೆಲ್ಲುತ್ತೇನೆ ಎಂದು ಪಬುಭಾ ಮಾಣೆಕ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

'ಬಿಜೆಪಿ ಏಕಪಕ್ಷೀಯವಾಗಿ ಗೆಲ್ಲುತ್ತದೆ. ಇಡೀ ಗುಜರಾತ್‌ನಲ್ಲಿ ಬಿಜೆಪಿ ವಿರುದ್ಧ ಯಾವುದೇ ಸ್ಪರ್ಧೆ ಇಲ್ಲ. ಖಂಭಾಲಿಯಾ ಕ್ಷೇತ್ರವನ್ನು ಬಿಜೆಪಿ ಗೆಲ್ಲಲಿದೆ. ಇದು ವಾಸ್ತವ' ಎಂದು ಅವರು ಭವಿಷ್ಯ ನುಡಿದರು.

ಕಾಂಗ್ರೆಸ್ ನಡೆ ಬಿಜೆಪಿಗೆ ಮುಳುವಾಗುವುದೇ?

ಕಾಂಗ್ರೆಸ್ ನಡೆ ಬಿಜೆಪಿಗೆ ಮುಳುವಾಗುವುದೇ?

ಮುಂಬರುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಹೊಸ ಸವಾಲಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಣೆಕ್, 'ರಾಜ್ಯದಲ್ಲಿ ಉಚಿತ ವಿದ್ಯುತ್ ಸೇರಿದಂತೆ ಹಲವು ಉಚಿತ ಭರವಸೆಗಳನ್ನು ನೀಡಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ ಭತ್ಯೆ 1,000 ರೂಪಾಯಿ ನೀಡುವುದಾಗಿ ಹೇಳಿಕೊಂಡಿದೆ. ಇಲ್ಲಿಯ ಜನರು ತಮ್ಮ ಜೀವನೋಪಾಯವನ್ನು ನಡೆಸಲು ಇಷ್ಟು ಕಡಿಮೆ ಪ್ರಮಾಣದ ಭತ್ಯೆಗಳು ಕೆಲಸ ಮಾಡುವುದಿಲ್ಲ. ಚುನಾವಣೆಯಲ್ಲಿ ಒಂದು ಸವಾಲು ಇರುತ್ತದೆ. ಗುಜರಾತಿನಲ್ಲಿ ಉಚಿತ ನೀಡುವ ಭರವಸೆಗಳು ಕೆಲಸ ಮಾಡುವುದಿಲ್ಲ. ಗುಜರಾತಿಗಳು ತಮ್ಮ ಜೀವನೋಪಾಯವನ್ನು ನಡೆಸುವ ಸವಾಲುಗಳನ್ನೆ ಎದುರಿಸುತ್ತಾರೆ. ಆದರೆ ಉಚಿತಗಳು ಇಲ್ಲಿ ಕೆಲಸ ಮಾಡುವುದಿಲ್ಲ' ಎಂದು ಅವರು ಹೇಳಿದರು.

ನಿರುದ್ಯೋಗ ಮತ್ತು ಇತ್ತೀಚಿನ ಮೊರ್ಬಿ ದುರಂತದಂತಹ ಸಮಸ್ಯೆಗಳನ್ನು ಬಂಡವಾಳವಾಗಿಟ್ಟುಕೊಂಡು ಅಧಿಕಾರಕ್ಕೆ ಮರಳುತ್ತಿರುವ ಕಾಂಗ್ರೆಸ್ ಬಗ್ಗೆ ಮಾತನಾಡಿದ ಮಾಣೆಕ್, ಯುವಕರು ಬಿಜೆಪಿಯಲ್ಲಿ ತಮ್ಮ ಭವಿಷ್ಯವನ್ನು ನೋಡುತ್ತಿದ್ದಾರೆ. ಆದರೆ ಹಳೆಯ ಪಕ್ಷ ಅದನ್ನು ಸಹಿಸುತ್ತಿಲ್ಲ. ಯುವಕರಿಗೆ ಕಾಂಗ್ರೆಸ್ ಬೇಡ, ಬಿಜೆಪಿಯವರು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹೀಗಾಗಿ ಯುವಕರಿಗೆ ನಾವೇ ಬೇಕು. ಅವರ ಭವಿಷ್ಯ ನಮ್ಮಲ್ಲಿ ಕಾಣುತ್ತಿದೆ ಎಂದರು.

ಮೊರ್ಬಿಯಲ್ಲಿ ನಡೆದದ್ದು ಅಪಘಾತ

ಮೊರ್ಬಿಯಲ್ಲಿ ನಡೆದದ್ದು ಅಪಘಾತ

ಪ್ರಧಾನಿ ನರೇಂದ್ರ ಮೋದಿ ಅವರು ವಿಧಾನಸಭಾ ಚುನಾವಣೆಯಲ್ಲಿ ಜಾತಿಯ ಅಂಶವನ್ನು ಬಹುತೇಕ ತೊಡೆದುಹಾಕಿದ್ದಾರೆ. ಇದು 2024 ರ ನಂತರ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ ಎಂದು ಮಾಣೆಕ್ ಹೇಳಿದರು. ಮತಯಾಚನೆಯಲ್ಲಿ ಜಾತಿ ಕುರಿತು ಮಾತನಾಡಿದ ಅವರು, 'ಧರ್ಮದ ಆಧಾರದಲ್ಲಿ ದೇಶ ವಿಭಜನೆಯಾದಾಗ ಕಾಂಗ್ರೆಸ್ ಜಾತಿವಾದದ ಬೀಜ ಬಿತ್ತಿತ್ತು. ಆದರೆ ಪ್ರಧಾನಿ ಮೋದಿ ಅದನ್ನು ಕೊನೆಗೊಳಿಸಿದ್ದಾರೆ. ಸೌರಾಷ್ಟ್ರ ಪ್ರದೇಶದಲ್ಲಿ ಯಾವುದೇ ಸಣ್ಣ ಜಾತೀಯತೆ ಉಳಿದಿದ್ದರೂ ಅದು 2024 ರ ನಂತರ ಕೊನೆಗೊಳ್ಳುತ್ತದೆ' ಎಂದರು.

ಮೋರ್ಬಿ ಸೇತುವೆ ಕುಸಿದು 130 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ರಾಜ್ಯ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದರು. ಮೋರ್ಬಿಯಲ್ಲಿ ನಡೆದಿರುವುದು ಅಪಘಾತವಾಗಿದ್ದು, ಇದರಲ್ಲಿ ಸರ್ಕಾರದ ಪಾತ್ರವಿಲ್ಲ ಎಂದು ಅವರು ಹೇಳಿದರು.

ಎಷ್ಟು ಮತಗಳ ಅಂತರದಲ್ಲಿ ಜಯ

ಎಷ್ಟು ಮತಗಳ ಅಂತರದಲ್ಲಿ ಜಯ

2012 ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪಬುಭಾ ಮಾಣೆಕ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಹಿರ್ ಕಂಡೋರಿಯಾ ಮುಲುಭಾಯ್ ರಣಮಲ್ಭಾಯ್ ಅವರನ್ನು 5,616 ಮತಗಳಿಂದ ಸೋಲಿಸಿದರು. ಮಾಣೆಕ್ ಅವರು ಒಟ್ಟು 73,431 ಮತಗಳನ್ನು ಪಡೆದರೆ, ಅಹಿರ್ 67,692 ಮತಗಳನ್ನು ಪಡೆದರು. ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೇಡಂ ರಣಮಲ್ಭಾಯಿ ಲಖುಭಾಯಿ 2,829 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು. ಅಗ್ರ ಮೂರು ಪಕ್ಷಗಳು ಕ್ರಮವಾಗಿ 48.2%, 44.5% ಮತ್ತು 1.9% ಪಡೆದಿವೆ.

English summary
Gujarat Assembly Elections: After 32 years of won Pabubha Manek is confident of winning the Dwaraka constituency again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X