ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್: 70 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

By Mahesh
|
Google Oneindia Kannada News

ಅಹಮದಾಬಾದ್, ನವೆಂಬರ್ 17: ಗುಜರಾತ್ ಬಿಜೆಪಿ ರಾಜ್ಯಾಧ್ಯಕ್ಷ, ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ಸೇರಿದಂತೆ 70 ಮಂದಿ ಅಭ್ಯರ್ಥಿಗಳಿರುವ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷವು ಶುಕ್ರವಾರದಂದು ಪ್ರಕಟಿಸಿದೆ.

ಗುಜರಾತಿನಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ: ಅಮಿತ್ ಶಾಗುಜರಾತಿನಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ: ಅಮಿತ್ ಶಾ

ಜೈನ ಸಮುದಾಯದ ವಿಜಯ್ ರೂಪಾನಿ ಅವರು ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, ಸಂಸದರಾಗಿ ಕರ್ತವ್ಯ ನಿರ್ವಹಿಸಿದ್ದು, ಮತ್ತೊಮ್ಮೆ ಸಿಎಂ ಅಭ್ಯರ್ಥಿಯಾಗಿ ರಾಜ್ ಕೋಟ್ ಪಶ್ಚಿಮ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ.

Gujarat Elections 2017 : BJP announces list of 70 candidates

ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಮೆಹ್ಸಾನಾ ಕ್ಷೇತ್ರ ಹಾಗೂ ಜಿತು ವಗಾನಿ ಅವರು ಭಾವ್ನ್ ನಗರ್ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ನವೆಂಬರ್ 18 ಅಥವಾ 19ರಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವ ಬಗ್ಗೆ ಸುದ್ದಿ ಬಂದಿತ್ತು. ಆದರೆ, ಶುಕ್ರವಾರದಂದೆ ಪ್ರಮುಖ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.

ಗುಜರಾತಿಗೆ ವಿಜಯ್ ರೂಪಾನಿ ಸಿಎಂ, ನಿತಿನ್ ಪಟೇಲ್ ಡಿಸಿಎಂಗುಜರಾತಿಗೆ ವಿಜಯ್ ರೂಪಾನಿ ಸಿಎಂ, ನಿತಿನ್ ಪಟೇಲ್ ಡಿಸಿಎಂ

ಸತತ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿ.ಜೆ.ಪಿ. ಈ ಬಾರಿ ಹಾಲಿ 121 ಶಾಸಕರಲ್ಲಿ 35 ಮಂದಿಗೆ ಟಿಕೆಟ್ ನಿರಾಕರಿಸಲಿದೆ. ಜೊತೆಗೆ 6 ಮಂದಿ ಸಚಿವರಿಗೂ ಸ್ಪರ್ಧೆಗೆ ಅವಕಾಶ ನೀಡದಿರಲು ತೀರ್ಮಾನಿಸಲಾಗಿದೆ ಎಂಬ ಸುದ್ದಿಯಿದೆ.

ಗುಜರಾತಿನಲ್ಲಿ ಡಿಸೆಂಬರ್ 09 ಹಾಗೂ ಡಿಸೆಂಬರ್ 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 18ರಂದು ಫಲಿತಾಂಶ ಹೊರ ಬರಲಿದೆ.

English summary
On Friday, a list of 70 candidates was officially declared by the Bharatiya Janata Party. Chief Minister Vijay Rupani is contesting from Rajkot West seat. Deputy Chief Minister Nitin Patel is from Mehsana and Jitu Vagani Bhavnagar is contesting from the west.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X