ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌರಾಷ್ಟ್ರದ ಪ್ರತಿಷ್ಠಿತ ಕ್ಷೇತ್ರ ಗೆದ್ದ ಸಿಎಂ ವಿಜಯ್ ರೂಪಾನಿ

By Mahesh
|
Google Oneindia Kannada News

ರಾಜ್ ಕೋಟ್, ಡಿಸೆಂಬರ್ 18: ಗುಜರಾತ್ ವಿಧಾನ ಸಭಾ ಚುನಾವಣೆಯಲ್ಲಿ ಸೌರಾಷ್ಟ್ರದ ಪ್ರಮುಖ ವಾಣಿಜ್ಯ ಕ್ಷೇತ್ರ ರಾಜ್ ಕೋಟ್ ನತ್ತ ಎಲ್ಲರ ಕಣ್ಣು ನೆಟ್ಟಿತ್ತು.

ಮುಖ್ಯಮಂತ್ರಿ ವಿಜಯ್ ರೂಪಾನಿ ಹಾಗೂ ಶ್ರೀಮಂತ ಅಭ್ಯರ್ಥಿ ರಾಜ್ಯಗುರು ನಡುವಿನ ಜಿದ್ದಾಜಿದ್ದಿನ ಹೋರಾಟದಲ್ಲಿ ವಿಜಯ್ ಅವರು ಅಂತಿಮವಾಗಿ ಗೆಲುವಿನ ನಗೆ ಬೀರಿದರು.

ಆಸ್ತಿ ಮೌಲ್ಯ ಏರಿಕೆ : ರಾಜ್ಯಗುರುವನ್ನು ಮೀರಿಸಿದ ರೂಪಾನಿಆಸ್ತಿ ಮೌಲ್ಯ ಏರಿಕೆ : ರಾಜ್ಯಗುರುವನ್ನು ಮೀರಿಸಿದ ರೂಪಾನಿ

ಡಿಸೆಂಬರ್ 18ರಂದು ಬೆಳಗ್ಗೆ 8ಕ್ಕೆ ಮತ ಎಣಿಕೆ ಆರಂಭವಾಗುತ್ತಿದ್ದಂತೆ ಆತಂಕದ ಕ್ಷಣಗಳನ್ನು ಎದುರಿಸಿದ್ದ ರೂಪಾನಿ ಅವರು ಭಾರಿ ಅಂತರದಲ್ಲಿ ಜಯಭೇರಿ ಬಾರಿಸಿದ್ದಾರೆ.

Gujarat CM Vijay Rupani Wins from Rajkot West

ನರೇಂದ್ರ ಮೋದಿ ಅವರು ಮೊಟ್ಟ ಮೊದಲ ಬಾರಿಗೆ ತಮ್ಮ ರಾಜಕೀಯ ಜೀವನದಲ್ಲಿ ಚುನಾವಣೆ ಎದುರಿಸಿದ್ದು ಇದೇ ರಾಜ್ ಕೋಟ್ ಪಶ್ಚಿಮ ಕ್ಷೇತ್ರ ಎಂಬುದನ್ನು ಮರೆಯುವಂತಿಲ್ಲ. ಸಿಎಂ ಆಗಿ ಮತ್ತೊಂದು ಅವಧಿಗೆ ಅಧಿಕಾರ ಬಯಸಿದವರ ಪೈಕಿ ಮೋದಿ ನಂತರ ರೂಪಾನಿ ಅವರು ಯಶಸ್ಸು ಸಾಧಿಸಿದ್ದಾರೆ.

ಫಲಿತಾಂಶ(11.25ರಂತೆ): 141 ಕೋಟಿ ರು ಆಸ್ತಿ ಘೋಷಿಸಿದ್ದ ಅತ್ಯಂತ ಶ್ರೀಮಂತ ಅಭ್ಯರ್ಥಿ ಇಂದ್ರನೀಲ್ ರಾಜ್ಯಗುರು ಅವರ ವಿರುದ್ಧ ವಿಜಯ್ ರೂಪಾನಿ ಅವರು 46159 ಮತಗಳನ್ನು ಪಡೆದರೆ, ರಾಜ್ಯಗುರು ಅವರು 25359 ಮತಗಳನ್ನು ಪಡೆದಿದ್ದಾರೆ.

English summary
Gujarat CM Vijay Rupani who was trailing for a while as votes being counted, has won from Rajkot West.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X