ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತಿನಲ್ಲಿ ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ

ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಭಾನುವಾರದಂದು ಬಂಧಿಸಿದೆ. ದಾವೂದ್ ಗ್ಯಾಂಗಿನ ನಾಲ್ವರು ಶಾರ್ಪ್ ಶೂಟರ್ಸ್ ಶನಿವಾರ ಬಂಧಿಸಲಾಗಿತ್ತು.

By Mahesh
|
Google Oneindia Kannada News

ರಾಜ್ ಕೋಟ್, ಫೆಬ್ರವರಿ 26: ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಗುಜರಾತಿನ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಭಾನುವಾರದಂದು ಬಂಧಿಸಿದೆ. ಬಂಧಿತರನ್ನು ವಾಸೀಮ್ ಮತ್ತು ನಾಥಿನ್ ಎಂದು ಗುರುತಿಸಲಾಗಿದ್ದು, ಇಬ್ಬರು ಸೋದರರಾಗಿದ್ದಾರೆ. ದಾವೂದ್ ಗ್ಯಾಂಗಿನ ನಾಲ್ವರು ಶಾರ್ಪ್ ಶೂಟರ್ಸ್ ಶನಿವಾರ ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಪಟಾಕಿ ಉತ್ಪಾದಕರಿಂದ ಸ್ಪೊಟಕ ರಾಸಾಯನಿಕಗಳನ್ನು ಸಂಗ್ರಹಿಸಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ರು ಎಂದು ತಿಳಿದು ಬಂದಿದೆ.[ನಾಲ್ವರು ಶೂಟರ್ ಗಳು ಗುಜರಾತ್ ಗೆ ಬಂದಿದ್ದೇಕೆ?]

Gujarat ATS arrests two ISIS operatives

ಕಳೆದ ತಿಂಗಳು ಎನ್​ಐಎ ಕೇರಳದ ವ್ಯಕ್ತಿಯೊಬ್ಬನನ್ನು ಐಸಿಸ್ ಸಂಘಟನೆಯೊಂದಿಗೆ ಸಂಪರ್ಕ ಇರುವ ಆರೋಪದ ಮೇಲೆ ಬಂಧಿಸಿದ್ದರು. ಕಳೆದ ವರ್ಷ ರಾಜಸ್ಥಾನದಲ್ಲಿ ಐಸಿಸ್ ಸಂಘಟನೆಯೊಂದಿಗೆ ನಂಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿತ್ತು.[ಗುಜರಾತಿನ ಕಚ್ ನಲ್ಲಿ ಐಎಸ್ಐ ಏಜೆಂಟ್ ಗಳ ಬಂಧನ]

ಐಸಿಸ್ ಉಗ್ರರು ಅಪಹರಿಸಿದ್ದ ಡಾ. ರಾಮಮೂರ್ತಿ ಅವರು ಭಾರತಕ್ಕೆ ಮರಳಿದ್ದು, ಐಸಿಸ್ ಉಗ್ರರ ಯೋಜನೆ ಬಗ್ಗೆ ಮಾತನಾಡಿದ್ದಾರೆ. ಭಾರತದಲ್ಲಿ ದಾಳಿ ನಡೆಸಲು ಯೋಜನೆ ರೂಪಿಸುತ್ತಿದ್ದಾರೆ. ಭಾರತವನ್ನು ಐಸಿಸ್ ನೆಲೆಯಾಗಿಸಲು ಅವರು ಯೋಜನೆ ರೂಪಿಸುತ್ತಿದ್ದಾರೆ ಎಂದಿದ್ದಾರೆ.

ಇರಾಕಿ ಉಗ್ರರ ಸಂಘಟನೆಯಲ್ಲಿ ಉತ್ತಮ ಶಿಕ್ಷಣ ಪಡೆದಿರುವ ಯುವಕರಿದ್ದಾರೆ. ಭಾರತದ ಆರ್ಥಿಕ, ಶಿಕ್ಷಣ, ಸಾಮಾಜಿಕ ವ್ಯವಸ್ಥೆ, ಸಮಸ್ಯೆ, ಪ್ರಗತಿ ಬಗ್ಗೆ ವಿಶ್ಲೇಷಣೆ ಮಾಡುತ್ತಿರುತ್ತಾರೆ ಎಂದು ಹೇಳಿದರು. (ಎಎನ್ಐ)

English summary
The Gujarat Anti Terror Squad (ATS) has arrested two brothers from the state for their involvement in activities related to the terror group ISIS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X