ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ನಲ್ಲಿ ಬಿಜೆಪಿಯಿಂದ 'ಮನ್ ಕೀ ಬಾತ್, ಚಾಯ್ ಕೆ ಸಾಥ್'

By ಮಾಧುರಿ ಅದ್ನಾಳ್
|
Google Oneindia Kannada News

ಅಹಮದಾಬಾದ್, ನವೆಂಬರ್ 26: ವಿಧಾನಸಭೆ ಚುನಾವಣೆ ನಡೆಯಲಿರುವ ಗುಜರಾತ್ ನಲ್ಲಿ ಇಂದು ಬಿಜೆಪಿ ಕಾರ್ಯಕರ್ತರು ಚಹಾದ ಜತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 'ಮನ್ ಕೀ ಬಾತ್' ಕಾರ್ಯಕ್ರಮ ಆಲಿಸಿದರು.

ಗುಜರಾತ್ ನಲ್ಲಿ 2.2 ಕೋಟಿ ರೂ ಮೌಲ್ಯದ 75,968 ಬಾಟಲ್ ಮದ್ಯ ವಶಗುಜರಾತ್ ನಲ್ಲಿ 2.2 ಕೋಟಿ ರೂ ಮೌಲ್ಯದ 75,968 ಬಾಟಲ್ ಮದ್ಯ ವಶ

ಮತದಾರರನ್ನು ಸೆಳೆಯಲು ಹಮ್ಮಿಕೊಂಡಿದ್ದ ಈ 'ಮನ್ ಕೀ ಬಾತ್, ಚಾಯ್ ಕೆ ಸಾಥ್' ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಹಣಕಾಸು ಸಚಿವ ಅರುಣ್ ಜೇಟ್ಲಿ ಸೇರಿದಂತೆ ಹಲವು ಬಿಜೆಪಿ ನಾಯಕರು ಭಾಗವಹಿಸಿದ್ದರು.

Gujarat Assembly Elections 2017: Shah attends 'Mann ki Baat, Chai Ke Saath' program

182 ವಿಧಾನಸಭಾ ಕ್ಷೇತ್ರಗಳ ಎಲ್ಲಾ 50,128 ಬೂತ್ ಗಳಲ್ಲಿ ಈ ಕಾರ್ಯಕ್ರಮ ನಡೆಯಿತು. ಅಮಿತ್ ಶಾ ದರಿಯಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಜೇಟ್ಲಿ ಸೂರತ್ ಪಶ್ಚಿಮ ಕ್ಷೇತ್ರದ ಅದಜಾನ್ ಪ್ರದೇಶದ ಜನರ ಜತೆ ಕಾರ್ಯಕ್ರಮ ಆಲಿಸಿದರು.

ಹಾರ್ದಿಕ್ ವಿರುದ್ಧ ತೊಡೆ ತಟ್ಟಿದ ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲಹಾರ್ದಿಕ್ ವಿರುದ್ಧ ತೊಡೆ ತಟ್ಟಿದ ಎನ್‌ಆರ್‌ಐ ಪಟೇಲರಿಂದ ಬಿಜೆಪಿಗೆ ಬೆಂಬಲ

ಕೇಂದ್ರ ಸಚಿವರಾದ ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಉಮಾ ಭಾರತಿ, ಸ್ಮೃತಿ ಇರಾನಿ, ಜುಯಲ್ ಓರಂ, ಪರ್ಶೋತ್ತಮ್ ರೂಪಾಲ, ರಾಜ್ಯ ಬಿಜೆಪಿ ಅಧ್ಯಕ್ಷ ಜೀತು ವಘಾನಿ, ಮುಖ್ಯಮಂತ್ರಿ ವಿಜಯ್ ರೂಪಾಣಿ, ಗುಜರಾತ್ ಸಚಿವರು ಮತ್ತು ಶಾಸಕರು ಭಾಗವಹಿಸಿದ್ದರು.

ನವೆಂಬರ್ 27ರಿಂದ ಆರಂಭವಾಗಿ 29ರವರೆಗೆ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಲ್ಲಿ ಮೂರು ದಿನಗಳ ಪ್ರವಾಸ ನಡೆಸಲಿದ್ದು ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದಕ್ಕೂ ಮೊದಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಡಿಸೆಂಬರ್ 9 ಮತ್ತು 14ರಂದು ಗುಜರಾತ್ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದ್ದು 18ರಂದು ಮತಎಣಿಕೆ ನಡೆಯಲಿದೆ.

English summary
Several senior BJP leaders, including Arun Jaitley and Amit Shah, tuned in to Prime Minister's monthly radio show 'Mann Ki Baat' over cups of chai in poll-bound Gujarat. BJP has planned a programme called Mann ki Baat, Chai ke Saath to enthrall voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X