LIVE - ಗುಜರಾತ್ ನಲ್ಲಿ 2 ಗಂಟೆ ವೇಳೆಗೆ ಶೇ. 47.40 ಮತದಾನ

Subscribe to Oneindia Kannada

ಅಹಮದಾಬಾದ್, ಡಿಸೆಂಬರ್ 14: ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು ನಡೆಯುತ್ತಿದೆ. ಒಟ್ಟು 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ಇಂದು ಜನರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಡಿಸೆಂಬರ್ 18ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ.

ಇದು ಪ್ರಜಾಪ್ರಭುತ್ವದ ಹಬ್ಬ. ಅತಿಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಹಬ್ಬವನ್ನು ಸಂಪನ್ನ ಮಾಡಬೇಕೆಂದು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಟ್ವಿಟ್ಟರ್ ಮುಖಾಂತರ ಗುಜರಾತ್ ಮತದಾರರನ್ನು ಸ್ವಾಗತಿಸಿದ್ದಾರೆ.

Gujarat assembly elections-2017 Second Phase voting Live updates

ನಿಮ್ಮ ಮತದಲ್ಲಿ ಅಪಾರ ಶಕ್ತಿಯಿದೆ, ಅದನ್ನು ಅವಗಣನೆ ಮಾಡದಿರಿ. ಪ್ರತಿಯೊಂದು ಮತವೂ ಬದಲಾವಣೆಯನ್ನು ತರುತ್ತದೆ ಎಂದು ಮಾಜಿ ವಿತ್ತ ಸಚಿವ ಪಿ ಚಿದಂಬರಂ ಟ್ವಿಟ್ಟರಲ್ಲಿ ಸಂದೇಶ ಕೊಟ್ಟಿದ್ದಾರೆ. ಈ ಸಂದೇಶಕ್ಕೆ ಇದುವರೆಗೆ 151 ರಿಟ್ವೀಟ್, 396 ಲೈಕ್ಸ್, 26 ಪ್ರತಿಕ್ರಿಯೆಗಳು ಬಂದಿವೆ.

ಈ ಬಗ್ಗೆ ಕ್ಷಣ ಕ್ಷಣದ ಮಾಹಿತಿಗಳು ಇಲ್ಲಿವೆ...

ಮಧ್ಯಾಹ್ನ 3-00: 2 ಗಂಟೆ ವೇಳೆಗೆ ಶೇಕಡಾ 47.40 ಮತದಾನವಾಗಿದೆ ಎಂದು ಗುಜರಾತ್ ಮುಖ್ಯ ಚುನಾವಣಾ ಆಯುಕ್ತ ಬಿಬಿ ಸ್ವಾನ್ ಹೇಳಿದ್ದಾರೆ.

ಮಧ್ಯಾಹ್ನ 1-45: ಅಹಮದಾಬಾದ್ ಜಿಲ್ಲೆಯ ಜಮಲ್ಪುರ್ ಖಾಂಡಿಯಾದಲ್ಲಿ ಹಿರಿಯ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿಯವರಿಂದ ಮತದಾನ.

ಮಧ್ಯಾಹ್ನ 1-30: ಮಧ್ಯಾಹ್ನ 12 ಗಂಟೆ ವೇಳೆಗೆ ಗುಜರಾತ್ ನಲ್ಲಿ ಶೇಕಡಾ 39ರಷ್ಟು ಮತದಾನ

ಮಧ್ಯಾಹ್ನ 1-15: ಮತದಾನದ ನಂತರ ರೋಡ್ ಶೋ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಬಹುಶಃ ಚುನಾವಣಾ ಆಯೋಗವೂ ಅವರ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಂತಿದೆ: ಕಾಂಗ್ರೆಸ್ ಮುಖಂಡ ಅಶೋಕ್ ಗೆಹ್ಲೋಟ್ ಹೇಳಿಕೆ

ಮಧ್ಯಾಹ್ನ 1-00: ವಡೋದರದ ಅಕೋಟದಲ್ಲಿ ಮಾಜಿ ಕ್ರಿಕೆಟಿಗ ನಯನ್ ಮೊಂಗಿಯಾ ಮತದಾನ.

ಮಧ್ಯಾಹ್ನ 12-18: ರಾಣಿಪ್ ನಲ್ಲಿ ಮತಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ

Gujarat assembly elections-2017 Second Phase voting Live updates

ಮಧ್ಯಾಹ್ನ 12-15: ಮತಚಲಾಯಿಸಲು ರಾಣಿಪ್ ನಲ್ಲಿ ಜನರೊಂದಿಗೆ ಸಾಲಿನಲ್ಲಿ ನಿಂತಿರುವ ಪ್ರಧಾನಿ ನರೇಂದ್ರ ಮೋದಿ.

ಮಧ್ಯಾಹ್ನ 12-10: ಸಾಬರಮತಿಯ ರಾಣಿಪ್ ನ 115ನೇ ಮತಗಟ್ಟೆಯಲ್ಲಿ ಮತಚಲಾಯಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ.

ಬೆಳಿಗ್ಗೆ 11-45: ಗಾಂಧಿನಗರದಲ್ಲಿ ಮತಚಲಾಯಿಸಿದ ಕಾಂಗ್ರೆಸ್ ನಾಯಕ ಶಕ್ತಿಸಿನ್ಹಾ ಗೋಹಿಲ್.

ಬೆಳಿಗ್ಗೆ 11-10: ಆನಂದ್ ನಲ್ಲಿ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಭರತ್ ಸಿನ್ಹಾ ಸೋಲಂಕಿಯಿಂದ ಮತಚಲಾವಣೆ.

ಬೆಳಿಗ್ಗೆ 11-25: ಗುಜರಾತ್ ನಲ್ಲಿ ಮೊದಲ ಮೂರು ಗಂಟೆಯಲ್ಲಿ ಅಂದಾಜು ಶೇಕಡಾ 30ರಷ್ಟು ಮತದಾನವಾಗಿದೆ.

ಬೆಳಿಗ್ಗೆ 10-55: ಅಹಮದಾಬಾದ್ ನಲ್ಲಿ ಮೊದಲ ಎರಡು ಗಂಟೆಯಲ್ಲಿ ಶೇ. 9.6 ಮತದಾನವಾಗಿದೆ.

ಬೆಳಿಗ್ಗೆ 10-45: ಮೆಹ್ಸಾನಾದ ಜಾದಿಯಲ್ಲಿ ಮತದಾನ ಮಾಡಿದ ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್. ಅವರು ಕಾಂಗ್ರೆಸ್ ನ ಜೀವಭಾಯ್ ಪಟೇಲ್ ವಿರುದ್ಧ ಚುನಾವಣೆಗೆ ನಿಂತಿದ್ದಾರೆ.

ಬೆಳಿಗ್ಗೆ 10-30: ವೀರಂಗಂ ನಲ್ಲಿ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿಯ(PAAS) ಹಾರ್ದಿಕ್ ಪಟೇಲ್ ರಿಂದ ಮತಚಲಾವಣೆ

ಬೆಳಿಗ್ಗೆ 10-00: ಅಹ್ಮದಾಬಾದಿನಲ್ಲಿ ಜನಸಾಮಾನ್ಯರೊಡನೆ ಸಾಲಿನಲ್ಲಿ ನಿಂತು ಮತಚಲಾಯಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ

ಬೆಳಿಗ್ಗೆ 9-45: ನರನ್ಪುರದಲ್ಲಿ ಮತಚಲಾಯಿಸಿದ ನಮತರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಸುತ್ತುವರಿದ ಪತ್ರಕರ್ತರು.

ಬೆಳಿಗ್ಗೆ 9-40: ಗಾಂಧಿನಗರದಲ್ಲಿ ಮತಚಲಾಯಿಸಿದ ಜನವಿಕಲ್ಪ ಮೋರ್ಚಾ ಮುಖಂಡ ಶಂಕರ್ ಸಿಂಗ್ ವಘೇಲಾ

ಬೆಳಿಗ್ಗೆ 9-20:ನರನ್ಪುರ ಮತಗಟ್ಟೆಯಲ್ಲಿ ಮತಚಲಾಯಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

Gujarat assembly elections-2017 Second Phase voting Live updates

ಬೆಳಿಗ್ಗೆ 9-00: ಗಾಂಧಿನಗರದ ಮತಗಟ್ಟೆಯಲ್ಲಿ ಪ್ರಧಾನಿ ಮೋದಿ ತಾಯಿ ಹೀರಾಬೆನ್ ರಿಂದ ಮತಚಲಾವಣೆ.

ಬೆಳಿಗ್ಗೆ 8-35: ಗಾಂಧಿನಗರದಲ್ಲಿ ಮತಚಲಾಯಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್.

ಬೆಳಿಗ್ಗೆ 8-25: ಅಹಮದಾಬಾದ್ ನ ಘಟ್ಲೋಡಿಯಾದಲ್ಲಿ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ರಿಂದ ಮತ ಚಲಾವಣೆ.

ಬೆಳಿಗ್ಗೆ 8-05: ಮತದಾನಕ್ಕೂ ಮುನ್ನ ಹಾರ್ದಿಕ್ ಪಟೇಲ್ ಪೋಷಕರಿಂದ ಪ್ರಾರ್ಥನೆ.

Gujarat assembly elections-2017 Second Phase voting Live updates

ಬೆಳಿಗ್ಗೆ 8-00: 93ಕ್ಷೇತ್ರಗಳಲ್ಲಿ ಮತದಾನ ಆರಂಭ.

ಬೆಳಿಗ್ಗೆ 7-45: ಇಂದು ನಡೆಯಲಿರುವ ಮತದಾನ ಹಲವರ ಹಣೆಬರಹ ನಿರ್ಧರಿಸಲಿದೆ. ಪ್ರಮುಖವಾಗಿ ಮೆಹ್ಸಾನಾದಿಂದ ಸ್ಪರ್ಧಿಸುತ್ತಿರುವ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಗೃಹ ಸಚಿವ ಪ್ರದೀಪ್ ಸಿನ್ಹಾ ಜಡೇಜಾ, ಆರೋಗ್ಯ ಸಚಿವ ಶಂಕರ್ ಚೌಧರಿ ಸೇರಿದಂತೆ ಹಲವಾರು ಸಚಿವರ ಭವಿಷ್ಯಕ್ಕೆ ಮತದಾರರು ಮುನ್ನುಡಿ ಬರೆಯಲಿದ್ದಾರೆ.

ವಿರೋಧ ಪಕ್ಷಗಳ ಕಡೆಯಿಂದ ಒಬಿಸಿ ನಾಯಕ ಅಲ್ಪೇಶ್ ಠಾಕೂರ್ ರಾಧನ್ ಪುರ್ ನಿಂದ ಸ್ಪರ್ಧಿಸುತ್ತಿದ್ದರೆ ಜಿಗ್ನೇಶ್ ಮೇವಾನಿ ವಡ್ಗಾಮ್ ನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಬೆಳಿಗ್ಗೆ 6-45: ಎಲ್ಲಾ ಮತಗಟ್ಟೆಗಳಲ್ಲಿ ಸಿಬ್ಬಂದಿಗಳಿಂದ ಅಂತಿಮ ತಯಾರಿ. ಮತದಾನಕ್ಕೆ ಕ್ಷಣಗಣನೆ. 8 ಗಂಟೆಗೆ ಮತದಾನ ಆರಂಭ.

Gujarat assembly elections-2017 Second Phase voting Live updates

ಬೆಳಿಗ್ಗೆ 6-30: 14 ಜಿಲ್ಲೆಗಳ 93 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಲಿದೆ. 851 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2.22 ಕೋಟಿ ಮತದಾರರು ಮತ ಚಲಾವಣೆಯ ಹಕ್ಕು ಹೊಂದಿದ್ದಾರೆ.

182 ಸದಸ್ಯ ಬಲದ ವಿಧಾನಸಭೆಗೆ ಡಿಸೆಂಬರ್ 9ರಂದು ಮೊದಲ ಹಂತದ ಮತದಾನ ನಡೆದಿತ್ತು. 89 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ. 66.75ರಷ್ಟು ಜನರು ಮತ ಚಲಾಯಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Gujarat assembly elections-2017 Second Phase voting Live updates are here. Voting begins today (December 14) at the poll stations to elect 93 members from 14 districts to Gujarat legislative assembly. Results will be announced on December 18.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ