ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ಚುನಾವಣಾ ಫಲಿತಾಂಶ : ಬಿಜೆಪಿಗೆ ಸರಳ ಬಹುಮತ

By Prasad
|
Google Oneindia Kannada News

Recommended Video

ಗುಜರಾತ್ ಚುನಾವಣೆ ಫಲಿತಾಂಶ 2017 : ಕ್ಷಣಗಣನೆ ಆರಂಭ | Oneindia Kannada

ಅಹ್ಮದಾಬಾದ್, ಡಿಸೆಂಬರ್ 18 : ಭಾರೀ ತುರುಸಿನ ಸ್ಪರ್ಧೆ ಕಂಡಿದ್ದ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಸಂಪೂರ್ಣವಾಗಿ ಹೊರಬಿದ್ದಿದ್ದು, ಭಾರತೀಯ ಜನತಾ ಪಕ್ಷ 99 ಸ್ಥಾನಗಳನ್ನು ಗಳಿಸಿ ಸರಳ ಬಹುಮತ ಪಡೆದಿದೆ.

ತೀವ್ರ ಪೈಪೋಟಿ ನೀಡಿದ ಕಾಂಗ್ರೆಸ್ 77 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ, ಭಾರತೀಯ ಜನತಾ ಪಕ್ಷದ ನಾಯಕರಿಗೆ ಬೆವರು ಇಳಿಯುವಂತೆ ಮಾಡಿದೆ. ಕೊನೆಯವರೆಗೂ ರೋಚಕತೆ ಕಾಪಾಡಿದ ಫಲಿತಾಂಶ, ಹಲವಾರು ಬಾರಿ ಏರಿಳಿತ ಕಂಡಿತು. 1 ಕ್ಷೇತ್ರ ಎನ್‌ಸಿಪಿ ಪಾಲಾದರೆ, 5 ಕ್ಷೇತ್ರಗಳು ಇತರರು ಗೆದ್ದುಕೊಂಡಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆ 2017
ಪಕ್ಷ W 2012
ಬಿಜೆಪಿ 99 115
ಕಾಂಗ್ರೆಸ್ 77 61
ಜಿಪಿಪಿ 0 2
ಎನ್‌ಸಿಪಿ 1 2
ಇತರೆ 5 2

ಆರಂಭದಲ್ಲಿ ಬಿಜೆಪಿ ಮುನ್ನಡೆಯನ್ನು ಕಂಡಿದ್ದರೂ, ಮತಎಣಿಕೆ ಕೊನೆಯ ಹಂತ ತಲುಪಿದಾಗ 80ರ ಆಸುಪಾಸಿನಲ್ಲಿ ಎರಡೂ ಪಕ್ಷಗಳು ಸಮಬಲದ ಹೋರಾಟ ಮಾಡಿದ್ದವು. ಅಂತಿಮ ನಗೆ ಬಿಜೆಪಿಯದ್ದಾಗಿದೆ. ಕಾಂಗ್ರೆಸ್ ವೀರೋಚಿತ ಸೋಲು ಕಂಡಿದೆ.

LIVE : ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶLIVE : ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ

1.15 : ಸರಳ ಬಹುಮತದ ಹಾದಿಯಲ್ಲಿ ಭಾರತೀಯ ಜನತಾ ಪಕ್ಷ. ಬಹುಮತಕ್ಕೆ ಬೇಕಿರುವುದು 92 ಸ್ಥಾನಗಳು. ಬಿಜೆಪಿ - 101, ಕಾಂಗ್ರೆಸ್ - 77 ಮತ್ತು ಇತರೆ - 4.

11.16 : ಹಿಂದುಳಿದ ವರ್ಗಗಳ ಪ್ರತಿನಿಧಿ ಅಲ್ಪೇಶ್ ಠಾಕೂರ್ ಮತ್ತು ದಲಿತರ ನಾಯಕ ಜಿಗ್ನೇಶ್ ಮೇವಾನಿ ಅವರಿಗೆ ಭರ್ಜರಿ ಗೆಲುವು ದಕ್ಕಿದೆ.

10.39 : ಮೊದಲ ಗೆಲುವು ದಾಖಲಿಸಿದ ಬಿಜೆಪಿ. ಎಲ್ಲಿಸ್ ಬ್ರಿಜ್ ಕ್ಷೇತ್ರದಲ್ಲಿ ಬಿಜೆಪಿಯ ರಾಕೇಶ್ ಭಾಯ್ ಶಾ ಅವರು ಗೆದ್ದಿದ್ದಾರೆ.

9.56 : ಬಿಜೆಪಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ರಾಜಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್ ಎದುರಾಳಿ ವಿರುದ್ಧ 7,600 ಮತಗಳ ಮುನ್ನಡೆ ಕಂಡುಕೊಂಡಿದ್ದಾರೆ.

9.38 : ಬಿಜೆಪಿ - 96, ಕಾಂಗ್ರೆಸ್ - 84, ಇತರೆ - 2. ಟ್ವೆಂಟಿ ಟ್ವಂಟಿ ಮ್ಯಾಚ್ ತರಹ ಗುಜರಾತ್ ಚುನಾವಣೆ ಫಲಿತಾಂಶ ರೋಚಕತೆಯನ್ನು ಮೂಡಿಸಿದೆ.

9.27 : ಬಿಜೆಪಿ - 86, ಕಾಂಗ್ರೆಸ್ - 83, ಇತರೆ - 1. ಯಾರು ಗೆಲ್ಲಬಹುದು? ಯಾರು ಮಣ್ಣು ಮುಕ್ಕಬಹುದು?

9.15 : ಇಲ್ಲಿ ಎಲ್ಲವೂ ಇದ್ದಕ್ಕಿದ್ದಂತೆ ಉಲ್ಟಾಪುಲ್ಟಾ ಆಗಿದೆ. ಪ್ರಥಮ ಬಾರಿಗೆ ಕಾಂಗ್ರೆಸ್ ಬಿಜೆಪಿಗಿಂತ ಮುಂದಿದೆ. ಕಾಂಗ್ರೆಸ್ - 89, ಬಿಜೆಪಿ - 76.

9.00 : ಗುಜರಾತ್ ಚುನಾವಣಾ ನಾಟಕ ರಂಗದಲ್ಲಿ ಕ್ಷಣಕ್ಷಣಕ್ಕೂ ಬಣ್ಣಗಳು ಬದಲಾಗುತ್ತಿವೆ. ತಕ್ಕಡಿ ಒಂದು ಬಾರಿ ಬಿಜೆಪಿಯತ್ತ ತೂಗಿದರೆ, ಮತ್ತೊಂದು ಬಾರಿ ಕಾಂಗ್ರೆಸ್ಸಿನಲ್ಲಿ ತೂಗುತ್ತಿದೆ. ಬಿಜೆಪಿ - 90, ಕಾಂಗ್ರೆಸ್ - 80.

8.55 : ರಾಜಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ವಿಜಯ್ ರೂಪಾನಿ ಅವರಿಗೆ ಹಿನ್ನಡೆಯುಂಟಾಗಿದೆ. ಈ ಕ್ಷೇತ್ರ ಪಾಟಿದಾರ್ ಸಮುದಾಯದವರು ಪ್ರಬಲವಾಗಿರುವ ಕ್ಷೇತ್ರ.

8.50 : ಬಿಜೆಪಿ ಮುನ್ನಡೆಯಲ್ಲಿ ಸೆಂಚುರಿ ಬಾರಿಸಿದ್ದು, ಈ ಎಲ್ಲ ಕ್ಷೇತ್ರಗಳಲ್ಲಿ ಗೆದ್ದಿದ್ದೇ ಆದರೆ, 6ನೇ ಬಾರಿ ಸರಕಾರ ರಚಿಸುವುದು ಖಚಿತ.

8.38 : ಬಿಜೆಪಿ ವಿರುದ್ಧ ಸಿಡಿದೆದ್ದಿದ್ದ ಪಾಟಿದಾರ್ ಸಮುದಾಯ ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಮುಂದಿದ್ದು, ಮೆಹಸಾನದಲ್ಲಿ ಬಿಜೆಪಿಯ ವಿಜಯ್ ರೂಪಾಣಿ, ಪೋರಬಂದರ್ ದಲ್ಲಿ ಕಾಂಗ್ರೆಸ್ ನಾಯಕ ಅರ್ಜುನ್ ಮೊಡವಾಡಿಯಾ ಹಿಂದಿದ್ದಾರೆ.

8.33 : ಸಂಖ್ಯೆಗಳು ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಬಿಜೆಪಿ 51 ಕ್ಷೇತ್ರಗಳಲ್ಲಿ ಮುಂದಿದ್ದರೆ, ಕಾಂಗ್ರೆಸ್ 28ರಲ್ಲಿ ಮುಂದಿದೆ.

8.30 : ವಡಗಾಮ್ ನಲ್ಲಿ ಕಾಂಗ್ರೆಸ್ ಸೇರಿರುವ ದಲಿತ ಮುಖಂಡ ಜಿಗ್ನೇಶ್ ಮೇವಾನಿ ಅವರು ಮುನ್ನಡೆ ಸಾಧಿಸಿದ್ದಾರೆ.

8.27 : ರಾಜಕೋಟ್ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ವಿಜಯ್ ರೂಪಾನಿ ಮುನ್ನಡೆ ಸಾಧಿಸಿದ್ದಾರೆ.

8.25 : ಮತಎಣಿಕೆ ಆರಂಭವಾಗಿ 25 ಕಳೆಯುವುದರೊಳಗೆ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡು 11 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸಮಬಲ ಸಾಧಿಸಿವೆ.

8.00 : ಗುಜರಾತ್ ನಲ್ಲಿ ಮತಎಣಿಕೆ ಆರಂಭವಾಗಿದ್ದು, ಭಾರತೀಯ ಜನತಾ ಪಕ್ಷ 6 ಮತ್ತು ಕಾಂಗ್ರೆಸ್ 2ರಲ್ಲಿ ಮುನ್ನಡೆ ಸಾಧಿಸಿವೆ.

ಒಟ್ಟು 182 ಕ್ಷೇತ್ರಗಳಲ್ಲಿ ಯಾವುದೇ ಪಕ್ಷಕ್ಕೆ ಸರಳ ಬಹುಮತ ಸಿಗಬೇಕಾದರೆ 92 ಕ್ಷೇತ್ರಗಳಲ್ಲಿ ಗೆಲ್ಲಲೇಬೇಕು. ಚುನಾವಣಾಪೂರ್ವ ಸಮೀಕ್ಷೆಗಳಾಗಲಿ, ಚುನಾವಣೋತ್ತರ ಸಮೀಕ್ಷೆಗಳಾಗಲಿ ಬಿಜೆಪಿಯೇ ಗೆಲ್ಲುತ್ತದೆ ಎಂದು ಹೇಳಿವೆ. ಆದರೆ, ಏನು ಬೇಕಾದರೂ ಆಗಬಹುದು ಎಂದು ಹಿಂದಿನ ಚುನಾವಣೆಗಳು ಎಚ್ಚರಿಕೆ ನೀಡಿವೆ.

Gujarat Assembly Elections 2017 results LIVE updates

ಸರಿಯಾಗಿ 8 ಗಂಟೆಗೆ ಎಲೆಕ್ಟ್ರಾನಿಕ್ ಮತ ಎಂತ್ರಗಳ ಮತಎಣಿಕೆ ಆರಂಭವಾಗಲಿದೆ. ಇವಿಎಂನಲ್ಲಿ ದೋಷಗಳಿವೆ ಎಂದು ಆರೋಪಿಸಿದ್ದರಿಂದ ಯಾವುದೇ ಗೊಂದಲ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಮತಎಣಿಕೆ ಕೇಂದ್ರಗಳಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ.

English summary
Gujarat Assembly Elections 2017 results LIVE updates on Oneindia Kannada. Read latest trends, who won who lost, who will form govt etc in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X