ಎಬಿಪಿ ನ್ಯೂಸ್ ಸಮೀಕ್ಷೆ : ಗುಜರಾತ್ ನಲ್ಲಿ ಬಿಜೆಪಿಗೆ ಸುಲಭವಲ್ಲ ಜಯ!

Posted By:
Subscribe to Oneindia Kannada
   ಗುಜರಾತ್ ವಿಧಾನಸಭಾ ಚುನಾವಣೆ 2017 : ಸಮೀಕ್ಷೆಯ ಭವಿಷ್ಯ | Oneindia Kannada

   ನವದೆಹಲಿ, ಡಿಸೆಂಬರ್ 05 : ಹೃದಯದಲ್ಲಿ ಅಳುಕನ್ನು ಇಟ್ಟುಕೊಂಡೇ ಮನದಲ್ಲಿ ಮಂಡಿಗೆ ಮೆಲ್ಲುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಗುಜರಾತ್ ನಲ್ಲಿ ಭಾರೀ ಅಚ್ಚರಿ ಮೂಡಿಸುವಂಥ, ಹೃದಯ ಬಡಿತ ಹೆಚ್ಚಿಸುವಂಥ ಸುದ್ದಿ ಚುನಾವಣಾ ಸಮೀಕ್ಷೆಯೊಂದರಿಂದ ಹೊರಬಿದ್ದಿದೆ.

   182 ವಿಧಾನಸಭಾ ಕ್ಷೇತ್ರಗಳಲ್ಲಿ ನೂರಾಐವತ್ತಲ್ಲ, ನೂರಾಅರವತ್ತೈದು ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆಂಬ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಅಮಿತ್ ಶಾ ಅವರಿಗೆ ಎಬಿಪಿ ನ್ಯೂಸ್ ಮತ್ತು ಸಿಎಸ್‌ಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಮುಟ್ಟಿ ನೋಡಿಕೊಳ್ಳುವಂಥ ಅಚ್ಚರಿಯನ್ನು ಹೊರಹಾಕಿದೆ.

   ಟೈಮ್ಸ್ ನೌ- ವಿಎಂಆರ್ ಸಮೀಕ್ಷೆಯಲ್ಲೂ ಗುಜರಾತ್ ನಲ್ಲಿ ಬಿಜೆಪಿಗೆ ಬಹುಮತ

   ನರೇಂದ್ರ ಮೋದಿ ನೇತೃತ್ವದಲ್ಲಿ ಗುಜರಾತ್ ನಲ್ಲಿ ಭಾರತೀಯ ಜನತಾ ಪಕ್ಷ ಕಳೆದ 22 ವರ್ಷಗಳಿಂದ ಆಡಳಿತ ನಡೆಸಿಕೊಂಡು ಬಂದಿದೆ. ಪ್ರತಿ ಚುನಾವಣೆಯಲ್ಲಿ ಭಾರೀ ಜಯಭೇರಿ ಬಾರಿಸುತ್ತಿದ್ದ ಬಿಜೆಪಿಗೆ ಈ ಬಾರಿ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ತುರುಸಿನ ಟಕ್ಕರ್ ನೀಡಲಿದೆ ಎಂದು ತಿಳಿದುಬಂದಿದೆ.

   ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ: ಗುಜರಾತ್ ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ

   ಗುಜರಾತ್ ನಲ್ಲಿ ಡಿಸೆಂಬರ್ 9 ಮತ್ತು 14ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 18ರಂದು ಫಲಿತಾಂಶ ಹೊರಬೀಳಲಿದೆ. ಈ ಫಲಿತಾಂಶ, ಎಬಿಪಿ ನ್ಯೂಸ್ ನಡೆಸಿರುವ ಸಮೀಕ್ಷೆಯ ಪ್ರಕಾರ, ಅಮಿತ್ ಶಾ ಮತ್ತು ನರೇಂದ್ರ ಮೋದಿಯವರ ನಗೆಯನ್ನು ಕಸಿದುಕೊಳ್ಳಲಿದೆ.

   ಸಮೀಕ್ಷೆಯ ವಿವರಗಳು ಕೆಳಗಿನಂತಿವೆ.

   ನೂರಕ್ಕಿಂತ ಕಡಿಮೆ ಸೀಟನ್ನು ಗೆಲ್ಲಲಿದೆ ಬಿಜೆಪಿ

   ನೂರಕ್ಕಿಂತ ಕಡಿಮೆ ಸೀಟನ್ನು ಗೆಲ್ಲಲಿದೆ ಬಿಜೆಪಿ

   165 ಸೀಟುಗಳನ್ನು ಗೆದ್ದೇ ಗೆಲ್ಲುತ್ತೇವೆಂದು ಬೀಗುತ್ತಿದ್ದ ಬಿಜೆಪಿಗೆ ಇಲ್ಲಿದೆ ನೋಡಿ ಆಘಾತಕರ ಅಂಕಿಸಂಖ್ಯೆಗಳು. ಇದರ ಪ್ರಕಾರ, ಬಿಜೆಪಿ ಕೇವಲ 91-99 ಕ್ಷೇತ್ರಗಳಲ್ಲಿ ಮಾತ್ರ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್ 78-86 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಲಿದೆ. ಇತರೆ ಪಕ್ಷಗಳು 3-7 ಸೀಟು ಪಡೆಯಲಿವೆ. ಬಹುಮತ ಸಾಬೀತುಪಡಿಸಲು ಯಾವುದೇ ಪಕ್ಷಕ್ಕೆ ಬೇಕಿರುವ ಸೀಟುಗಳು 92.

   ಪಟಿದಾರ್ ಪ್ರಾಂತ್ಯದಲ್ಲಿಯೇ ಬಿಜೆಪಿ ಜಯಭೇರಿ

   ಪಟಿದಾರ್ ಪ್ರಾಂತ್ಯದಲ್ಲಿಯೇ ಬಿಜೆಪಿ ಜಯಭೇರಿ

   ಗುಜರಾತ್ ನ ಕೇಂದ್ರ ಭಾಗ ಮತ್ತು ಪಟಿದಾರ್ ಜನಾಂಗದವರೇ ಹೆಚ್ಚಾಗಿರುವ ಸೌರಾಷ್ಟ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆಯಾದರೂ ಕಳೆದ ಬಾರಿಗಿಂತ ಕಡಿಮೆ ಮತಗಳನ್ನು ಗಳಿಸಲಿದೆ. ಇದು ಕೂಡ ಬಿಜೆಪಿ ಒಂದು ರೀತಿಯ ಹಿನ್ನಡೆಯೇ. ಆದರೆ, ಗುಜರಾತ್ ನ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ.

   ಇದು ಬಿಜೆಪಿಗೆ ಆಘಾತಕಾರಿ ಸಂಗತಿಯಲ್ಲದೆ ಮತ್ತೇನು?

   ಇದು ಬಿಜೆಪಿಗೆ ಆಘಾತಕಾರಿ ಸಂಗತಿಯಲ್ಲದೆ ಮತ್ತೇನು?

   ಗುಜರಾತ್ ನ ಕೇಂದ್ರ ಭಾಗದಲ್ಲಿ 40 ಸೀಟುಗಳಿದ್ದು, ಇದರಲ್ಲಿ ಕಾಂಗ್ರೆಸ್ ಶೇ.40ರಷ್ಟು ಮತಗಳನ್ನು ಗಳಿಸಿದರೆ, ಬಿಜೆಪಿಯ ಮತಗಳಿಕೆ ಕೇವಲ ಶೇ.41ರಷ್ಟು ಮಾತ್ರ. ಬಿಜೆಪಿ ಶೇ.13ರಷ್ಟು ಮತಗಳನ್ನು ಕಳೆದುಕೊಳ್ಳಲಿದ್ದರೆ, ಕಾಂಗ್ರೆಸ್ ಶೇ.2ರಷ್ಟು ಹೆಚ್ಚಿನ ಮತಗಳನ್ನು ಕಬಳಿಸಲಿದೆ.

   ಕುಸಿಯುತ್ತಿದೆ ಹಾರ್ದಿಕ ಪಟೇಲ್ ಜನಪ್ರಿಯತೆ

   ಕುಸಿಯುತ್ತಿದೆ ಹಾರ್ದಿಕ ಪಟೇಲ್ ಜನಪ್ರಿಯತೆ

   ಪಟಿದಾರ್ ಜನಾಂಗಕ್ಕೆ ಮೀಸಲಾತಿ ನೀಡಬೇಕೆಂದು ಭಾರೀ ಚಳವಳಿ ಆರಂಭಿಸಿರುವ ಹಾರ್ದಿಕ್ ಪಟೇಲ್ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಕುಗ್ಗುತ್ತಿದೆ ಎಂದು ಹೇಳುತ್ತಿದೆ ಸಮೀಕ್ಷೆ. ಶೇ.64ರಷ್ಟಿದ್ದ ಜನಪ್ರಿಯತೆ ಇದೀಗ ಶೇ.58ಕ್ಕೆ ಕುಸಿದಿದೆ. ಇದೂ ಕೂಡ ಕಾಂಗ್ರೆಸ್ಸಿಗೆ ಹಿನ್ನಡೆ ಎಂದೇ ಹೇಳಬಹುದು.

   ಬಿಜೆಪಿಗೆ ಚಿಂತೆಯ ಗೆರೆಗಳು ಹೆಚ್ಚಾದರೆ ಅಚ್ಚರಿಯಿಲ್ಲ

   ಬಿಜೆಪಿಗೆ ಚಿಂತೆಯ ಗೆರೆಗಳು ಹೆಚ್ಚಾದರೆ ಅಚ್ಚರಿಯಿಲ್ಲ

   ಉತ್ತರ ಭಾಗದಲ್ಲಿ 53 ಸೀಟುಗಳಿಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಶೇ.49ರಷ್ಟು ಮತಗಳನ್ನು ಗಳಿಸಿ ಬಿಜೆಪಿಗೆ ಅಚ್ಚರಿ ಮೂಡಿಲಸಿದೆ. ಬಿಜೆಪಿ ಕೇವಲ ಶೇ.45ರಷ್ಟು ಮತಗಳನ್ನು ಮಾತ್ರ ಗಳಿಸಿ ತೃಪ್ತಿ ಪಡಬೇಕಿದೆ. ಮತದಾನ ಕೇವಲ 4 ದಿನಗಳು ಇರುವುದರಿಂದ ಬಿಜೆಪಿಗೆ ಚಿಂತೆಯ ಗೆರೆಗಳು ಹೆಚ್ಚಾದರೆ ಅಚ್ಚರಿಯಿಲ್ಲ.

   ದಕ್ಷಿಣದಲ್ಲಿ ಮತಗಳಿಕೆ ಹೆಚ್ಚಿಸಿಕೊಳ್ಳಲಿದೆ ಕಾಂಗ್ರೆಸ್

   ದಕ್ಷಿಣದಲ್ಲಿ ಮತಗಳಿಕೆ ಹೆಚ್ಚಿಸಿಕೊಳ್ಳಲಿದೆ ಕಾಂಗ್ರೆಸ್

   ಇನ್ನು ದಕ್ಷಿಣ ಗುಜರಾತ್ ನಲ್ಲಿ ಇರುವ 35 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶೇ.42ರಷ್ಟು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ. ಬಿಜೆಪಿ ಶೇ.40ರಷ್ಟು ಮತಗಳನ್ನು ಗಳಿಸುತ್ತಿರುವುದು, ಕಳೆದ ಬಾರಿಗಿಂತ ಶೇ.9ರಷ್ಟು ಕಮ್ಮಿ. ಆದರೆ, ಕಾಂಗ್ರೆಸ್ ಶೇ.11ರಷ್ಟು ಮತಗಳಿಕೆಯನ್ನು ಹೆಚ್ಚಿಸಿಕೊಳ್ಳಲಿದೆ.

   ಸೌರಾಷ್ಟ್ರದಲ್ಲಿ ಬಿಜೆಪಿ ವಿಜಯಮಾಲೆ

   ಸೌರಾಷ್ಟ್ರದಲ್ಲಿ ಬಿಜೆಪಿ ವಿಜಯಮಾಲೆ

   ಸೌರಾಷ್ಟ್ರದಲ್ಲಿ ಇರುವ 54 ಸೀಟುಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಬಿಜೆಪಿ ಕಬಳಿಸಲಿದೆ ಎಂದು ಎಬಿಪಿ ನ್ಯೂಸ್ ಸಿಎಸ್‌ಡಿಎಸ್ ಜೊತೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಇಲ್ಲಿ ಕಾಂಗ್ರೆಸ್ ಕೇವಲ ಶೇ.39ರಷ್ಟು ಮತಗಳನ್ನು ಗಳಿಸಿದರೆ, ಬಿಜೆಪಿ ಶೇ.45ರಷ್ಟು ಮತಗಳನ್ನು ಪಡೆದು ವಿಜಯಿಯಾಗಲಿದೆ.

   ಆದಿವಾಸಿಗಳ ಮತಗಳು ಕಾಂಗ್ರೆಸ್ಸಿಗೆ

   ಆದಿವಾಸಿಗಳ ಮತಗಳು ಕಾಂಗ್ರೆಸ್ಸಿಗೆ

   ಆದಿವಾಸಿ ಜನಾಂಗದವರು ಕಾಂಗ್ರೆಸ್ ಪರ ಒಲವು ತೋರಿದ್ದರೆ, ಕೋಳಿ ಜನಾಂಗದ ಮತಗಳು ಬಿಜೆಪಿ ಪಾಲಾಗಲಿವೆ. ಸ್ವರ್ಣ ಜನಾಂಗದ ಮತಗಳು ಕೂಡ ಬಿಜೆಪಿಗೆ ಬೀಳಲಿವೆ. ಮೊದಲು ಬಿಜೆಪಿ ಪರವಾಗಿದ್ದ ಪಟಿದಾರ್ ಮತಗಳು ಈ ಬಾರಿ ಕಾಂಗ್ರೆಸ್ಸಿಗೆ ಪಾಲಾಗಲಿವೆ.

   ಇನ್ನೂ ಮುನಿಸಿಕೊಂಡಿರುವ ಗುಜರಾತ್ ವರ್ತಕರು

   ಇನ್ನೂ ಮುನಿಸಿಕೊಂಡಿರುವ ಗುಜರಾತ್ ವರ್ತಕರು

   ಗ್ರಾಹಕ ಸೇವಾ ತೆರಿಗೆ ಜಾರಿ ತಂದಿರುವುದು ಬಿಜೆಪಿಗೆ ಗುಜರಾತ್ ನಲ್ಲಿ ಭಾರೀ ಆಘಾತ ತರಲಿದೆ ಎಂದು ಹೇಳಿದೆ ಸಮೀಕ್ಷೆ. ಇತ್ತೀಚೆಗೆ 200ಕ್ಕೂ ಹೆಚ್ಚು ಉತ್ಪನ್ನಗಳ ಜಿಎಸ್ ಟಿ ದರಗಳನ್ನು ಇಳಿಸಲಾಗಿದ್ದರೂ ಗುಜರಾತ್ ವರ್ತಕರು ಬಿಜೆಪಿ ಮೇಲೆ ಇನ್ನೂ ಮುನಿಸಿಕೊಂಡೇ ಇದ್ದಾರೆ. ಇದು ಚುನಾವಣೆಯಲ್ಲಿ ಪರಿಣಾಮ ಬೀರುವ ಎಲ್ಲ ಸಾಧ್ಯತೆಗಳೂ ನಿಚ್ಚಳವಾಗಿವೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   A poll conducted ahead of the Gujarat elections has suggested a photo finish. The Lokniti-CSDS-ABP News predicted an equal vote share for both the BJP and Congress. Amit Shah was dreaming of winning 165 seats out of 182 seats.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ