ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್ ನಲ್ಲಿ ರಾಷ್ಟ್ರೀಯ ಪಕ್ಷಗಳನ್ನೇ ಹಿಂದಿಕ್ಕಿದ 'ನೋಟಾ'

By Sachhidananda Acharya
|
Google Oneindia Kannada News

Recommended Video

ಗುಜರಾತ್ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನೇ ಹಿಂದಿಕ್ಕಿದ 'ನೋಟಾ' | Oneindia Kannada

ಅಹಮದಾಬಾದ್, ಡಿಸೆಂಬರ್ 18: ಬಹುನಿರೀಕ್ಷಿತ ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿನ ಕಾಳಗದಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ.

ಗುಜರಾತ್ LIVE : ಸರಳ ಬಹುಮತದ ಹಾದಿಯಲ್ಲಿ ಬಿಜೆಪಿಗುಜರಾತ್ LIVE : ಸರಳ ಬಹುಮತದ ಹಾದಿಯಲ್ಲಿ ಬಿಜೆಪಿ

ಇಲ್ಲಿ ನಾಲ್ಕನೇ ಸ್ಥಾನವನ್ನು ನೋಟಾ (NOTA - None of the Above) ಪಡೆದುಕೊಂಡಿದ್ದು ರಾಷ್ಟ್ರೀಯ ಪಕ್ಷಗಳಾದ ಎನ್.ಸಿ.ಪಿ ಮತ್ತು ಬಿಎಸ್ಪಿಯನ್ನೇ ಹಿಂದಿಕ್ಕಿದೆ. ಗುಜರಾತ್ ಚುನಾವಣೆಯಲ್ಲಿ ಶೇಕಡಾ 1.8 ನೋಟಾ ಮತಗಳು ಚಲಾವಣೆಯಾಗಿವೆ. ಒಟ್ಟು 5,24,709 ಜನರು ನೋಟಾ ಗುಂಡಿ ಒತ್ತಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ NOTA, ಬಿಜೆಪಿಗೆ ನೀಡುವುದೆ ಕಾಟ?ಗುಜರಾತ್ ಚುನಾವಣೆಯಲ್ಲಿ NOTA, ಬಿಜೆಪಿಗೆ ನೀಡುವುದೆ ಕಾಟ?

Gujarat Assembly Election Results 2017: NOTA wins fourth place

ವಿಜಯಶಾಲಿ ಬಿಜೆಪಿ ಶೇಕಡಾ 49.0 ಮತಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದು 1,39,79,099 ಜನರ ಮತ ಪಡೆದಿದೆ. ಬಿಜೆಪಿ ಭಾರೀ ಪೈಪೋಟಿ ನೀಡಿದ ಕಾಂಗ್ರೆಸ್ ಶೇ. 41.4 ಮತಗಳನ್ನು ಬಾಚಿಕೊಂಡಿದ್ದು 1,18,18,690 ಮತಗಳನ್ನು ಗಳಿಸಿಕೊಂಡಿದೆ.

ಇನ್ನು ಪಕ್ಷೇತರ ಅಭ್ಯರ್ಥಿಗಳು ಶೇಕಡಾ 4.3 ಮತಗಳನ್ನು ಪಡೆದಿದ್ದಾರೆ. ಒಟ್ಟು 12,24,216 ಮತದಾರರು ಪಕ್ಷೇತರರಿಗೆ ಮತದಾನ ಮಾಡಿದ್ದಾರೆ. ಬಿಟಿಪಿ, ಬಿಎಸ್ಪಿ, ಎನ್.ಸಿ.ಪಿ, ಎಐಎನ್ಎಚ್ ಸಿಪಿ, ಆರ್.ಎಸ್.ಪಿ.ಎಸ್ ಪಕ್ಷಗಳು ಕ್ರಮವಾಗಿ ಶೇ. 0.8, 0.7, 0.6, 0.3, 0.2 ಮತಗಳನ್ನು ಪಡೆದಿವೆ.

GUJARAT VOTE SHARE

ರಾಜ್ಯಸಭೆ ಚುನಾವಣೆಯಲ್ಲಿ 'ನೋಟಾ' ಬಳಕೆ ಹೇಗೆ?ರಾಜ್ಯಸಭೆ ಚುನಾವಣೆಯಲ್ಲಿ 'ನೋಟಾ' ಬಳಕೆ ಹೇಗೆ?

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನೋಟಾ ಐದನೇ ಸ್ಥಾನ ಪಡೆದುಕೊಂಡಿದೆ. ಇಲ್ಲಿ ಶೇಕಡಾ 0.9 ಮತದಾರರು ನೋಟಾಗೆ ಮತ ಹಾಕಿದ್ದಾರೆ. ಹೀಗೆ ಬಿದ್ದಿರುವ ಒಟ್ಟು ನೋಟಾ ಮತಗಳ ಸಂಖ್ಯೆ 29,618.

ಹಿಮಾಚಲ ಪ್ರದೇಶದಲ್ಲಿ ಭರ್ಜರಿ ಜಯ ದಾಖಲಿಸಿರುವ ಬಿಜೆಪಿ ಶೇಕಡಾ 48.5 ಮತಗಳನ್ನು ಪಡೆದಿದೆ. ಮತ್ತು ಕೇಸರಿ ಪಕ್ಷಕ್ಕೆ 15,74,210 ಜನರು ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಶೇಕಡಾ 41.8 ಮತಗಳನ್ನು ಪಡೆದಿದ್ದು 12,54,709 ಮತಗಳನ್ನು ಗಳಿಸಿದೆ.

ಇಲ್ಲಿ ಪಕ್ಷೇತರರ ಪರ ಶೇಕಡಾ 6.4, ಸಿಪಿಎಂ ಪರ ಶೇಕಡಾ 1.6, ಬಿಎಸ್ಪಿ ಪರ ಶೇಕಡಾ 0.5 ಮತಗಳು ಚಲಾವಣೆಯಾಗಿವೆ.

English summary
Gujarat Assembly Election Results 2017: The vote share of NOTA stands at 1.9%, higher than that of parties such as the BSP and the NCP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X