ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೋತ್ತರ ಸಮೀಕ್ಷೆ: ಒಂದಷ್ಟು ಟೀಕೆ, ಮತ್ತಷ್ಟು ಹಾಸ್ಯ!

|
Google Oneindia Kannada News

ಗುಜರಾತ್ ನಲ್ಲಿ ಎರಡನೇ ಹಂತದ ಮತದಾನ ಡಿ.14 ರಂದು ಮುಕ್ತಾಯವಾಗುತ್ತಿದ್ದಂತೆಯೇ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ಚುನಾವಣೆಗಳ ಫಲಿತಾಂಶದ ಕುರಿತು ಹಲವು ನ್ಯೂಸ್ ಏಜೆನ್ಸಿಗಳು, ಚಾನೆಲ್ ಗಳು ಚುನಾವಣೋತ್ತರ ಸಮೀಕ್ಷೆಯ ವರದಿ ಹೊರಹಾಕಿವೆ.

ಎರಡೂ ರಾಜ್ಯಗಳಲ್ಲೂ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದೆಂದು ಸಮೀಕ್ಷೆಯೇನೋ ಹೇಳಿದೆ. ಆದರೆ ಎಲ್ಲಾ ಬಾರಿಯೂ ಸಮೀಕ್ಷೆಯ ವರದಿಯೇ ಸರಿಯಾಗುತ್ತದೆ ಎನ್ನಲಿಕ್ಕಾಗುವುದಿಲ್ಲ. ಸಮೀಕ್ಷೆ ಸುಳ್ಳಾಗತ್ತೋ, ಬಿಡುತ್ತೋ ಈ ಸಮೀಕ್ಷೆ ಹಲವರಿಗೆ ಹಾಸ್ಯದ ವಿಷಯವಾಗಿರುವುದಂತೂ ಸತ್ಯ.

ಏನಿದು ಎಗ್ಸಿಟ್ ಪೋಲ್, ಈ ಸಮೀಕ್ಷೆ ನಡೆಯುವುದು ಹೇಗೆ?ಏನಿದು ಎಗ್ಸಿಟ್ ಪೋಲ್, ಈ ಸಮೀಕ್ಷೆ ನಡೆಯುವುದು ಹೇಗೆ?

ಟ್ವಿಟ್ಟರ್ ನಲ್ಲಿ ಹಲವರು ಎಗ್ಸಿಟ್ ಪೋಲ್ ಕುರಿತು ಹಾಸ್ಯ ಆರಂಭಿಸಿದ್ದಾರೆ. "ಎಗ್ಸಿಟ್ ಪೋಲ್ ನಂತರ, ಬಿಜೆಪಿ ಗೆಲುವಿಗೆ ಕಾರಣರಾದ ಮಣಿಶಂಕರ್ ಅಯ್ಯರ್ ಅವರನ್ನು ಮೋದಿ ಅಭಿನಂದಿಸಿದ್ದಾರೆ...' ಎಂಬಿತ್ಯಾದಿ ಕಮೆಂಟ್ ಗಳ ಊಲಕ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.

ಗುಜರಾತ್ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲೂ ಬಿಜೆಪಿಗೆ ಬಹುಮತ!ಗುಜರಾತ್ ಎಲ್ಲಾ ಎಕ್ಸಿಟ್ ಪೋಲ್ ಗಳಲ್ಲೂ ಬಿಜೆಪಿಗೆ ಬಹುಮತ!

ಡಿ.18 ರಂದು ಅಧಿಕೃತ ಫಲಿತಾಂಶ ಹೊರಬೀಳಲಿದೆ. ಆದರೆ ಅದಕ್ಕೂ ಮುನ್ನವೇ ಕೆಲವರು ರಾಹುಲ್ ಗಾಂಧಿಯವರಿಗೆ 'ಹಾಲಿಡೇ ವೆಕೆಶನ್' ಗೆ ಟಿಕೇಟ್ ಬುಕ್ ಮಾಡಲೆ ಎಂದು ಪ್ರಶ್ನಿಸಿ, ಟೀಕಿಸಿದ್ದಾರೆ.

ಬಿಜೆಪಿ ಗೆಲ್ಲುವ ಸಾಧ್ಯತೆಯೇ ಇಲ್ಲ : ಹಾರ್ದಿಕ್ ಕೆಂಡಬಿಜೆಪಿ ಗೆಲ್ಲುವ ಸಾಧ್ಯತೆಯೇ ಇಲ್ಲ : ಹಾರ್ದಿಕ್ ಕೆಂಡ

ಚುನಾವಣೋತ್ತರ ಸಮೀಕ್ಷೆಯ ನಂತರದ ಕೆಲವು ಹಾಸ್ಯದ ಝಲಕು ಇಲ್ಲಿದೆ.

ಅಯ್ಯರ್ ಗೆ ಮೋದಿ ಅಭಿನಂದನೆ!

ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರನ್ನು ಅಭಿನಂದಿಸುತ್ತಿರುವ, ಎಂದೋ ಕ್ಲಿಕ್ಕಿಸಿದ ಚಿತ್ರವನ್ನು ಟ್ವಿಟ್ಟರ್ ನಲ್ಲಿ ಹಾಕಲಾಗಿದೆ. ಅದರೊಂದಿಗೆ 'ಗುಜರಾತ್ ಚುನಾವಣೆಯಲ್ಲಿ ಅಪೂರ್ವ ಕೊಡುಗೆ ನೀಡಿದ ಮಣಿಶಂಕರ್ ಅಯ್ಯರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಅಭಿನಂದಿಸಿದರು' ಎಂದು ಚೇಷ್ಟೆ ಸಹ ಮಾಡಿದ್ದಾರೆ! ಗುಜರಾತ್ ಚುನಾವಣೆಗೂ ಮುನ್ನ ನರೇಂದ್ರ ಮೋದಿಯವರನ್ನು 'ನೀಚ್ ಆದ್ಮಿ' ಎಂದು ಕರೆಯುವ ಮೂಲಕ ಮಣಿಶಂಕರ್ ಅಯ್ಯರ್ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

ಸೋಲಿನ ಹೊಣೆ ಹೊರಲು ಕ್ಯೂ!

ಚುನಾವಣೋತ್ತರ ಸಮೀಕ್ಷೆಯ ನಂತರ ಕಾಂಗ್ರೆಸ್ಸಿನ ಸೋಲಿನ ಹೊಣೆ ಹೊರಲು ಕಾಂಗ್ರೆಸ್ ನಾಯಕರು ಸಾಲುಗಟ್ಟಿ ನಿಂತಿದ್ದಾರೆಂದು ಇನ್ನೊಬ್ಬರು ಕುಚೋದ್ಯ ಮಾಡಿದ್ದಾರೆ. ಕಾಮಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಸೋಲನ್ನು ಇವರೆಲ್ಲ ತಮ್ಮ ಮೇಲೆ ಹೊತ್ತುಕೊಳ್ಳಲು ನಿಂತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ!

ಟಿಕೇಟ್ ಬುಕ್ ಮಾಡ್ಲಾ..?!

ಎಗ್ಸಿಟ್ ಪೋಲ್ ನೋಡುತ್ತಿರುವ ರಾಹುಲ್ ಗಾಂಧಿಯವರನ್ನು ಅವರ ಆಪ್ತ ಕಾರ್ಯದರ್ಶಿ, "ನೀವು ರಿಸಲ್ಟ್ ಬರುವವರೆಗೂ ಕಾಯುತ್ತೀರಾ? ಅಥವಾ ಈಗಲೇ ನಿಮ್ಮ ಹಾಲಿಡೇ ಟಿಕೇಟ್ ಬುಕ್ ಮಾಡಲಾ" ಎಂದು ಕೇಳುತ್ತಿರುವ ಕಾರ್ಟೂನ್ ವೊಂದನ್ನು ಟ್ವಿಟ್ಟರ್ ನಲ್ಲಿ ಹಾಕಲಾಗಿದೆ. ಈ ಟ್ವಿಟ್ಟರ್ ನಲ್ಲಿ ರಾಹುಲ್ ಗಾಂಧಿ ಹಣೆಗೆ ಭಸ್ಮ ಹಚ್ಚಿಕೊಂಡಿರುವಂತೆ ಚಿತ್ರಿಸಿರುವುದು ಮತ್ತೊಂದು ಸೂಕ್ಷ್ಮ ವಿಚಾರ!

ಗುಜರಾತ್ ಚುನಾವಣೆಯ ನೀತಿ ಏನು ಗೊತ್ತೆ?

"ಗುಜರಾತ್ ಚುನಾವಣೆಯ ನೀತಿ ಏನು ಗೊತ್ತೇ? ಯಾವುದೇ ಮಕ್ಕಳನ್ನೂ ಅದಕ್ಕಿಷ್ಟವಿಲ್ಲದ ಕೆಲಸ ಮಾಡುವಂತೆ ಒತ್ತಾಯಿಸಬೇಡಿ. ಅಥವಾ ಅದನ್ನು ಮಾಡುವ ಸಾಮರ್ಥ್ಯ ಅದಕ್ಕಿಲ್ಲದಿದ್ದರೆ ಒತ್ತಾಯಿಸಬೇಡಿ!" ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಈ ಮಾತು ವ್ಯಂಗ್ಯವಷ್ಟೇ ಅಲ್ಲ, ಗಂಭೀರ ಅರ್ಥವನ್ನೂ ಹೊಂದಿರುವುದು ಸುಳ್ಳಲ್ಲ.

ರಾಹುಲ್ ಗಾಂಧಿ ಬ್ಯಾಂಕಾಕಿಗೆ!

ಹಿಮಾಚಲ ಪ್ರದೇಶದಲ್ಲಿ ಬಿಜೆಪಿ, ಗುಜರಾತಿನಲ್ಲೂ ಬಿಜೆಪಿ. ರಾಹುಲ್ ಗಾಂಧಿ ಮಾತ್ರ ಬ್ಯಾಂಕಾಕಿಗೆ ಎಂದು ಹಾಸ್ಯ ಮಾಡಿದ್ದಾರೆ ಮಹೇಶ್ ವಿಕ್ರಮ್ ಹೆಗಡೆ ಎಂಬುವವರು.

ಎಗ್ಸಿಟ್ ಪೋಲ್ ಮತ್ತು ಸೋನಿಯಾ ಎಗ್ಸಿಟ್!

ಎಗ್ಸಿಟ್ ಪೋಲ್ ನೋಡಿ ಸೋನಿಯಾ ಗಾಂಧಿ ಎಗ್ಸಿಟ್ ಆದರು ಎಂದು ಬಾಲಿವುಡ್ ಗಂಡು ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಸೋನಿಯಾ ಗಾಂಧಿಯವರು ಡಿ.15 ರಂದು ರಾಜಕೀಯ ನಿವೃತ್ತಿ ಘೋಷಿಸಿದ ಸುದ್ದಿ ಕೇಳುತ್ತಲೇ ಟ್ವಿಟ್ಟರ್ ನಲ್ಲಿ ಹೀಗೆ ಹಾಸ್ಯ ಮಾಡಲಾಗಿದೆ.

English summary
Almost all Exit polls say BJP will win in both Gujarat assembly elections 2017 as well as Himachal Pradesh assembly poll. But in twitter many are criticizing, making fun of the exit poll results by various news channels and new agencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X