ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯ ಬಳಕೆ ಸಾಮಗ್ರಿಗಳ ಮೇಲೆ ಜಿಎಸ್ ಟಿ: ಇನ್ಫೋಗ್ರಾಫಿಕ್ಸ್ ಮಾಹಿತಿ

ದಿನ ಬ ಳಕೆಯ ವಸ್ತುಗಳ ಮೇಲೆ ಜಿಎಸ್ ಟಿಯ ಪರಿಣಾಮಗಳನ್ನು ಇನ್ಫೋ ಗ್ರಾಫಿಕ್ಸ್ ಮೂಲಕ ತಿಳಿಸಿ ಹೇಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ವಸ್ತುಗಳ ಮೇಲಿನ ಹಳೆಯ ತೆರಿಗೆ ದರ ಹಾಗೂ ಜಿಎಸ್ ಟಿ ದರಗಳ ನಡುವಿನ ವ್ಯತ್ಯಾಸವನ್ನು ತಿಳಿಸಲಾಗಿದ್ದು, ಇದರಿ

|
Google Oneindia Kannada News

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ಬಂದು ಮೂರ್ನಾಲ್ಕು ದಿನಗಳೇ ಕಳೆದರೂ ಜನರಲ್ಲಿ ಇನ್ನೂ ಗೊಂದಲವೋ ಗೊಂದಲ! ಯಾವ ವಸ್ತುಗಳ ಬೆಲೆಗಳು ಕಡಿಮೆಯಾಗಿವೆ, ಯಾವ ವಸ್ತುಗಳ ಬೆಲೆ ಹೆಚ್ಚಾಗಿದೆ.

ದುಡಿಯುವ ಮಂದಿಗೆ ಮನೆ ಬಜೆಟ್ ನದ್ದೇ ಚಿಂತೆ. ಆದರೆ, ಅಂಗಡಿಗೆ ಹೋಗಿ ಸಾಮಾನು, ಸರಂಜಾಮು ಕೊಳ್ಳುವಾಗ ಹಳೇ ಸ್ಟಾಕ್ ಅನ್ನೇ ಕೊಳ್ಳುತ್ತಿರುವುದರಿಂದ ಕೆಲವರಿಗೆ ಜಿಎಸ್ ಟಿ ಸದ್ಯಕ್ಕಂತೂ ಬಾಧಿಸಿಲ್ಲವೆಂಬ ಸಮಾಧಾನ.

ಜಿಎಸ್ ಟಿ ಅಡಿಯ ಹೋಟೆಲ್ ಬಿಲ್ಲುಗಳ ಗೊಂದಲಕ್ಕೆ ಕೇಂದ್ರದ ಸ್ಪಷ್ಟನೆಜಿಎಸ್ ಟಿ ಅಡಿಯ ಹೋಟೆಲ್ ಬಿಲ್ಲುಗಳ ಗೊಂದಲಕ್ಕೆ ಕೇಂದ್ರದ ಸ್ಪಷ್ಟನೆ

ಅದರ ಜತೆಯಲ್ಲೇ, ಜಿಎಸ್ ಟಿ ಬಂದರೆ ದಿನೋಪಯೋಗಿ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾಗಿ ಮನೆಯ ತಿಂಗಳ ಬಜೆಟ್ ಯದ್ವಾತದ್ವಾ ಏರುತ್ತದೇನೋ ಎಂಬ ಆತಂಕ.

ಸಾಮಾನ್ಯ ವರ್ಗದ ಇಂಥ ತಳಮಳಗಳನ್ನು ನಿವಾರಿಸಲೆಂದೇ ಇಲ್ಲಿ ಹೊಸ ಚಾರ್ಟ್ ಗಳನ್ನು ನೀಡಲಾಗಿದೆ. ಇವುಗಳಲ್ಲಿ ದಿನ ಬಳಕೆಯ ವಸ್ತುಗಳ ಜತೆಯಲ್ಲೇ ಒಬ್ಬ ವ್ಯಕ್ತಿಗೆ ಅಗತ್ಯವೆನಿಸುವ ವಸ್ತುಗಳ ಪಟ್ಟಿ ಮಾಡಲಾಗಿದೆ.

ಜೇಟ್ಲಿ ಭರವಸೆ ಹುಸಿ, ಜಿಎಸ್ಟಿ ನಂತರ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ ಜೇಟ್ಲಿ ಭರವಸೆ ಹುಸಿ, ಜಿಎಸ್ಟಿ ನಂತರ ಅಡುಗೆ ಅನಿಲ ಸಿಲಿಂಡರ್ ದರ ಏರಿಕೆ

ಆ ವಸ್ತುಗಳ ಹಿಂದಿದ್ದ ತೆರಿಗೆ, ಜಿಎಸ್ ಟಿಯಡಿ ಬೀಳುವ ತೆರಿಗೆಯನ್ನು ಪ್ರತ್ಯೇಕವಾಗಿ ಕೊಡಲಾಗಿದೆ. ಇದರಲ್ಲಿನ ಮಾಹಿತಿಗಳು ಉಪಯುಕ್ತವಾದರೆ ನಮ್ಮ ಶ್ರಮಕ್ಕೆ ಸಾರ್ಥಕತೆ ಬರುತ್ತದೆ.

ಗೃಹಿಣಿಯರೇ ಹಾಲು, ತುಪ್ಪದ ಬೆಲೆ ಇಳಿಯುತ್ತೆ!

ಗೃಹಿಣಿಯರೇ ಹಾಲು, ತುಪ್ಪದ ಬೆಲೆ ಇಳಿಯುತ್ತೆ!

ಮನೆಯಿಂದ ಮೇಲೆ ಧವಸ, ಧಾನ್ಯ, ಹಾಲು, ತುಪ್ಪ ಬೇಕೇ ಬೇಕಲ್ಲವೇ? ಆಗಾಗ ಏರುತ್ತಲೇ ಇದ್ದ ಈ ಪದಾರ್ಥಗಳ ಬೆಲೆಗಳು ಗೃಹಿಣಿಯರಿಗೆ ಬೇಸರ ತರಿಸಿದ್ದೂ ಉಂಟು. ಆದರೀಗ ಆ ಭಯವಿಲ್ಲ. ಜಿಎಸ್ ಟಿಯಡಿ ಅವುಗಳ ಬೆಲೆ ಇಳಿಕೆಯಾಗಿದೆ.

ಎಣ್ಣೆ, ಮಿನರಲ್ ವಾಟರ್ ಕೂಡ ಅಗ್ಗ

ಎಣ್ಣೆ, ಮಿನರಲ್ ವಾಟರ್ ಕೂಡ ಅಗ್ಗ

ಸಕ್ಕರೆ ಬೆಲೆ ಜಾಸ್ತಿಯಾಯಿತೆಂದು ಸಿಹಿ ಪದಾರ್ಥ ಕಡಿಮೆ ಮಾಡಿದ್ದವರು ಈಗ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸಿಹಿ ಪದಾರ್ಥ ತಿನ್ನಬಹುದು. ಇನ್ನು, ದೂರದ ಪ್ರಯಾಣಕ್ಕೆ ಹೋದಾಗ ಮಿನರಲ್ ವಾಟರ್ ನಿಮಗೆ ದುಬಾರಿಯೆನಿಸದು.

ಎಕ್ಸ್ ರೇ ಚೀಪ್

ಎಕ್ಸ್ ರೇ ಚೀಪ್

ಮಕ್ಕಳಿಗೆ ಇಷ್ಟವಾಗುವ ಚಾಕೋಲೇಟ್, ಮಕ್ಕಳ ಕಲಿಕಾ ಪುಸ್ತಕಗಳು ಇನ್ನು ಅಗ್ಗವಾಗಲಿವೆ. ವೈದ್ಯಕೀಯ ಸೇವೆಗಳಿಗೆ ಅತ್ಯಗತ್ಯವಾಗಿ ಬೇಕಾಗುವ ಎಕ್ಸ್ ರೇ ಫಿಲ್ಮ್ ಗಳ ಬೆಲೆಯಲ್ಲಿ ಇಳಿಕೆಯಾಗಲಿದ್ದು, ಇನ್ನು ಎಕ್ಸ್ ರೇ ಸೇವೆಯೂ ತುಸು ಕಡಿಮೆಯಾಗಬಹುದು.

ಮನೆ ಕಟ್ಟೋರಿಗೆ ಕೊಂಚ ನಿರಾಳ

ಮನೆ ಕಟ್ಟೋರಿಗೆ ಕೊಂಚ ನಿರಾಳ

ಜಿಎಸ್ ಟಿ ಅಡಿ, ಇಟ್ಟಿಗೆ ಬೆಲೆ ಕೊಂಚ ಇಳಿಯಲಿದೆ. ಮನೆ ಕಟ್ಟುವ ಕನಸು ಕಾಣುತ್ತಿರುವವರಿಗೆ ಇದು ಕೊಂಚ ಅನುಕೂಲ ಕಲ್ಪಿಸಬಹುದು. ಇನ್ನು, ಡೀಸೆಲ್ ಕಾರು ಕೊಳ್ಳುವವರ ಕನಸಿಗೆ ಜಿಎಸ್ ಟಿ ಕೊಂಚ ಪುಷ್ಟಿ ನೀಡಿದೆ.

ಎಲ್ ಪಿಜಿ ಸ್ಟವ್ ಕೊಳ್ಳುವಿಕೆ ಸಲೀಸು

ಎಲ್ ಪಿಜಿ ಸ್ಟವ್ ಕೊಳ್ಳುವಿಕೆ ಸಲೀಸು

ಜಿಎಸ್ ಟಿ ಅಡಿಯಲ್ಲಿ, ರೈತರು ಬಳಸುವ ಟ್ರ್ಯಾಕ್ಟರ್ ಗಳ ಟೈರುಗಳ ಬೆಲೆಯು ಶೇ. 20ರಿಂದ ಶೇ. 18ಕ್ಕೆ ಇಳಿಕೆಯಾಗಲಿದೆ. ಇನ್ನು, ಎಲ್ ಪಿಜಿ ಸ್ಟವ್ ಗಳ ಬೆಲೆಯ ಮೇಲಿನ ತೆರಿಗೆ ದರ ಶೇ. 21ರಿಂದ ಶೇ. 18ಕ್ಕೆ ಇಳಿದಿರುವುದು ಗೃಹಿಣಿಯರಲ್ಲಿ ಹೊಸ ಖುಷಿ ತರಲಿದೆ.

ಪೀಠೋಪಕರಣಗಳ ಬೆಲೆ ಇಳಿಕೆ

ಪೀಠೋಪಕರಣಗಳ ಬೆಲೆ ಇಳಿಕೆ

ಮನೆಯಲ್ಲಿ ಬಿದಿರು ಪೀಠೋಪಕರಣಗಳನ್ನು ಕೊಳ್ಳಬಯಸುವವರು ತಡ ಮಾಡದೇ ಅವನ್ನು ಕೊಳ್ಳಬಹುದು. ಇವುಗಳ ಮೇಲಿನ ತೆರಿಗೆ ಜಿಎಸ್ ಟಿ ಅಡಿಯಲ್ಲಿ ಕಮ್ಮಿಯಾಗಲಿದೆ. ಸಿಮೆಂಟ್ ಮೇಲಿನ ದರ ಅಷ್ಟಾಗಿ ಕಡಿಮೆಯಾಗಿಲ್ಲವಾದರೂ, ಒಂದು ಪರ್ಸೆಂಟ್ ದರ ಇಳಿಕೆಯಾಗಿರುವುದು ಕೊಂಚ ಸಲೀಸಾದೀತು.

English summary
Three to four days after its implementation, Goods and services tax (GST) is still creating confussion among the common people across the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X