ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಮಹತ್ವದ ನಿರ್ಧಾರ: ದಿನಬಳಕೆಯ 30ವಸ್ತುಗಳ ಮೇಲೆ GST ಇಳಿಕೆ

ಕೇಂದ್ರ ಸರಕಾರದ ಮಹತ್ವದ ನಿರ್ಧಾರವೊಂದರಲ್ಲಿ ದಿನಬಳಕೆಯ ಮೂವತ್ತು ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು (GST) ಇಳಿಸಲಾಗಿದೆ. ಐಷಾರಾಮಿ, SUV ಮತ್ತು ಮಧ್ಯಮ ವರ್ಗದ ಕಾರುಗಳ ಮೇಲೆ ಸೆಸ್ ಹೆಚ್ಚಿಸಲಾಗಿದೆ.

|
Google Oneindia Kannada News

ನವದೆಹಲಿ, ಸೆ 10: ಕೇಂದ್ರ ಸರಕಾರದ ಮಹತ್ವದ ನಿರ್ಧಾರವೊಂದರಲ್ಲಿ ದಿನಬಳಕೆಯ ಮೂವತ್ತು ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು (GST) ಇಳಿಸಲಾಗಿದೆ.

ವಿತ್ತ ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಶನಿವಾರ (ಸೆ 9) ನಡೆದ 21ನೇ ಜಿಎಸ್ಟಿ ಮಂಡಳಿ ಸಭೆಯಲ್ಲಿ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದ್ದು, ಐಷಾರಾಮಿ, SUV ಮತ್ತು ಮಧ್ಯಮ ವರ್ಗದ ಕಾರುಗಳ ಮೇಲೆ ಸೆಸ್ ಹೆಚ್ಚಿಸಲಾಗಿದೆ. ಆದರೆ, ಸಣ್ಣಕಾರುಗಳ ಮೇಲಿನ GST ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

 Union government decision: GST rates reduced on thirty household items

ಜಿಎಸ್ಟಿ ಭಾರತದ ಬಹುದೊಡ್ಡ ಆರ್ಥಿಕ ಸುಧಾರಣೆಜಿಎಸ್ಟಿ ಭಾರತದ ಬಹುದೊಡ್ಡ ಆರ್ಥಿಕ ಸುಧಾರಣೆ

GST ಟಿಆರ್-1 ಸಲ್ಲಿಸುವ ಗಡುವನ್ನು ಅಕ್ಟೋಬರ್ ಹತ್ತರವರೆಗೆ ವಿಸ್ತರಿಸುವ, ಗಡುವು ಮೀರಿದ ನಂತರ ರಿಟರ್ನ್ಸ್ ಸಲ್ಲಿಸಿದರೆ ಶೇ. 18 ಬಡ್ಡಿ ವಿಧಿಸುವ ಮತ್ತು ನೆಟ್ ವರ್ಕ ನಲ್ಲಿನ ತಾಂತ್ರಿಕ ಸಮಸ್ಯೆ ಪರಿಹರಿಸಲು ಸಮಿತಿ ರಚಿಸುವ ನಿರ್ಧಾರಕ್ಕೆ ಸಭೆಯಲ್ಲಿ ಬರಲಾಗಿದೆ.

ಸಭೆಯಲ್ಲಿ ತೆಗೆದುಕೊಳ್ಳಲಾಗಿರುವ ಪ್ರಮುಖ ಅಂಶಗಳು ಇಂತಿವೆ:

> 1200 ಮತ್ತು1500ಸಿಸಿ ಕಾರುಗಳ ಮೇಲಿನ ತೆರಿಗೆಯಲ್ಲಿ ಬದಲಾವಣೆಯಿಲ್ಲ.
> ಸರಕಾರದ ಗುತ್ತಿಗೆ ಮೇಲಿನ ಕೆಲಸದ ಮೇಲಿನ ತೆರಿಗೆ ಶೇ. 18ರಿಂದ 12ಕ್ಕೆ ಇಳಿಕೆ.
> ಖಾದಿ, ಗ್ರಾಮೋದ್ಯೋಗ ಮಳಿಗೆಯಲ್ಲಿ ಮಾರಲಾಗುವ ಬಟ್ಟೆಗಳ ಮೇಲೆ ಜಿಎಸ್ಟಿ ಇಲ್ಲ.
> ಮಧ್ಯಮ ಗಾತ್ರದ ಕಾರುಗಳ ಮೇಲಿನ ಶೇ. 28 ಜಿಎಸ್ಟಿಗೆ ಶೇ. 17 ಸೆಸ್.
> ಐಷಾರಾಮಿ ಕಾರಿನ ಮೇಲಿನ ಶೇ. 28 ಜಿಎಸ್ಟಿಗೆ ಶೇ. 20 ಸೆಸ್.
> SUV ಕಾರುಗಳ ಮೇಲಿನ ಶೇ. 28 ಜಿಎಸ್ಟಿಗೆ ಶೇ. 23 ಸೆಸ್.
> ಒಣ ಹುಣಸೆ, ರಬ್ಬರ್ ಬ್ಯಾಂಡ್ ಮೇಲಿನ ತೆರಿಗೆ ಇಳಿಕೆ.
> ಇಡ್ಲಿಹಿಟ್ಟು, ಅಗರಬತ್ತಿ , ರೇನ್ ಕೋಟ್ ಮೇಲಿನ ದರ ಇಳಿಕೆ.
> ಕಸ್ಟರ್ಡ್ ಪುಡಿ, ಪ್ಯಾಕೇಜ್ ತಿಂಡಿ ಸೇರಿದಂತೆ ಇತರ ದಿನಯೋಪಯೋಗಿ ವಸ್ತುಗಳ ಮೇಲಿನ ದರ ಇಳಿಕೆ.
> ಅಂತರರಾಜ್ಯ ಖಾದಿ ವ್ಯಾಪಾರಸ್ಥರು ಜಿಎಸ್ಟಿ ನೊಂದಾಣಿ ಮಾಡುವ ಅವಶ್ಯಕತೆಯಿಲ್ಲ.

ಪ್ಲಾಸ್ಟಿಕ್ ರೇನ್ ಕೋಟ್ ಮೇಲಿನ ತೆರಿಗೆ ಶೇ.28 ರಿಂದ 18, ರಬ್ಬರ್ ಬ್ಯಾಂಡ್ ಮೇಲಿನ ತೆರಿಗೆ ಶೇ. 28 ರಿಂದ 12ಕ್ಕೆ ಇಳಿಸಲಾಗಿದೆ. ಇನ್ನು ಇತರ ದಿನಯೋಪಯೋಗಿ ವಸ್ತುಗಳ ಮೇಲಿನ ತೆರಿಗೆ ಇಳಿಕೆಯ ಶೇಕಡಾವಾರು ಪ್ರಮಾಣ ಇನ್ನು ಪ್ರಕಟವಾಗಬೇಕಷ್ಟೇ..

English summary
GST Council meeting headed by Union Finance Minister Arun Jaitley, decided to revise rates downwards for 30 household commodities after reviewing rates for 65 items on the GST list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X