ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್ ಟಿ ಕುರಿತ 7 ತಪ್ಪು ತಿಳಿವಳಿಕೆ: ಸತ್ಯ ಮತ್ತು ಮಿಥ್ಯ

|
Google Oneindia Kannada News

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೆ ಬಂದು ಆಗಲೇ 10 ದಿನಕಳೆದುಹೋಯ್ತು. ಏನಪ್ಪಾ ಇದು ಹೊಸ ಟ್ಯಾಕ್ಸು, ಅರ್ಥವೇ ಆಗೋಲ್ಲ ಎನ್ನುವವರೂ ಈಗೀಗ ಜಿಎಸ್ ಟಿಯನ್ನು ಅಲ್ಪಸ್ವಲ್ಪ ಅರ್ಥ ಮಾಡಿಕೊಂಡು ಅದರ ಬಗ್ಗೆ ಮಾತನಾಡುವುದಕ್ಕೆ ಶುರುಮಾಡಿದ್ದಾರೆ.

ಈ ಜಿಎಸ್ ಟಿ ಶ್ರೀಸಾಮಾನ್ಯನಿಗೆ ಹಿತವೋ, ಹೊರೆಯೂ ಎಂಬ ನಿರ್ಧಾರಕ್ಕೆ ತಕ್ಷಣವೇ ಬರುವುದು ಕಷ್ಟವಾದರೂ ಒಂದು ಕಚ್ಚಾ ಚಿತ್ರಣವಂತೂ ಸಿಕ್ಕಂತಾಗಿದೆ.

ಹೀಗಿರುವಾಗ ಜಿಎಸ್ ಟಿ ಜಾರಿಯಾಗುವ ಮೊದಲು ಇದ್ದ 7 ಬಹುಮುಖ್ಯ ತಪ್ಪು ಕಲ್ಪನೆಗಳು ಮತ್ತು ಅವುಗಳಲ್ಲಿ ಎಷ್ಟು ಸತ್ಯ ಮತ್ತು ಎಷ್ಟು ಮಿಥ್ಯ ಎಂಬ ಬಗ್ಗೆ ಆರ್ಥಿಕ ತಜ್ಞರೇ ಮಾತನಾಡಿದ್ದಾರೆ.

ಜಿಎಸ್ ಟಿಯಿಂದ ಸರ್ಕಾರಕ್ಕೆ ಹಿತ, ಶ್ರೀಸಾಮಾನ್ಯನಿಗೆ ಹೊಡೆತ!ಜಿಎಸ್ ಟಿಯಿಂದ ಸರ್ಕಾರಕ್ಕೆ ಹಿತ, ಶ್ರೀಸಾಮಾನ್ಯನಿಗೆ ಹೊಡೆತ!

ಸುತ್ತಲೂ ವಿವಾದವನ್ನೇ ಸಾಕಿಟ್ಟುಕೊಂಡು ಜುಲೈ 1 ರಿಂದ ಜಾರಿಯಾದ ಜಿಎಸ್ ಟಿಯನ್ನು ವಿಪಕ್ಷಗಳೆಲ್ಲ ವಿರೋಧಿಸಿದ್ದವು. ಜೂನ್ 30 ರ ಮಧ್ಯರಾತ್ರಿ ಸೇರಿದ್ದ ಸಂಸತ್ ನ ವಿಶೇಷ ಅಧಿವೇಶನಕ್ಕೂ ಹಾಜರಾಗದೆ ತಮ್ಮ ಅಸಮ್ಮತಿಯನ್ನು ಸೂಚಿಸಿದ್ದವು. ಈ ಯಾವುದಕ್ಕೂ ಕ್ಯಾರೇ ಎನ್ನದೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಿಎಸ್ ಟಿಯನ್ನು ಅದ್ಧೂರಿಯಾಗಿ ಜಾರಿಗೆ ತಂದಿತ್ತು.

ಈಗಾಗಲೇ ಮಾರಿಕಟ್ಟೆಯಲ್ಲಿ ಜಿಎಸ್ ಟಿ ಸದ್ದು ಆರಂಭವಾಗಿದ್ದು, ಶ್ರೀಸಾಮಾನ್ಯನಿಗಿದ್ದ 7 ತಪ್ಪು ತಿಳಿವಳಿಕೆಗಳು, ಮತ್ತು ವಾಸ್ತವ ಸಂಗತಿ ಏನು ಎಂಬ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಬಂತು ನೋಡಿ ಜಿಎಸ್ ಟಿ ದರ ಕಂಡು ಹಿಡಿಯುವ ಆ್ಯಪ್ಬಂತು ನೋಡಿ ಜಿಎಸ್ ಟಿ ದರ ಕಂಡು ಹಿಡಿಯುವ ಆ್ಯಪ್

ತಪ್ಪು ತಿಳಿವಳಿಕೆ 1: ಒಂದು ದೇಶ, ಒಂದು ತೆರಿಗೆ

ತಪ್ಪು ತಿಳಿವಳಿಕೆ 1: ಒಂದು ದೇಶ, ಒಂದು ತೆರಿಗೆ

ವಾಸ್ತವ: ಒಂದು ದೇಶ, ಒಂದು ತೆರಿಗೆ, ಜಿಎಸ್ ಟಿ ಜಾರಿಗೆ ಬಂದಿದ್ದೇ ಈ ಘೋಷ ವಾಕ್ಯದೊಂದಿಗೆ. ಆದರೆ ಈ ಮಾತು ಸುಳ್ಳು ಎನ್ನುತ್ತಾರೆ ಆರ್ಥಿಕ ತಜ್ಞರು. ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿಯಿಂದ ಆಚೆ ಇಟ್ಟು ಇಂದು ದೇಶ ಇಂದು ಮಾರುಕಟ್ಟೆ ಒಂದು ತೆರಿಗೆ ಎನ್ನುವುದಕ್ಕೆ ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯ.

ತಪ್ಪು ತಿಳಿವಳಿಕೆ 2: ಸಣ್ಣ ಉದ್ದಿಮೆಗಳಿಗೆ ಹೊರೆ

ತಪ್ಪು ತಿಳಿವಳಿಕೆ 2: ಸಣ್ಣ ಉದ್ದಿಮೆಗಳಿಗೆ ಹೊರೆ

ವಾಸ್ತವ: ಗಣಕೀಕೃತ ಬಿಲ್ ಅನ್ನೇ ನೀಡಬೇಕೆಂಬ ಕಾರಣದಿಂದ ಪ್ರತಿಯೊಬ್ಬರಿಗೂ ಅಂತರ್ಜಾಲ ಸೌಲಭ್ಯದ ಅಗತ್ಯವಿರುತ್ತದೆ. ಇದರಿಂದಾಗಿ ದುಬಾರಿ ಅಂತರ್ಜಾಲ ಸೌಲಭ್ಯಗಳನ್ನು ಪಡೆಯುವ ಸಣ್ಣ ಉದ್ದಿಮೆಗಳು ಹೊರೆ ಅನುಭವಿಸಬೇಕಾಗುತ್ತದೆ ಎಂಬ ಮಾತಿತ್ತು. ಆದರೆ ಬಿಲ್ ಗಳನ್ನು ತಿಂಗಳ ಕೊನೆಯಲ್ಲಿ ಗಣಕೀಕೃತ ವಿಧಾನದಿಂದ ಸಲ್ಲಿಸಿದರೆ ಸಾಕು ಎಂದಿರುವುದರಿಂದ ಕಂಪ್ಯೂಟರ್ ಮತ್ತು ಇಂಟರ್ ನೆಟ್ ಅಗತ್ಯ ಬೀಳುವುವದಿಲ್ಲ. ತಿಂಗಳ ಕೊನೆಯಲ್ಲಿ ಸೈಬರ್ ಕೆಫೆಗಳಲ್ಲೇ ಈ ಕೆಲಸ ಮಾಡಬಹುದು.

ಜಿಎಸ್ ಟಿ ದರ ಮುದ್ರಿಸದಿದ್ದರೆ ತಯಾರಕರಿಗೆ ಜೈಲು!ಜಿಎಸ್ ಟಿ ದರ ಮುದ್ರಿಸದಿದ್ದರೆ ತಯಾರಕರಿಗೆ ಜೈಲು!

ತಪ್ಪು ತಿಳಿವಳಿಕೆ 3: ವಸ್ತುಗಳ ಬೆಲೆ ಏರುತ್ತದೆ

ತಪ್ಪು ತಿಳಿವಳಿಕೆ 3: ವಸ್ತುಗಳ ಬೆಲೆ ಏರುತ್ತದೆ

ವಾಸ್ತವ: ಬೆಲೆ ಏರಿಕೆಯಾಗುತ್ತದೆ ಎಂಬ ಆತಂಕವೂ ಎಲ್ಲರಲ್ಲೂ ಇತ್ತು. ಶೇ.18 ಮತ್ತು 28 ರಷ್ಟು ತೆರಿಗೆ ಇರುವುದರಿಂದ ವಸ್ತುಗಳ ಬೆಲೆ ಸಹಜವಾಗಿಯೇ ಏರಿಕೆಯಾಗುತ್ತದೆ ಎಂಬುದು ತಪ್ಪು ತಿಳಿವಳಿಕೆ. ಏಕೆಂದರೆ ಮೊದಲೂ ಇಷ್ಟೇ, ಅಥವಾ ಇದಕ್ಕಿಂತ ಹೆಚ್ಚೇ ಟ್ಯಾಕ್ಸ್ ಇರುತ್ತಿತ್ತು. ಆದರೆ ಅದು ಕಣ್ಣಿಗೆ ಕಾಣುತ್ತಿರಲಿಲ್ಲ. ನಮ್ಮ ಬಿಲ್ ಗಳಲ್ಲಿ ಇದು ಕಾಣಿಸುತ್ತಿರಲಿಲ್ಲವಾದರೂ, ನಾವು ಆ ವಸ್ತುವಿಗೆ ಕೊಡುವ ಬೆಲೆಯಲ್ಲೇ ತೆರಿಗೆಯನ್ನೂ ಸೇರಿಸಿ ನೀಡುತ್ತಿದ್ದೆವು. ಅದರ ಅರಿವು ನಮಗಿರಲಿಲ್ಲ.

ತಪ್ಪು ತಿಳಿವಳಿಕೆ 4: ಸರ್ಕಾರಕ್ಕೆ ಲಾಭವಿಲ್ಲ

ತಪ್ಪು ತಿಳಿವಳಿಕೆ 4: ಸರ್ಕಾರಕ್ಕೆ ಲಾಭವಿಲ್ಲ

ವಾಸ್ತವ: ಜಿಎಸ್ ಟಿಯಿಂದ ಕಾರ್ಪೋರೇಟ್ ವಲಯಗಳು ಲಾಭ ಗಳಿಸುತ್ತವೆಯೇ ಹೊರತು ಸರ್ಕಾರಕ್ಕೆ ಯಾವುದೇ ಲಾಭವಾಗುವುದಿಲ್ಲ ಎಂಬ ಮಾತೂ ಇತ್ತು. ಆದರೆ ಜಿಎಸ್ ಟಿಯಿಂದ ನಿಸ್ಸಂದೇಹವಾಗಿ ಸರ್ಕಾರಗಳೂ ಲಾಭ ಅನುಭವಿಸುತ್ತವೆ.

ನಿತ್ಯ ಬಳಕೆ ಸಾಮಗ್ರಿಗಳ ಮೇಲೆ ಜಿಎಸ್ ಟಿ: ಇನ್ಫೋಗ್ರಾಫಿಕ್ಸ್ ಮಾಹಿತಿನಿತ್ಯ ಬಳಕೆ ಸಾಮಗ್ರಿಗಳ ಮೇಲೆ ಜಿಎಸ್ ಟಿ: ಇನ್ಫೋಗ್ರಾಫಿಕ್ಸ್ ಮಾಹಿತಿ

ತಪ್ಪು ತಿಳಿವಳಿಕೆ 5: ಜಿಎಸ್ ಟಿ ಬಿಟ್ಟು ಬೇರೆ ತೆರಿಗೆ ಇಲ್ಲ

ತಪ್ಪು ತಿಳಿವಳಿಕೆ 5: ಜಿಎಸ್ ಟಿ ಬಿಟ್ಟು ಬೇರೆ ತೆರಿಗೆ ಇಲ್ಲ

ವಾಸ್ತವ: ಜಿಎಸ್ ಟಿ ಬಿಟ್ಟು ಬೇರೆ ತೆರಿಗೆಯನ್ನು ಜನರ ಮೇಲೆ ಹೇರುವುದಿಲ್ಲ ಎಂದು ಸರ್ಕಾರ ಹೇಳಿತ್ತಾದರೂ ಇನ್ನೂ ತಮಿಳುನಾಡಿನಂಥ ಕೆಲ ರಾಜ್ಯಗಳು ಕಜಿಎಸ್ ಟಿ ಹೊರತಾಗಿ ಬೇರೆ ತೆರಿಗೆಯನ್ನು ವಿಧಿಸುತ್ತಿವೆ. ಸಿನೆಮಾ ಟಿಕೆಟ್ ಗಳಲ್ಲಿ ಈ ತೆರಿಗೆ ಹೆಚ್ಚಾಗಿ ಕಂಡುಬರುತ್ತಿದೆ.

ತಪ್ಪು ತಿಳಿವಳಿಕೆ 6: ಜಿಎಸ್ ಟಿಯಿಂದ ಮಾತ್ರ ಪ್ರಗತಿ ಸಾಧ್ಯ

ತಪ್ಪು ತಿಳಿವಳಿಕೆ 6: ಜಿಎಸ್ ಟಿಯಿಂದ ಮಾತ್ರ ಪ್ರಗತಿ ಸಾಧ್ಯ

ವಾಸ್ತವ: ಜಿಎಸ್ ಟಿಯಿಂದಲೇ ಆರ್ಥಿಕ ಪ್ರಗತಿ ಸಾಧ್ಯ ಎಂಬ ಮಾತೂ ಇತ್ತು. ಆದರೆ ಕೇವಲ ಜಿಎಸ್ ಟಿಯಿಂಮದ ಮಾತ್ರವೇ ಆರ್ಥಿಕ ಪ್ರಗತಿ ಸಾಧ್ಯ ಎಂಬ ಮಾತಿನಲ್ಲಿ ಹುರುಳಿಲ್ಲ. ಜಿಎಸ್ ಟಿ ಇಲ್ಲದೆಯೂ ಆರ್ಥಿಕ ಪ್ರಗತಿ ಸಾಧ್ಯವಿದೆ.

ಎಟಿಎಂಯಂತ್ರಗಳ ಮೇಲೆ ಬಿತ್ತು ಜಿಎಸ್ ಟಿ ಬರೆ!ಎಟಿಎಂಯಂತ್ರಗಳ ಮೇಲೆ ಬಿತ್ತು ಜಿಎಸ್ ಟಿ ಬರೆ!

ತಪ್ಪು ತಿಳಿವಳಿಕೆ 7: ಕಾರ್ಡ್ ಪೇಮೆಂಟ್ ನಲ್ಲಿ ಎರಡು ಬಾರಿ GST

ತಪ್ಪು ತಿಳಿವಳಿಕೆ 7: ಕಾರ್ಡ್ ಪೇಮೆಂಟ್ ನಲ್ಲಿ ಎರಡು ಬಾರಿ GST

ವಾಸ್ತವ: ಕಾರ್ಡ್ ಗಳಲ್ಲಿ ಬಿಲ್ ಪಾವತಿಸುವಾಗ ಎರಡು ಬಾರಿ ಜಿಎಸ್ ಟಿ ಕಟ್ಟಬೇಕಾಗುತ್ತದೆ ಎಂಬ ತಪ್ಪುತಿಳಿವಳಿಕೆಯೂ ಇತ್ತು. ಆದರೆ ನಾವು ಕಾರ್ಡ್ ಪೇಮೆಂಟ್ ಮಾಡುವಾಗ ಮೊದಲು ಕಟ್ಟುತ್ತಿದ್ದ 15% ಬದಲು ಈಗ 18 % ಜಿಎಸ್ ಟಿ ಕಟ್ಟಬೇಕಾಗಿರುವದರಿಂದ ತೆರಿಗೆ ಜಾಸ್ತಿಯಾಗಿದೆಯೇ ಹೊರತು, ಎರಡು ಬಾರಿ ಕಟ್ಟಬೇಕಾಗುತ್ತದೆ ಎಂಬುದು ಸುಳ್ಳು.

English summary
GST (Goods and Service tax) in India has already implemented in all over the country. Here are some rumors related to GST and Reality check.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X