ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ಪರಿಣಾಮ: ಮಧ್ಯಮ ವರ್ಗಕ್ಕೆ ಎಲ್‌ಇಡಿ ಸಿಕ್ಕಿತು ಕೈಗೆಟಕುವ ದರದಲ್ಲಿ

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದಿಂದ ಇಂಧನ ಉತ್ಪನ್ನಗಳ ಮೇಲಿನ ಪರೋಕ್ಷ ತೆರಿಗೆಯ ಪ್ರಮಾಣ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದು ನಿಶ್ಚಿತವಾಗಿಯೂ ಕೊನೆಯ ಗ್ರಾಹಕನಿಗೆ ಅದರಲ್ಲಿಯೂ ಮುಖ್ಯವಾಗಿ ಭಾರತದ ಮಧ್ಯಮ ವರ್ಗದ ಜನರಿಗೆ ಬಹುದೊಡ್ಡ ಕಾಣಿಕೆ.

ವಿದ್ಯುಚ್ಛಕ್ತಿ ಆಧಾರಿತ ಸಾಧನಗಳ ದರವು ಸರ್ಕಾರದ ಉನ್ನತ್ ಜೀವನ್ ಅಡಿಯಲ್ಲಿ ಎಲ್ಲರಿಗೂ ಕಡಿಮೆ ದರದಲ್ಲಿ ಎಲ್‌ಇಡಿ ಮತ್ತು ಇತರೆ ಸಾಧನಗಳನ್ನು ತಲುಪಿಸುವ ಯೋಜನೆಯನ್ನು (ಉಜಾಲ) ಸರಕು ಮತ್ತು ಸೇವೆಗಳ ತೆರಿಗೆ ಆಧಾರದಲ್ಲಿ ಪರಿಷ್ಕರಿಸಲಾಗಿದೆ.

ಜಿಎಸ್‌ಟಿಗೂ ಮುನ್ನ 310 ರೂ ದರವಿದ್ದ 9 ವ್ಯಾಟ್ ಬಲ್ಬ್‌ಗಳ ಬೆಲೆ ಈಗ 70 ರೂ. 20 ವ್ಯಾಟ್‌ನ ಎಲ್‌ಇಡಿ ಟ್ಯೂಬ್‌ಲೈಟ್ ಬೆಲೆ 220 ರೂ ಬೆಲೆ ಮಾತ್ರ. ಮತ್ತು 5-ಸ್ಟಾರ್ ಗುಣಮಟ್ಟದ ಫ್ಯಾನ್‌ಗಳು ಕೇವಲ 1,200 ರೂ.ಗೆ ಲಭ್ಯವಾಗುತ್ತಿವೆ.

GST effect: LED bulbs become cheaper

ದರಗಳ ಪರಿಷ್ಕರಣೆ ಬಳಿಕ ಉಜಾಲಾ ಸಾಧನಗಳಿಗೆ ಇಇಎಸ್‌ಎಲ್ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಗ್ರಾಹಕರು ತೆರಬೇಕಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಉಜಾಲಾ ಯೋಜನೆಯಡಿ ಒಟ್ಟು 7.5 ಕೋಟಿ ಗೃಹೋಪಯೋಗಿ ವಸ್ತುಗಳು ಒಳಗೊಳ್ಳುತ್ತಿವೆ. 2018ರ ಅಕ್ಟೋಬರ್ 18ರ ವೇಳೆಗೆ 31,03,69,218 ಎಲ್‌ಇಡಿಗಳನ್ನು ವಿತರಿಸಲಾಗಿದೆ.

2015ರ ಜನವರಿ 5ರಂದು ನರೇಂದ್ರ ಮೋದಿ ಅವರ ಸರ್ಕಾರ 77 ಕೋಟಿ ಅದಕ್ಷ ಬಲ್ಬ್‌ಗಳನ್ನು ಇಂಧನ ದಕ್ಷತಯ ಎಲ್‌ಇಡಿ ಬಲ್ಬ್‌ಗಳ ಮೂಲಕ ಬದಲಿಸುವ ಗುರಿಯೊಂದಿಗೆ ಉಜಾಲಾ ಯೋಜನೆಯನ್ನು ಆರಂಭಿಸಿತು.

GST effect: LED bulbs become cheaper

ಎಲ್‌ಇಡಿ ವಿತರಣೆಯು ವಾರ್ಷಿಕ 3,244 ಕೋಟಿಗೂ ಅಧಿಕ ಕಿಲೋ ವ್ಯಾಟ್ ಇಂಧನವನ್ನು ಉಳಿಸಿದೆ ಮತ್ತು 6,525 ಮೆಗಾ ವ್ಯಾಟ್ ಬೇಡಿಕೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದೆ.

ಮುಖ್ಯವಾಗಿ ಗ್ರಾಹಕರ ವಿದ್ಯುತ್ ಶುಲ್ಕ ಪಾವತಿಯಲ್ಲಿ ವೆಚ್ಚದ ಇಳಿಕೆ ಭಾರಿ ಬದಲಾವಣೆ ತಂದಿದೆ. ಪ್ರತಿ ವರ್ಷ ಅಂದಾಜು 12,963 ಕೋಟಿ ರೂಪಾಯಿ ಹಣ ಉಳಿತಾಯದ ಜತೆಗೆ ವಾರ್ಷಿಕ 2.61 ಕೋಟಿ ಟನ್ ಸಿಓ2 ಉತ್ಪಾದನೆಯನ್ನು ತಗ್ಗಿಸುವಲ್ಲಿ ನೆರವಾಗಿದೆ.

ಸರಕು ಮತ್ತು ಸೇವೆಗಳ ಪೂರೈಕೆಯ ವೆಚ್ಚವನ್ನು ಜಿಎಸ್ಟಿ ಪರೋಕ್ಷವಾಗಿ ಕಡಿಮೆಗೊಳಿಸಿದೆ. ಉತ್ಪಾದನಾ ಪ್ರಕ್ರಿಯೆಯ ಪ್ರತಿ ಹಂತಗಳನ್ನೂ ಜಿಎಸ್ಟಿ ಸುಗಮಗೊಳಿಸಿದೆ. ಉತ್ಪಾದನೆಯ ವಿವಿಧ ಹಂತಗಳನ್ನು ದಾಟಿದ ಬಳಿಕ ಅಂಇಮ ಗ್ರಾಹಕನಿಗೂ ಸುಲಭವಾಗಿ ಕೈಗೆ ದಕ್ಕುತ್ತದೆ.

ಸರಕು ಮತ್ತು ಸೇವೆಗಳನ್ನು ಐದು ತೆರಿಗೆ ಹಂತಗಳನ್ನಾಗಿ ವಿಂಗಡಿಸಲಾಗಿದೆ - 0%, 5%, 12%, 18% ಮತ್ತು 28%. ಆದರೆ, ಪೆಟ್ರೋಲಿಯಂ ಉತ್ಪನ್ನಗಳು, ಆಲ್ಕೋಹಾಲ್ ಮದ್ಯಗಳು, ವಿದ್ಯುತ್‌ ಜಿಎಸ್ಟಿ ಅಡಿಯಲ್ಲಿ ಬಂದಿಲ್ಲ. ಅದರ ಬದಲು ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ತಮ್ಮ ತೆರಿಗೆ ನೀತಿಗೆ ಅನುಗುಣವಾಗಿ ತೆರಿಗೆ ವಿಧಿಸುತ್ತಿವೆ.

English summary
The Indirect tax on energy efficient appliance has been reduced substantially due to the implementation of Goods and Services Tax (GST). Indeed, a boon for end-consumer, especially, middle-class people in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X