ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GST ಮಹತ್ವದ ಸಭೆ: 66 ವಸ್ತುಗಳ ಮೇಲೆ ತೆರಿಗೆ ಕಡಿತ

ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಮಹತ್ವದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ 66 ವಸ್ತುಗಳ ಮೇಲೆ ತೆರಿಗೆ ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿದೆ.

|
Google Oneindia Kannada News

ನವದೆಹಲಿ, ಜೂ 11 (ಪಿಟಿಐ) : ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಮಹತ್ವದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ 66 ವಸ್ತುಗಳ ಮೇಲೆ ತೆರಿಗೆ ಕಡಿತ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ದೇಶದಲ್ಲಿ ಏಕರೂಪ ತೆರಿಗೆ ಪದ್ದತಿ ಜಿಎಸ್ಟಿ ಜುಲೈ ಒಂದರಿಂದ ಜಾರಿಗೆ ಬರಲಿದೆ.

ಭಾನುವಾರ (ಜೂ 11) ನಡೆದ ಸಭೆಯಲ್ಲಿ, 133 ವಸ್ತುಗಳ ಮೇಲೆ ತೆರಿಗೆ ಕಡಿತಗೊಳಿಸಲು ಅಹವಾಲು ಸ್ವೀಕರಿಸಲಾಗಿತ್ತು, ಈ ಪೈಕಿ 66 ವಸ್ತುಗಳ ಮೇಲೆ ತೆರಿಗೆ ಕಡಿತಗೊಳಿಸುವ ತೀರ್ಮಾನಕ್ಕೆ ಇಂದಿನ ಸಭೆಯಲ್ಲಿ ಬರಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.

[ಜಿಎಸ್ಟಿ ಎಂದರೇನು, ಇದರಿಂದ ಯಾರಿಗೆ ಪ್ರಯೋಜನ]

GST Council slashes tax rates for 66 items: Arun Jaitley

ಮನೋರಂಜನಾ ತೆರಿಗೆಯ ವಿಚಾರದಲ್ಲಿ ಬದಲಾವಣೆ ಮಾಡಿರುವ ಕೇಂದ್ರ ಸರಕಾರ, ನೂರು ರೂಪಾಯಿ ಮೇಲ್ಪಟ್ಟ ಟಿಕೆಟ್ ದರಕ್ಕೆ ಶೇ. 28 ಮತ್ತು ನೂರು ರೂಪಾಯಿಗಿಂತ ಕಮ್ಮಿ ಟಿಕೆಟ್ ದರಕ್ಕೆ ಶೇ. 18 ತೆರಿಗೆ ವಿಧಿಸಲು ನಿರ್ಧರಿಸಿದೆ.

ನರೇಂದ್ರ ಮೋದಿ ಸರಕಾರದ ಮಹತ್ವಾಕಾಂಕ್ಷೆಯ ಏಕರೂಪ ತೆರಿಗೆ ಪದ್ದತಿ, ಉತ್ಪಾದಕರಿಂದ ಹಿಡಿದು ಗ್ರಾಹಕರ ತನಕ ದೇಶಾದ್ಯಂತ ಏಕರೂಪದಲ್ಲಿ ಇರಲಿದ್ದು, ಸೆಂಟ್ರಲ್ ಜಿಎಸ್ಟಿ ಮತ್ತು ಸ್ಟೇಟ್ ಜಿಎಸ್ಟಿ ಎಂದು ಎರಡು ವಿಭಾಗದಲ್ಲಿ ಇರಲಿದೆ.

ಕಂಪ್ಯೂಟರ್ ಪ್ರಿಂಟರ್, ಇನ್ಸುಲಿನ್, ಅಗರಬತ್ತಿ, ಗೋಡಂಬಿ, ಪ್ಲಾಸ್ಟಿಕ್ ತಾರ್ಪಾಲಿನ್, ನೋಟ್ ಬುಕ್, ಮಕ್ಕಳ ಕಲರಿಂಗ್ ಪುಸ್ತಕ, ಟ್ರ್ಯಾಕ್ಟರ್ ಗೆ ಸಂಬಂಧಪಟ್ಟ ಉಪಕರಣಗಳು ಸೇರಿದಂತೆ 66 ವಸ್ತುಗಳ ಮೇಲಿನ ತೆರಿಗೆಯಲ್ಲಿ ಕಡಿತಗೊಳಿಸಲಾಗಿದೆ.

ಶೇ. 5, 12, 18 ಮತ್ತು 28 ಸ್ಲ್ಯಾಬ್ ಗಳಲ್ಲಿ ಜಿಎಸ್ಟಿ ಪ್ರಕಟಿಸಿದ ಒಂದು ತಿಂಗಳ ನಂತರ ಜಿಎಸ್ಟಿ ಕೌನ್ಸಿಲ್ ಸಭೆ ಭಾನುವಾರ ನಡೆದಿತ್ತು.

English summary
With the Goods and Services Tax (GST) set for a July roll-out, Union Finance Minister Arun Jaitley on Sunday (Jun 11) said the GST Council has reduced tax rates of 66 items as against representations received for 133 items.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X