ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಾಪಾರಿಗಳು, ರಫ್ತುದಾರರ ಪಾಲಿಗೆ ಜಿಎಸ್ಟಿ ಕೆಟ್ಟ ಪದವಾಗಿದೆ: ಚಿದಂಬರಂ

By Sachhidananda Acharya
|
Google Oneindia Kannada News

ನವದೆಹಲಿ, ಜುಲೈ 1:ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿ ಇಂದಿಗೆ ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ವಿರುದ್ಧ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ವಾಗ್ದಾಳಿ ನಡೆಸಿದರು.

"ಸರ್ಕಾರವು ಕೆಟ್ಟ ಕೆಲಸಗಳನ್ನು ದೊಡ್ಡ ರೀತಿಯಲ್ಲಿ ಮಾಡಿದೆ; ಇದೇ ಅಪನಗದೀಕರಣ. ಅದೇ ದೊಡ್ಡ ವಿಷಯವನ್ನು ಕೆಟ್ಟ ರೀತಿಯಲ್ಲಿ ಅನುಷ್ಠಾನಗೊಳಿಸಿದೆ; ಅದು ಜಿಎಸ್ಟಿ. ಜಿಎಸ್ಟಿಯ ವಿನ್ಯಾಸ, ರಚನೆ, ಮೂಲಸೌಕರ್ಯ, ಜಿಎಸ್ಟಿ ದರಗಳು ಮತ್ತು ಅನುಷ್ಠಾನಗಳ ಎಷ್ಟು ದೋಷಪೂರಿತವಾಗಿದೆ ಎಂದರೆ ವ್ಯಾಪಾರಿಗಳು, ರಫ್ತುದಾರರು, ಉದ್ಯಮಿಗಳು ಮತ್ತು ಸಾಮಾನ್ಯ ನಾಗರಿಕರಲ್ಲಿ ಇದೊಂದು ಕೆಟ್ಟ ಪದವಾಗಿದೆ," ಎಂದು ಪಿ. ಚಿದಂಬರಂ ಕಿಡಿಕಾರಿದ್ದಾರೆ.

ಜಿಎಸ್ಪಿಯಿಂದ ಉತ್ಪಾದನೆ ದರ, ಅಭಿವೃದ್ಧಿ ವೇಗ ಹೆಚ್ಚಳ: ಮೋದಿಜಿಎಸ್ಪಿಯಿಂದ ಉತ್ಪಾದನೆ ದರ, ಅಭಿವೃದ್ಧಿ ವೇಗ ಹೆಚ್ಚಳ: ಮೋದಿ

"ಜಿಎಸ್ಟಿ ಸಂವಿಧಾನ ತಿದ್ದುಪಡಿ ಮಸೂದೆಯಿಂದ ಆರಂಭಿಸಿ ಜಿಎಸ್ಟಿಗೆ ಸಂಬಂಧಿಸಿದಂತೆ ಬಿಜೆಪಿ ಸರ್ಕಾರ ತೆಗೆದುಕೊಂಡ ಪ್ರತಿ ಹೆಜ್ಜೆಯು ದೋಷಪೂರಿತವಾಗಿದೆ," ಎಂದು ಅವರು ಟೀಕಿಸಿದರು.

GST become a bad word among businesspersons, traders, exporters and common citizens: P Chidambaram

ಜಿಎಸ್ಟಿ ಮಸೂದೆ ರಚನೆ ಸಂದರ್ಭ ಮುಖ್ಯ ಆರ್ಥಿಕ ಸಲಹೆಗಾರರ ಜಿಎಸ್ಟಿ ದರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ನೀಡಿದ ಸಲಹೆಯನ್ನು ತಿರಸ್ಕರಿಸಲಾಯಿತು ಎಂದವರು ದೂರಿದ್ದಾರೆ.

English summary
“Government did bad things in a big way - demonetisation, or big things in a bad way - GST. The design, structure, infrastructure backbone, rates and implementation of GST were so flawed that GST has become a bad word among businesspersons, traders, exporters and common citizens," P Chidambaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X