ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದ ಮಾನವರಹಿತ ಗಗನಯಾನಕ್ಕೆ ವಿಘ್ನ, ಉಡಾವಣೆ ಮುಂದೂಡಿಕೆ

|
Google Oneindia Kannada News

ಬೆಂಗಳೂರು, ಜೂನ್ 12: ಇಸ್ರೋದ ಮೊದಲ ಮಾನವರಹಿತ ಗಗನಯಾನವನ್ನು ಕಾರಣಾಂತರಗಳಿಂದ 2021ಕ್ಕೆ ಮುಂದೂಡಲಾಗಿದೆ.

Recommended Video

ಅವಿರೋಧವಾಗಿ ದಾವಣಗೆರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಆಯ್ಕೆಯಾದ ದೀಪಾ ಜಗದೀಶ್|Renukacharya|Oneindia Kannada

ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಇದಾಗಿತ್ತು. ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯೋಜನೆಗಳಲ್ಲಿ ಸಾಕಷ್ಟು ಬದಲಾವಣೆಯಲ್ಲಿ ಮಾಡಿದ್ದು, ಮಾನವರಹಿತ ನೌಕೆಯ ಉಡಾವಣೆಯನ್ನು ಮುಂದೂಡಿದೆ.

ಗಗನಯಾನವು 2022ರಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಇಸ್ರೋದ ಯೋಜನೆಯಾಗಿದೆ.ಮಾನವರಹಿತ ನೌಕೆಯ ಉಡಾವಣೆ ಮುಂದಕ್ಕೆ ಹೋಗಿರುವುದರಿಂದ ಗಗನಯಾನದ ಒಟ್ಟಾರೆ ವೇಳಾಪಟ್ಟಿಯೂ ಬದಲಾಗುವ ಎಲ್ಲಾ ಸಾಧ್ಯತೆಗಳಿವೆ.

ಮೊದಲ ಮಾನವ ರಹಿತ ನೌಕೆಯಲ್ಲಿ ವ್ಯೋಮಮಿತ್ರ ಪ್ರಯಾಣಿಸುವ ಸಾಧ್ಯತೆ ಇದೆ. ಈ ರೋಬೋಟ್‌ ಗಗನಯಾತ್ರಿಗಳಿಗೆ ಸಂಬಂಧಿಸಿದ ಹಲವು ನಿಯತಾಂಕಗಳನ್ನ ಪರೀಕ್ಷಿಸುವ ಸಾಮರ್ಥ್ಯ ಹೊಂದಿದೆ.

ಇಸ್ರೋದ ಯೋಜನೆ ಪ್ರಕಾರ ಮಾನವ ಸಹಿತ ಗಗನಯಾನಕ್ಕೂ ಮುನ್ನ ಪರೀಕ್ಷಾರ್ಥ ಎರಡು ಉಡಾವಣೆಗಳನ್ನು ಇಸ್ರೋ ನಡೆಸಬೇಕಾಗಿತ್ತು. ಇದರಿಂದ ಮುಂದಿನ ಒಂದೇ ವರ್ಷದಲ್ಲಿ ಎರಡೂ ಪರಿಕ್ಷಾರ್ಥ ಉಡಾವಣೆಗಳನ್ನು ಮಾಡಬೇಕಾಗಿದೆ. ಆಗ ಮಾತ್ರ 2022ರಲ್ಲಿ ಗಗನಯಾನ ನಡೆಸಬಹುದಾಗಿದೆ.

2020ರ ಡಿಸೆಂಬರ್ ವೇಳೆಗೆ ಅಥವಾ 2021ರ ಜನವರಿಯಲ್ಲಿ ನಡೆಸಲು ಉದ್ದೇಶಿಸಿದ್ದ ಚಂದ್ರಯಾನ-3 ಕೂಡ ಮುಂದೂಡಿಕೆಯಾಗಲಿದೆ. ಚಂದ್ರಯಾನವನ್ನು ಸ್ಪಷ್ಟವಾಗಿ ಮುಂದಿನ ವರ್ಷಕ್ಕೆ ಮುಂದೂಡಿಕೆ ಮಾಡಲಾಗಿದ್ದು, ಹಲವು ತಂಡಗಳು ಈಗಾಗಲೇ ಈ ಕೆಲಸದಲ್ಲಿ ನಿರತವಾಗಿವೆ.

2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!2020ರಲ್ಲಿ ಮತ್ತಷ್ಟು ಸಾಧನೆ ಮಾಡಲಿದೆ ಇಸ್ರೋ: ಒಂದಲ್ಲಾ ಎರಡಲ್ಲಾ, 25 ಯೋಜನೆಗಳು!

ಚಂದ್ರಯಾನ 3ರ ಚಂದ್ರಯಾನ-2ರಂತೆಯೇ ಇರುತ್ತದೆ. ನಾವು ವಿವಿಧ ವ್ಯವಸ್ಥೆಗಳ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದು ಶಿವನ್‌ ಹೇಳಿದ್ದಾರೆ. ಚಂದ್ರಯಾನದಲ್ಲಿ ನಾಸಾದ ಉಪಕರಣವನ್ನೂ ಕೊಂಡೊಯ್ಯುವ ಕುರಿತು ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

2020ರ ಡಿಸೆಂಬರ್‌ನಲ್ಲಿ ಪ್ರಯೋಗಾರ್ಥ ಉಡಾವಣೆ ನಡೆಯಬೇಕಿತ್ತು

2020ರ ಡಿಸೆಂಬರ್‌ನಲ್ಲಿ ಪ್ರಯೋಗಾರ್ಥ ಉಡಾವಣೆ ನಡೆಯಬೇಕಿತ್ತು

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ವರ್ಷದ ಅಂತ್ಯದಲ್ಲಿ ಗಗನಯಾನ ಯೋಜನೆಯ ಪ್ರಯೋಗಾರ್ಥ ಉಡಾವಣೆ ನಡೆಯಬೇಕಾಗಿತ್ತು. ನೌಕೆಯ ಅಣು ಕವಚವು ಒಳಭಾಗದ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್‌ ಇರುವಂತೆ ಕಾಪಾಡಿಕೊಳ್ಳುತ್ತದೆ. ಭೂಮಿಯ ವಾತಾವರಣದೊಳಗೆ ಗಗನಯಾನ ನೌಕೆ ಮರುಪ್ರವೇಶಿಸಿದಾಗ ಅದರ ಗಾಜಿನ ಮೂಲಕ ಗಗನಯಾತ್ರಿಗಳು ಜ್ವಾಲೆಯನ್ನು ವೀಕ್ಷಿಸಬಹುದಾಗಿದೆ. ಈ ನೌಕೆಯು ಭೂಮಿಯನ್ನು ಪ್ರತಿ 90 ನಿಮಿಷಕ್ಕೊಮ್ಮೆ ಸುತ್ತಲಿದೆ. ಗಗನಯಾತ್ರಿಗಳು ಬಾಹ್ಯಾಕಾಶದಿಂದಲೇ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಗಳನ್ನು ಕಾಣಬಲ್ಲರು.

ಈ ವರ್ಷದ ಪಟ್ಟಿಯಲ್ಲಿ ಮಾನವರಹಿತ ಉಡಾವಣೆ ಇಲ್ಲ

ಈ ವರ್ಷದ ಪಟ್ಟಿಯಲ್ಲಿ ಮಾನವರಹಿತ ಉಡಾವಣೆ ಇಲ್ಲ

ನಮಗೆ ನೀಡಿರುವ ಯೋಜನೆಯ ಪಟ್ಟಿಯಲ್ಲಿಗಗನಯಾನದ ಮಾನವರಹಿತ ಉಡಾವಣೆ ಇಲ್ಲ. ಇತರೆ ಉಪಗ್ರಹಗಳ ಉಡಾವಣೆಯತ್ತ ಗಮನ ಹರಿಸಲಾಗಿದೆ ಎಂದು ವಿಜ್ಞಾನಿಯೊಬ್ಬರು ಮಾಹಿತಿ ನೀಡಿದ್ದಾರೆ. ಗಗನಯಾನ ನೌಕೆಯನ್ನು ಗರಿಷ್ಠ 7 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಸುತ್ತಾಡಿಸಲು ಅನುಕೂಲವಾಗುವಂತೆ ನೌಕೆಯನ್ನು ವಿನ್ಯಾಸಗೊಳಿಸಲಾಗುತ್ತದೆ. ಈ ಯೋಜನೆಗೆ ಒಂದು ಸಾವಿರ ಕೋಟಿ ರೂ. ತಗುಲುತ್ತದೆ. ಮಾರ್ಕ್ 3 ರಾಕೆಟ್ ಮೂಲಕ ಈ ನೌಕೆಯನ್ನು ಉಡಾವಣೆ ಮಾಡಲು ಚಿಂತನೆ ನಡೆಸಲಾಗಿದೆ.

ಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನಚಂದ್ರಯಾನದ ಬಳಿಕ ಇಸ್ರೋದ ಮುಂದಿನ ಯೋಜನೆ ಗಗನಯಾನ

ಮುಂದೂಡಲು ನಿಜವಾದ ಕಾರಣ ತಿಳಿದಿಲ್ಲ

ಮುಂದೂಡಲು ನಿಜವಾದ ಕಾರಣ ತಿಳಿದಿಲ್ಲ

ಮಾನವರಹಿತ ಗಗನಯಾನವನ್ನು ಮುಂದೂಡಲು ನಿಜವಾದ ಕಾರಣ ತಿಳಿದಿಲ್ಲ, ಆದರೆ ಕೊರೊನಾ ಲಾಕ್‌ಡೌನ್ ಈ ಯೋಜನೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಸದ್ಯದ ಪರಿಸ್ಥಿತಿಯಲ್ಲಿ ಮಾನವರಹಿತ ಉಡಾವಣೆ ಈ ವರ್ಷ ಸಾಧ್ಯವಿಲ್ಲ. ನಾವು ಈ ವರ್ಷದ ಆರಂಭದಲ್ಲಿ ಮುಂದೂಡಿಕೆಯಾದ ಜಿಐಸ್ಯಾಟ್‌-1 (GiSAT-1) ಸೇರಿದಂತೆ ಐದರಿಂದ ಆರು ಇತರ ಉಡಾವಣೆಗಳ ಬಗ್ಗೆ ಗಮನ ಹರಿಸಿದ್ದೇವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಪರಿಸ್ಥಿತಿ ನೋಡಿ ತೀರ್ಮಾನ

ಪರಿಸ್ಥಿತಿ ನೋಡಿ ತೀರ್ಮಾನ

ಮುಂದಿನ ವರ್ಷದ ಪರಿಸ್ಥಿತಿ ನೋಡಿ ಮಾನವರಹಿತ ಉಡಾವಣೆಯನ್ನು ಮಾಡಬೇಕೇ ಬೇಡವೇ ಎಂದು ನಿರ್ಧರಿಸಲಾಗುತ್ತದೆ. ಕೊರೊನಾ ವೈರಸ್ ಪ್ರಭಾವ ಮತ್ತಷ್ಟು ಹೆಚ್ಚಾದರೆ ಯೋಜನೆಯನ್ನು ಮುಂದೂಡಲಾಗುತ್ತದೆ. ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸುವ ಗಗನಯಾನ ವ್ಯವಸ್ಥೆ ಯೋಜನೆಗೆ ಇಸ್ರೋ ಕೆಲವು ಪ್ರಮುಖ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ರೀ ಎಂಟ್ರಿ ಮೆಷಿನ್ ಸಾಮರ್ಥ್ಯ, ಮನುಷ್ಯರು ಕೂರುವ ವ್ಯವಸ್ಥೆ, ಅಣು ಸುರಕ್ಷತಾ ವ್ಯವಸ್ಥೆ, ಬಾಹ್ಯಾಕಾಶಕ್ಕೆ ಹೊಂದಿಕೆಯಾಗುವ ಉಡುಪುಗಳು ಒಳಗೊಂಡಿವೆ.

English summary
The first unmanned test flight of Indian rocket Geosynchronous Satellite Launch Vehicle (GSLV), as part of the country''s human space mission Gaganyaan, will not happen this year, said officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X