ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪ್ರದೇಶದಲ್ಲಿ ಮದುವೆಯಾಗಬೇಕು ಎಂದರೆ ವರ 6 ಕಿ.ಮೀ ನಡೆಯಲೇ ಬೇಕಂತೆ

|
Google Oneindia Kannada News

ಡೆಹ್ರಾಡೂನ್​, ಜನವರಿ 28: ಹಿಮಾಲಯದ ತಪ್ಪಲು, ವಿಪರೀತ ಚಳಿ, ಹಿಮಪಾತ ಮನೆಯಿಂದ ಹೊರಬರಲಾರದ ಪರಿಸ್ಥಿತಿ ಅಂದೇ ಮದುವೆ ವರನಾದ್ರೂ ಏನು ಮಾಡ್ತಾನೆ, 6 ಕಿ.ಮೀ ನಡೆದುಕೊಂಡೇ ಬಂದು ಮದುವೆಯಾದ ಘಟನೆ ರುದ್ರಪ್ರಯಾಗ್‌ನಲ್ಲಿ ನಡೆದಿದೆ.

ಈ ಪ್ರದೇಶದಲ್ಲಿ ಜನರು ವಾರಗಟ್ಟಲೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ, ಮತ್ತೊಂದೆಡೆ ಮದುವೆಗೆ ಕೇವಲ 25 ಕ್ಕಿಂತ ಕಡಿಮೆ ಜನರು ಬರುತ್ತಾರೆ, ಜತೆಗೆ, ವರ ಮತ್ತಾತನ ಕಡೆಯವರು ಮದುವೆ ನಡೆಯುತ್ತಿರುವ ಸ್ಥಳ ತಲುಪಲು ಹರಸಾಹಸ ಮಾಡಬೇಕಾಗುತ್ತದೆ. ಈ ಪ್ರಕರಣ ನಡೆದಿದೆ.

ಪ್ರೀತಿ ನಿರಾಕರಣೆ: ಯುವತಿಗೆ ಬೆಂಕಿ ಹಚ್ಚಿ ಕೊಂದ ಪಾಪಿ ಪ್ರೀತಿ ನಿರಾಕರಣೆ: ಯುವತಿಗೆ ಬೆಂಕಿ ಹಚ್ಚಿ ಕೊಂದ ಪಾಪಿ

2002ರಲ್ಲಿ ಒಮ್ಮೆ ಹೀಗೆಯೇ ಭಾರಿ ಹಿಮಪಾತವಾದಾಗ ಮದುವೆಯಾಗಲಿದ್ದ ಯೋಧ ಮತ್ತಾತನ ಮನೆಯವರು ನಡೆದುಕೊಂಡೇ ಮದುವೆ ಛತ್ರ ತಲುಪಿದ್ದರು. ಅದಾದ ಬಳಿಕ ಇಂತಹ ಘಟನೆ ಮರುಕಳಿಸಿದ್ದು ಈಗಲೇ ಎಂದು ರಜನೀಶ್​ ಅವರ ಸಹೋದರ ಸಂಬಂಧಿ ಆಶೀಶ್​ ಹೇಳಿದ್ದಾರೆ.

Groom treks for over 6kms in heavy snow to reach his wedding ceremony in Uttarakhand

ರುದ್ರಪ್ರಯಾಗ್​ನ ಮಕ್ಕು ಮಠ್​ ಎಂಬಲ್ಲಿ ತ್ರಿಯುಗಿನಾರಾಯಣ್​ ಗ್ರಾಮದ ರಜನೀಶ್​ ಕುರ್ಮಾಚಲಿ ಮತ್ತು ಮಕ್ಕು ಮಠ್​ ನಿವಾಸಿ ಯುವತಿ ಜತೆ ಭಾನುವಾರ ಮದುವೆ ನಿಗದಿಯಾಗಿತ್ತು. ಹೆಚ್ಚಿನ ಹಿಮಪಾತ ಕಡಿಮೆ ಇದ್ದ ಕಾರಣ ರಜನೀಶ್​ ಮತ್ತಾತನ ಮನೆಯವರು ಮದುವೆ ಛತ್ರದೆಡೆಗೆ ವಾಹನದಲ್ಲಿ ಪ್ರಯಾಣ ಆರಂಭಿಸಿದ್ದರು.

'ರಫೇಲ್ ಲಗ್ನಪತ್ರಿಕೆ'ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ'ರಫೇಲ್ ಲಗ್ನಪತ್ರಿಕೆ'ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ

ತ್ರಿಯುಗಿನಾರಾಯಣ್​ ಗ್ರಾಮದಿಂದ ಹೊರಟ ವರ ಮತ್ತಾತನ ಕಡೆಯವರು ಮಕ್ಕು ಮಠ್​ನಿಂದ 6 ಕಿ.ಮೀ. ದೂರ ಇರುವಾಗ ಭಾರಿ ಹಿಮಪಾತ ಆರಂಭವಾಯಿತು. ವಾಹನ ಮುಂದೆ ಸಾಗುವುದು ಕಷ್ಟವಾಯಿತು.

ಇದಕ್ಕೆ ಜಗ್ಗದ ವರ ಮತ್ತಾತನ ಕಡೆಯವರು ವಾಹನದಿಂದ ಇಳಿದು 6 ಕಿ.ಮೀ. ನಡೆದುಕೊಂಡು ಮದುವೆ ಛತ್ರವನ್ನು ತಲುಪಿದರು. ವಿವಾಹ ವಿಜೃಂಭಣೆಯಿಂದ ನಡೆಯಿತು.

English summary
A wedding ceremony with only 25 people is rare in Uttarakhand, but one such wedding took place on Friday at Makku Math in Rudraprayag after the groom along with his relatives walked for over 6km in heavy snow to attend the ceremony.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X