ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈತ ಜೆಸಿಬಿಯ ಶಕ್ತಿಯನ್ನು ಸೋಲಿಸುವ ಅಸ್ಸಾಂನ ಬಾಹುಬಲಿ

|
Google Oneindia Kannada News

ಲಖಿಂಪುರ ಆಗಸ್ಟ್ 1: ಭಾರತದ ಕುಸ್ತಿ ತಾರೆ ದಿಲೀಪ್ ಸಿಂಗ್ ರಾಣಾ ಅವರನ್ನು 'ದಿ ಗ್ರೇಟ್ ಖಲಿ' ಎಂದೇ ನಾವು ತಿಳಿದಿದ್ದೇವೆ. ಅವರ ಅಭಿಮಾನಿಯೊಬ್ಬ ತನ್ನನ್ನು ಕುಸ್ತಿ ತಾರೆಯಂತೆ ಮಾಡಿಕೊಂಡಿದ್ದಾನೆ. ಖಲಿಯಂತಾದ ವ್ಯಕ್ತಿ ನೋಡಲು ಸಣ್ಣ. ಕೊಂಚ ಉದ್ದ ಜಾಸ್ತಿ. ಜೊತೆಗೆ ಬಲಶಾಲಿಯೂ ಹೌದು. ಜೆಸಿಬಿಯ ಅಗತ್ಯವನ್ನೂ ಸುಲಭವಾಗಿ ಪೂರೈಸಬಲ್ಲ ಶಕ್ತಿಯನ್ನು ಹೊಂದಿದ್ದಾನೆ. ಭಾರದ ವಸ್ತುಗಳನ್ನು ಎತ್ತುವ ವಿಷಯದಲ್ಲಿ ಆ ಪ್ರದೇಶದಲ್ಲಿ ಬಾಹುಬಲಿಗಿಂತ ಈತ ಕಡಿಮೆಯಿಲ್ಲ. ಅಸ್ಸಾಂನ ಈ 'ಗ್ರೇಟ್ ಖಲಿ' ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿವೆ.

ಭಾರವಾದ ವಸ್ತುಗಳನ್ನು ಸಾಗಿಸಲು ಜೆಸಿಬಿ, ವಾಹನಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ ಅಸ್ಸಾಂನ ವ್ಯಕ್ತಿ ವಾಹನಗಳ ಸಹಾಯವಿಲ್ಲ ಭಾರವಾದ ವಸ್ತುಗಳನ್ನು ಸುಲಭವಾಗಿ ಎತ್ತುತ್ತಾನೆ. ಬರೀ ಎತ್ತುವುದು ಮಾತ್ರವಲ್ಲ ಸ್ಥಳಕ್ಕೂ ಸಾಗಿಸುತ್ತಾನೆ. ಈತನ ಶಕ್ತಿಗೆ ಸ್ಥಳೀಯ ಜನ ಈತನನ್ನು ಬಾಹುಬಲಿ ಎಂದೂ ಕರೆಯುತ್ತಾರೆ. ಬೈಕ್ ಎತ್ತುವುದು, ಭಾರದ ಎತ್ತಿನ ಬಂಡಿಯನ್ನು ಒಬ್ಬನೇ ಎಳೆಯುವ ಮೂಲಕ ಈತ ಹೆಸರಾಗಿದ್ದಾನೆ.

ದಿಲ್ಲಿಯಲ್ಲಿ ಜೆಸಿಬಿ ಘರ್ಜನೆ; JCB ಎಂದರೆ ದಿಲ್ಲಿಯಲ್ಲಿ ಜೆಸಿಬಿ ಘರ್ಜನೆ; JCB ಎಂದರೆ

ಅಲ್ಲಾಯ್ ಮಿನಾರ್

ಅಲ್ಲಾಯ್ ಮಿನಾರ್

ಅಸ್ಸಾಂನ ಜಿತೇನ್ ಡೋಲ್ ವೀಳ್ಯದೆಲೆ ಕೃಷಿಕ. ಅವನ ನಿಜವಾದ ಹೆಸರಿಗಿಂತ ಆತನನ್ನು ಮಿನಾರೆಟ್‌ ಎಂದು ಹೆಚ್ಚು ಜನ ಕರೆಯುತ್ತಾರೆ. ಇದಕ್ಕೆ ಕಾರಣ ಅವರ ದೇಹದ ಉದ್ದ. ಎತ್ತರದ ವಿಷಯದಲ್ಲಿ, ಅವರು ಪ್ರಸಿದ್ಧ ಕುಸ್ತಿ ತಾರೆಗಿಂತ ಕಡಿಮೆಯಿಲ್ಲ. ಈತ 6 ಅಡಿ 8 ಇಂಚು ಎತ್ತರವಿದ್ದಾನೆ. ಅವನ ಎತ್ತರದ ನಿಲುವಿನಿಂದಾಗಿ ಜನರು ಅವನನ್ನು ಅಲ್ಲಾಯ್ ಮಿನಾರ್ ಎಂದು ಕರೆಯುತ್ತಾರೆ. ಜೊತೆಗೆ ಹಳ್ಳಿಯ ಜನರು ಅವನನ್ನು ಅಲ್ಲಾಯಿ ಎಂದು ಕರೆಯುತ್ತಾರೆ. ನಿಂತು ಹೋದ ಬೈಕ್, ಅಥವಾ ಯಾವುದೇ ದ್ವಿಚಕ್ರ ವಾಹನಗಳನ್ನು ಎತ್ತಿಕೊಂಡು ಸಾಗಿಸುತ್ತಾನೆ. ಮಾತ್ರವಲ್ಲದೆ ಭಾರದ ವಾಹನ, ಗಾಡಿ ಇನ್ನಿತರ ವಸ್ತುಗಳನ್ನು ಸಾಗಿಸುವ, ಒಬ್ಬೊಂಟಿಯಾಗಿ ಎಳೆಯುವ ಕೆಲಸದಲ್ಲಿ ಜೆಸಿಬಿಯನ್ನೇ ಮೀರಿಸಿದ್ದಾರೆ.

ಭಾರೀ ಆಹಾರ ಸೇವನೆ

ಭಾರೀ ಆಹಾರ ಸೇವನೆ

ಅಲ್ಲಾಯ್ ಮಿನಾರ್ ಅಸ್ಸಾಂನ ಲಖಿಂಪುರ ಜಿಲ್ಲೆಯ ಜೋನೈ ಗ್ರಾಮದವರು. ಇವರು ಅಡಿಕೆ ಕೃಷಿಕ. ತಮ್ಮ ಹಸಿವನ್ನು ನೀಗಿಸಿಕೊಳ್ಳಲು ಭಾರೀ ಆಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಒಂದೇ ಸಮಯದಲ್ಲಿ, ಅವರು ಎರಡು ಕಿಲೋಗ್ರಾಂಗಳಷ್ಟು ಅಕ್ಕಿ, ಒಂದು ಕಿಲೋಗ್ರಾಂ ಮೀನು ಮತ್ತು 200 ಗ್ರಾಂ ಬಿಸಿ ಮೆಣಸಿನಕಾಯಿಗಳು ಮತ್ತು ಮಾಂಸಕ್ಕೆ ಸಮಾನವಾದ ಇತರ ಮಸಾಲೆಗಳನ್ನು ತಿನ್ನುತ್ತಾರೆ.

ಎಲೆಗಳ ಮೇಲೆ ಊಟ

ಎಲೆಗಳ ಮೇಲೆ ಊಟ

ಅಲ್ಲಾಯ್ ಮಿನಾರ್ ಗೆ ಹಸಿವು ತಡೆಯಲಾಗುವುದಿಲ್ಲ. ಹಸಿವಾದಾಗ ಊಟ ಮಾಡಿಬಿಡಬೇಕು. ಅಲ್ಲಾಯ್ ಗೆ ಊಟ ತಟ್ಟೆಯಲ್ಲಿ ಬರುವುದು ತಡವಾಗುವಂತಿಲ್ಲ. ಆದ್ದರಿಂದ ಅವರಿಗೆ ಎಲೆಗಳ ಮೇಲೆ ಆಹಾರವನ್ನು ನೀಡಲಾಗುತ್ತದೆ. ತಮಗೆ ಹಸಿವು ತಾಳಲಾರದು ಎನ್ನುತ್ತಾರೆ ಅಲ್ಲಾಯ್. ಅವರಿಗೆ ಹಸಿವಾದ ತಕ್ಷಣ ತಿನ್ನಬೇಕು.

ಪ್ರವಾಹದಲ್ಲಿ ಕೊಚ್ಚಿ ಹೋದ ಕೃಷಿ ಭೂಮಿ

ಪ್ರವಾಹದಲ್ಲಿ ಕೊಚ್ಚಿ ಹೋದ ಕೃಷಿ ಭೂಮಿ

49 ವರ್ಷದ ಅಲ್ಲಾಯ್ ಮಹಾನ್ ಖಲಿಯಂತೆ ಆಗಬೇಕೆಂದು ಕನಸು ಕಾಣುತ್ತಾನೆ. ಆದರೆ, ಕುಸ್ತಿ ಕಲಿಯಲು ಅವರಿಗೆ ಯಾವುದೇ ಸೌಲಭ್ಯವಿಲ್ಲ. ಇವರು ಅಡಿಕೆ ಕೃಷಿಕ. ಹೀಗೆಯೇ ಜೀವನ ಸಾಗಿಸುತ್ತಾರೆ. ಅವರ ಬಹುತೇಕ ಕೃಷಿ ಭೂಮಿ ಬ್ರಹ್ಮಪುತ್ರ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಉಳಿದಷ್ಟು ಭೂಮಿಯಲ್ಲಿ ಅಡಿಕೆ ಬೆಳೆದು ಜೀವನವನ್ನು ಸಾಗಿಸುತ್ತಾರೆ.

Recommended Video

ಫಾಝಿಲ್ ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಚೇಸ್ ಮಾಡಿ ಅರೆಸ್ಟ್ ಮಾಡಿದ್ದು ಹೇಗೆ? | *Crime |Oneindia Kannada

English summary
Learn about Baahubali of Assam and the Minar known as 'The Great Khali'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X