ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಜೋಡೋ ಯಾತ್ರೆ: ಸಂಭ್ರಮಾಚರಣೆಯ ಉತ್ಸಾಹ ಕುಗ್ಗುವ ಸಾಧ್ಯತೆ

ಕಾಶ್ಮೀರದಲ್ಲಿ ಭಾರೀ ಹಿಮಪಾತವಾಗುತ್ತಿದ್ದು ಭಾರತ್ ಜೋಡೋ ಯಾತ್ರೆಯ ಗ್ರಾಂಡ್ ಫಿನಾಲೆಗೆ ಹಲವು ವಿರೋಧ ಪಕ್ಷದ ನಾಯಕರು ಭಾಗವಹಿಸಲು ಸಾಧ್ಯವಾಗದಿರಬಹುದು.

|
Google Oneindia Kannada News

ನವದೆಹಲಿ ಜನವರಿ 30: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದ ಸಂಭ್ರಮಾಚರಣೆಯ ಉತ್ಸಾಹ ಇಂದು ಕುಗ್ಗುವ ಸಾಧ್ಯತೆ ಇದೆ. 135 ದಿನಗಳ ಸುದೀರ್ಘ ಕನ್ಯಾಕುಮಾರಿ-ಕಾಶ್ಮೀರ ಯಾತ್ರೆ ಇಂದು ಪೂರ್ಣಗೊಳ್ಳಲಿದೆ. ಹೀಗಾಗಿ ಕಾಂಗ್ರೆಸ್ ಶೇರ್-ಐ-ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೆಗಾ ರ್‍ಯಾಲಿ ಆಯೋಜಿಸಿದೆ. ಇಡೀ ಕಾಂಗ್ರೆಸ್ ನಾಯಕತ್ವದ ಹೊರತಾಗಿ, ವಿರೋಧ ಪಕ್ಷಗಳ ಹನ್ನೆರಡು ನಾಯಕರು ರ್‍ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

Bharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರುBharat Jodo Yatra: ಭಾರತ್ ಜೋಡೋ ಯಾತ್ರೆಯ ಸಮಾರೋಪದಲ್ಲಿ 9 ಪಕ್ಷಗಳು ಗೈರು, 12 ಪಕ್ಷಗಳು ಹಾಜರು

ಆದರೆ ಭಾರೀ ಹಿಮಪಾತದಿಂದಾಗಿ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿ ಮುಚ್ಚುವ ಸಾಧ್ಯತೆ ಇದ್ದು ವಿಮಾನ ಸಂಚಾರಕ್ಕೂ ಅಡ್ಡಿಪಡಿಸಬಹುದು. ಹೀಗಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯ ಕೊನೆಯ ರ್‍ಯಾಲಿಯಲ್ಲಿ ಆಗಮಿಸುವ ನಿರೀಕ್ಷೆಯಿದ್ದ ಹಲವು ವಿರೋಧ ಪಕ್ಷದ ನಾಯಕರು ಭಾಗವಹಿಸಲು ಸಾಧ್ಯವಾಗದಿರಬಹುದು.

ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ

ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ

ಕಡಿಮೆ ಗೋಚರತೆ ಮತ್ತು ನಿರಂತರ ಹಿಮಪಾತದಿಂದಾಗಿ ಶ್ರೀನಗರಕ್ಕೆ ಎಲ್ಲಾ ವಿಮಾನಗಳನ್ನು ವಿಳಂಬಗೊಂಡಿವೆ ಎಂದು ಶ್ರೀನಗರದ ವಿಮಾನ ನಿಲ್ದಾಣದ ನಿರ್ದೇಶಕ ಕುಲದೀಪ್ ಸಿಂಗ್ ರಿಷಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಮಾತ್ರವಲ್ಲದೆ ವಿಸ್ತಾರಾ ಏರ್‌ಲೈನ್ಸ್ ದೆಹಲಿಯಿಂದ ಶ್ರೀನಗರಕ್ಕೆ ತನ್ನ ಎರಡೂ ವಿಮಾನಗಳನ್ನು ದಿನದ ಮಟ್ಟಿಗೆ ರದ್ದುಗೊಳಿಸಿದೆ.

ಸಮಾರೋಪ ಸಮಾರಂಭ ಶ್ರೀನಗರದ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗಲಿದ್ದು, ನಂತರ ಕ್ರೀಡಾಂಗಣದಲ್ಲಿ ರ್‍ಯಾಲಿ ನಡೆಯಲಿದೆ. ಸಮಾರಂಭಕ್ಕೆ 21 ಪಕ್ಷಗಳನ್ನು ಆಹ್ವಾನಿಸಲಾಗಿತ್ತು. ಆದರೆ ಕೆಲವರು ಭದ್ರತೆಯ ಕಾರಣದಿಂದ ಹಾಜರಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ ಮತ್ತು ಟಿಡಿಪಿ ಸಮಾರಂಭಕ್ಕೆ ಹಾಜರಾಗದ ಪಕ್ಷಗಳಲ್ಲಿ ಸೇರಿವೆ.

ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ?

ಕಾರ್ಯಕ್ರಮದಲ್ಲಿ ಯಾರೆಲ್ಲಾ ಭಾಗಿ?

ಭಾನುವಾರ ಲಾಲ್ ಚೌಕ್ ಪ್ರದೇಶದಲ್ಲಿ ರಾಹುಲ್ ಗಾಂಧಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ "ಪಾದಯಾತ್ರೆ" ಮುಕ್ತಾಯಗೊಂಡಿತು. ಆದರೆ ಹಿಮಪಾತಕ್ಕೆ ಸಾಕ್ಷಿಯಾಗಿರುವ ಶ್ರೀನಗರದಲ್ಲಿ ಸೋಮವಾರ ಅಧಿಕೃತ ಸಮಾರೋಪ ನಡೆಯಲಿದೆ.

ಎಂಕೆ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ಶರದ್ ಪವಾರ್ ಅವರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ), ಶಿವಸೇನೆ, ಸಿಪಿಐ(ಎಂ), ಸಿಪಿಐ, ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ), ಕೇರಳ ಕಾಂಗ್ರೆಸ್, ಫಾರೂಕ್ ಅಬ್ದುಲ್ಲಾ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್, ಮೆಹಬೂಬಾ ಮುಫ್ತಿ ಅವರ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ), ಮತ್ತು ಶಿಬು ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ ) ತೇಜಸ್ವಿ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ), ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್), ಉದ್ಧವ್ ಠಾಕ್ರೆ ಸೇರಿದಂತೆ 12 ಪಕ್ಷಗಳು ಪಾಲ್ಗೊಳ್ಳಲು ದೃಢಪಡಿಸಿವೆ.

ಯಾತ್ರೆಯಲ್ಲಿನಡೆದ ಮುಖ್ಯ ಕಾರ್ಯಕ್ರಮಗಳು

ಯಾತ್ರೆಯಲ್ಲಿನಡೆದ ಮುಖ್ಯ ಕಾರ್ಯಕ್ರಮಗಳು

ಕನ್ಯಾಕುಮಾರಿಯಿಂದ ಕಾಶ್ಮೀರ ಯಾತ್ರೆಯು ದೇಶದ ದಕ್ಷಿಣ ತುದಿಯಿಂದ ಸೆಪ್ಟೆಂಬರ್ 7 ರಂದು ಪ್ರಾರಂಭವಾಯಿತು. 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 3,970 ಕಿಮೀ ಕ್ರಮಿಸಿದ ನಂತರ ಶ್ರೀನಗರದಲ್ಲಿ ಜನವರಿ 30 ರಂದು ಕೊನೆಗೊಂಡಿತು.

ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು 100ಕ್ಕೂ ಹೆಚ್ಚು ಕಾರ್ನರ್ ಸಭೆಗಳು ಮತ್ತು 13 ಪತ್ರಿಕಾಗೋಷ್ಠಿಗಳನ್ನು ನಡೆಸಿದರು. ಜೊತೆಗೆ 275 ಕ್ಕೂ ಹೆಚ್ಚು ಯೋಜಿತ ವಾಕಿಂಗ್ ಸಂವಹನಗಳನ್ನು ಮತ್ತು 100 ಕ್ಕೂ ಹೆಚ್ಚು ಕುಳಿತುಕೊಳ್ಳುವ ಸಂವಹನಗಳನ್ನು ಮಾಡಿದರು

ಯಾತ್ರೆಯ ಸ್ಮಾರಕ ಅನಾವರಣ

ಯಾತ್ರೆಯ ಸ್ಮಾರಕ ಅನಾವರಣ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ ಮತ್ತು ಭಾರತ್ ಜೋಡೋ ಯಾತ್ರೆಯ ಸ್ಮಾರಕವನ್ನು ಅನಾವರಣಗೊಳಿಸಲಿದ್ದಾರೆ. ಬಳಿಕ ರ್‍ಯಾಲಿ ನಡೆಯಲಿದೆ.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಭಾರತ್ ಜೋಡೋ ಯಾತ್ರೆಯು ದಕ್ಷಿಣದಿಂದ ಉತ್ತರಕ್ಕೆ ಸಾಗಿದೆ. ಆದರೆ ಇದು ದೇಶಾದ್ಯಂತ ಪರಿಣಾಮ ಬೀರಿದೆ ಮತ್ತು ಈ ಯಾತ್ರೆಯು ದೇಶಕ್ಕೆ ಪರ್ಯಾಯ ದೃಷ್ಟಿಕೋನವನ್ನು ನೀಡಿದೆ ಎಂದು ಪ್ರತಿಪಾದಿಸಿದರು.

English summary
Spirit of celebrating the concluding ceremony of Bharat Jodo Yatra is likely to die down today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X