ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು ಹೆಚ್ಚಳ: ಆಕ್ಸಿಜನ್ ಸಿಲಿಂಡರ್‌ಗೆ ಹೆಚ್ಚಿದ ಬೇಡಿಕೆ

|
Google Oneindia Kannada News

ನವದೆಹಲಿ, ಜುಲೈ 09: ದೇಶಾದ್ಯಂತ ಕೊರೊನಾ ಸೋಂಕು ವಿಪರೀತವಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಲಿಂಡರ್‌ಗಳ ಬೇಡಿಕೆಯೂ ಹೆಚ್ಚಿದೆ.

Recommended Video

Bengaluru has no more ICU beds , patients cry | Oneindia Kannada

ಈ ಸಂದರ್ಭದಲ್ಲಿ ಶೇ.10ಕ್ಕಿಂತಲೂ ಕಡಿಮೆ ರೋಗಿಗಳಿಗೆ ಆಕ್ಸಿಜನ್ ಅಗತ್ಯವಿದೆ. ಅದರೆ ಮನೆಯಲ್ಲಿರುವ ರೋಗಿಗಳೇ ಹೆಚ್ಚು ಆಕ್ಸಿಜನ್ ಸಿಲಿಂಡರ್ ಬಳಕೆ ಮಾಡುತ್ತಿದ್ದಾರೆ. ಸೋಂಕು ಹೆಚ್ಚಳವಾದಷ್ಟು ಆಕ್ಸಿಜನ್‌ಗೆ ಬೇಡಿಕೆ ಹೆಚ್ಚಲಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆಯನ್ನು ಕಡಿಮೆ ಮಾಡಿದ್ದಾರೆ.

ಭಾರತದಲ್ಲಿ ಒಂದೇ ದಿನ 24879 ಕೊರೊನಾ ಕೇಸ್ ಪತ್ತೆ, 487 ಸಾವುಭಾರತದಲ್ಲಿ ಒಂದೇ ದಿನ 24879 ಕೊರೊನಾ ಕೇಸ್ ಪತ್ತೆ, 487 ಸಾವು

ಖಾಸಗಿ ಆಸ್ಪತ್ರೆ ಅಥವಾ ಸಾರ್ವಜನಿಕರು ತಮ್ಮ ಮನೆಗಳಲ್ಲಿರುವ ರೋಗಿಗಳಿಗಾಗಿ ಆಕ್ಸಿಜನ್ ಸಿಲಿಂಡರ್ ಬೇಡಿಕೆ ಇಟ್ಟಿರುವುದರಿಂದ ಹೆಚ್ಚಿನ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸರಬರಾಜಾಗುತ್ತಿಲ್ಲ.

Govts To Homes COVID Case Spike Lifts Demand For Oxygen

-ಇದೀಗ ಸುಮಾರು 5 ಲಕ್ಷ ಆಕ್ಸಿಜನ್ ಸಿಲಿಂಡರ್ ಬಳಕೆಯಾಗುತ್ತಿದೆ
-ನಿತ್ಯ ಸುಮಾರು 1300 ಟನ್‌ ಅಷ್ಟು ಬಳಕೆಯಾಗುತ್ತಿದೆ.
-ಮೇ ತಿಂಗಳಿನಲ್ಲಿ ಕೊರೊನಾ ಸೋಂಕು ಹೆಚ್ಚಾದ ಬಳಿಕ ಸರ್ಕಾರವು 1.03 ಲಕ್ಷ ಆಕ್ಸಿಜನ್ ಸಿಲಿಂಡರ್ ತರಿಸಿಕೊಂಡಿತ್ತು.
ಈಗಾಗಲೇ ದೆಹಲಿಯಲ್ಲಿ 11 ಸಾವಿರ ಆಕ್ಸಿಜನ್ ಸಿಲಿಂಡರ್‌ಗಳು, 4580 ಕಾನ್ಸನ್‌ಟ್ರೇಟರ್ಸ್ ಬೇಡಿಕೆ ಇಟ್ಟಿದ್ದೆವು ಅದರಲ್ಲಿ ಶೇ.50 ರಷ್ಟು ಬಂದಿವೆ ಎಂದು ಸಂಜಯ್ ಗೋಯೆಲ್ ತಿಳಿಸಿದ್ದಾರೆ.

ಸಾಮಾನ್ಯ ದಿನಗಳಿಗಿಂತ ಈಗ ಮನೆಯಲ್ಲಿರುವ ರೋಗಿಗಳೇ ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿರುವ 2 ಸಾವಿರ ರೋಗಿಗಳಲ್ಲಿ ಕೇವಲ ಶೇ.20 ರಷ್ಟು ಮಂದಿ ಮಾತ್ರ ಆಕ್ಸಿಜನ್ ಬಳಕೆ ಮಾಡುತ್ತಿದ್ದಾರೆ.

ಉತ್ತರ ಪ್ರದೇಶವು ಕೇಂದ್ರಕ್ಕೆ 6 ಸಾವಿರ ಹೊಸ ಆಕ್ಸಿಜನ್ ಸಿಲಿಂಡರ್‌ಗಾಗಿ ಬೇಡಿಕೆ ಇಟ್ಟಿದೆ. ಮತ್ತೆ 10 ಸಾವಿರ ಆಕ್ಸಿಜನ್ ಸಿಲಿಂಡರ್ ಪ್ರತ್ಯೇಕವಾಗಿ ನೀಡುವಂತೆಯೂ ತಿಳಿಸಿದೆ.

English summary
Facinng a wave of domestic demand, manufacturers have stopped its export. States, hospitals and even residential societies are snapping it up. And now, experts are warning against its use without medical supervision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X