ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

3 ತಿಂಗಳು ಇಪಿಎಫ್ ಸರ್ಕಾರ ತುಂಬಲಿದೆ; ಷರತ್ತುಗಳು ಅನ್ವಯ

|
Google Oneindia Kannada News

ನವದೆಹಲಿ, ಮೇ 13 : ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನೌಕರರ ಇಪಿಎಫ್ ಹಣವನ್ನು ಭರಿಸಲಿದೆ. ಈ ಮೂಲಕ ಉದ್ಯಮಗಳಿಗೆ ಆಗುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಾಗುತ್ತದೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಘೋಷಣೆ ಮಾಡಿದರು. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ತನಕ ಕಂಪನಿ ಹಾಗೂ ನೌಕರರ ಪಾಲಿನ ಶೇ 12ರಷ್ಟು ಇಪಿಎಫ್ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ.

ಬಂದ್ ಆಯ್ತು ಭಾರತ; 1.37 ಲಕ್ಷ ನೌಕರರ ಖಾತೆಗೆ ಬಂತು ಪಿಎಫ್ ಹಣ ಬಂದ್ ಆಯ್ತು ಭಾರತ; 1.37 ಲಕ್ಷ ನೌಕರರ ಖಾತೆಗೆ ಬಂತು ಪಿಎಫ್ ಹಣ

15 ಸಾವಿರದ ಒಳಗೆ ವೇತನವಿರುವ ನೌಕರರ ಪಿಎಫ್ ಹಣವನ್ನು ಸರ್ಕಾರವೇ ತುಂಬಲಿದೆ. ಕೇಂದ್ರ ಸರ್ಕಾರದ ಈ ಘೋಷಣೆಯಿಂದಾಗಿ 3.67 ಲಕ್ಷ ಕಂಪನಿಗಳ 72.5 ಲಕ್ಷ ಕಾರ್ಮಿಕರಿಗೆ ಅನುಕೂಲವಾಗಲಿದೆ. ಇದಕ್ಕಾಗಿ 2,500 ಕೋಟಿ. ರೂ. ಮೀಸಲಾಗಿಡಲಾಗಿದೆ ಎಂದು ಹಣಕಾಸು ಸಚಿವರು ಹೇಳಿದರು.

ಪಿಎಫ್ ಚಂದಾದಾರರ ಗಮನಕ್ಕೆ ಆನ್ಲೈನ್ ನಲ್ಲೇ UAN ಪಡೆಯಿರಿಪಿಎಫ್ ಚಂದಾದಾರರ ಗಮನಕ್ಕೆ ಆನ್ಲೈನ್ ನಲ್ಲೇ UAN ಪಡೆಯಿರಿ

Govt To Continue EPF Support For Three More Months

ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಯೋಜನೆಯಡಿ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳ ನೌಕರರ ಇಪಿಎಫ್ ಹಣವನ್ನು ಕೇಂದ್ರ ಸರ್ಕಾರವೇ ಭರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಘೋಷಣೆ ಮಾಡಿದ 20 ಲಕ್ಷ ಕೋಟಿ ಮೌಲ್ಯದ ಪ್ಯಾಕೇಜ್ ಅಡಿ ಇದನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ.

ಭಾರತದ ಅಭಿವೃದ್ಧಿಗೆ ಪಂಚಸೂತ್ರದ ಮಂತ್ರ ಜಪಿಸಿದ ಮೋದಿ ಭಾರತದ ಅಭಿವೃದ್ಧಿಗೆ ಪಂಚಸೂತ್ರದ ಮಂತ್ರ ಜಪಿಸಿದ ಮೋದಿ

ಸರ್ಕಾರವೇ ಇಪಿಎಫ್ ಹಣವನ್ನು ಪಾವತಿ ಮಾಡಲು ಕೆಲವು ನಿಯಮಗಳು ಇವೆ. ಕಂಪನಿ ಹಾಗೂ ನೌಕರರ ಪಾಲಿನ ಹಣವನ್ನು ಭರ್ತಿ ಮಾಡಲು ಕಂಪನಿಯಲ್ಲಿ 100 ಕಾರ್ಮಿಕರು ಇರುಬೇಕು ಮತ್ತು ಶೇ 90ರಷ್ಟು ನೌಕರರು ಮಾಸಿಕ 15 ಸಾವಿರ ವೇತನ ಪಡೆಯುತ್ತಿರಬೇಕು.

ಕೇಂದ್ರ ಸರ್ಕಾರವೇ ಇಪಿಎಫ್ ಹಣವನ್ನು ಪಾವತಿ ಮಾಡುವುದರಿಂದ ನೌಕರರ ವೇತನದಲ್ಲಿ ಮೂರು ತಿಂಗಳು ಇಪಿಎಫ್ ಕಡಿತ ಇರುವುದಿಲ್ಲ. ಇದರಿಂದಾಗಿ ಅವರ ಟೇಕ್ ಹೋಂ ಸ್ಯಾಲರಿ ಹೆಚ್ಚಲಿದ್ದು ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಅವರಿಗೆ ಅನುಕೂಲವಾಗಲಿದೆ.

ಇಪಿಎಫ್ಒ ನಿಯಂತ್ರಣ ನಿಯಮಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗಿದೆ. ಶೇ 75 ರಷ್ಟು ಹಣ ಅಥವಾ ಮೂರು ತಿಂಗಳ ಸಂಬಳ ವಿಥ್ ಡ್ರಾ ಮಾಡಲು ಅನುಮತಿ ಸಿಗಲಿದೆ. ಇದರಿಂದ 4 ಕೋಟಿ 80 ಲಕ್ಷ ಚಂದಾದಾರರಿಗೆ ಅನುಕೂಲವಾಗಲಿದೆ.

English summary
Finance Minister Nirmala Sitharaman announced that government will pay the Employee Provident Fund (EPF) contribution of employees for three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X