ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರೀನ್ ಪೀಸ್ ಬ್ಯಾಂಕ್ ಖಾತೆ ಮುಟ್ಟುಗೋಲು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಏ. 9: ವಿದೇಶಿ ಹಣವನ್ನು ಬಳಸಿಕೊಂಡು ದೇಶದ್ರೋದ ಚಟುವಟಿಕೆ ನಡೆಸುತ್ತಿದೆ ಎಂಬ ಆರೋಪ ಎದುರಿಸುತ್ತಿದ್ದ ಎನ್ ಜಿಒ ಗ್ರೀನ್ ಪೀಸ್ ನ ಬ್ಯಾಂಕ್ ಖಾತೆಯನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೇ ಇದರ ನೋಂದಣಿ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದೆ.

ಎನ್ ಜಿಒ ಎಂದು ಗುರುತಿಸಿಕೊಂಡಿದ್ದ ಗ್ರೀನ್ ಪೀಸ್ ವಿದೇಶಿ ಹಣವನ್ನು ತನ್ನ ಖಾತೆಗೆ ಇನ್ನು ಮುಂದೆ ಹಾಕಿಕೊಳ್ಳುವಂತಿಲ್ಲ. ಗ್ರೀನ್ ಪೀಸ್ ವಿದೇಶಿ ಹಣವನ್ನು ತಂದು ಅದನ್ನು ದೇಶದ ಒಳಗಿನ ವಿಧ್ವಂಸಕ ಕೃತ್ಯಕ್ಕೆ ಬಳಸುತ್ತಿತ್ತು ಎಂದು ಕೇಂದ್ರ ಗುಪ್ತಚರ ದಳ ನೀಡಿದ ವರದಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.[ಗ್ರೀನ್ ಪೀಸ್ ಅಂದೆ ಏನು]

india

ಬ್ಯಾಂಕ್ ಖಾತೆ ಮುಟ್ಟುಗೋಲು
ಐಡಿಬಿಐ ಬ್ಯಾಂಕ್, ಐಸಿಐಸಿಐ ಮತ್ತು ಯೆಸ್ ಬ್ಯಾಂಕ್ ನಲ್ಲಿ ಗ್ರೀನ್ ಪೀಸ್ ಹೊಂದಿದ್ದ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಂಸ್ಥೆ ಹೊಂದಿದ್ದ ಎಲ್ಲ ಏಳು ಬ್ಯಾಂಕ್ ಖಾತೆಗಳನ್ನು ಬಂದ್ ಮಾಡಲಾಗಿದೆ.

ಸಂಸ್ಥೆ ನೋಂದಣಿ ಸಹ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಕೇವಲ ಮೂರು ತಿಂಗಳಿಗೆ ನೋಂದಣಿಯಾಗಿದ್ದ ಸಂಸ್ಥೆ ನಂತರ ಕಾನೂನುಬದ್ಧವಾದ ಯಾವ ಕ್ರಮಗಳನ್ನು ಅನುಸರಿಸಿಲ್ಲ. ಈ ಬಗ್ಗೆ ಒಂದು ತಿಂಗಳ ಒಳಗಾಗಿ ಗ್ರೀನ್ ಪೀಸ್ ಸ್ಪಷ್ಟನೆ ನೀಡಬೇಕಾಗಿದೆ.[ಸ್ವದೇಶಿ ಐಟಿ ಕಂಪೆನಿಗಳ ಮೇಲೆ ಗ್ರೀನನ್ ಪೀಸ್‌ ಕಣ್ಣು!]

ವಿಧ್ವಂಸಕ ಕೃತ್ಯಗಳಲ್ಲಿ ಹಣ ಹೂಡಿಕೆ
ಗುಪ್ತಚರ ದಳ ಎನ್ ಜಿಒ ದೇಶದ್ರೋಹದ ಕೆಲಸದಲ್ಲಿ ತೊಡಗಿಕೊಂಡಿರುವ ಬಗ್ಗೆ ಸಮಗ್ರ ವರದಿಯಪೊಂದನ್ನು ನೀಡಿದೆ. ಗ್ರೀನ್ ಪೀಸ್ ಕಾರ್ಯಕರ್ತೆ ಪ್ರಿಯಾ ಪಿಳೈ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದು ಆಕೆಯ ಕಾರ್ಯಚಟುವಟಿಕೆಗಳು ಅನುಮಾನ ಹುಟ್ಟುಹಾಕುವಂತಿದ್ದವು ಎಂದು ಹೇಳಿದೆ.

ಪ್ರಿಯಾ ಸಂಸದರ ಮೇಲೂ ಪ್ರಭಾವ ಬೀರಲು ಯತ್ನಿಸಿದ್ದರು. ಅಲ್ಲದೇ ಸಂಸ್ಥೆ ಭಾರತ ಅರ್ಥ ವ್ಯವಸ್ಥೆ ಕುಂಠಿತವಾಗುವಂಥ ನೀತಿಗಳನ್ನು ಜಾರಿಮಾಡುತ್ತಿತ್ತು ಎಂದು ಗುಪ್ತಚರ ದಳ ಸ್ಪಷ್ಟವಾಗಿ ತಿಳಿಸಿದೆ. ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲೂ ಜನರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

English summary
The Union Government has seized seven bank accounts of Greenpeace and also suspended it's registration. The Union Governments decision comes in the wake of the NGO Greenpeace not being able to explain the flow of foreign funds into its account. Greenpeace has been in the eye of the storm ever since an Intelligence Bureau report accused the NGO of brining in foreign funds and utilising the same for anti national activities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X