ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ಷಣಾ ಸಾಮಗ್ರಿ ಖರೀದಿ ನಿಯಮಗಳಲ್ಲಿ ಬದಲಾವಣೆ: ವಿದೇಶಿ ಹೂಡಿಕೆ ಷರತ್ತು ರದ್ದು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಕ್ಷಣಾ ಸಾಮಗ್ರಿಗಳ ಖರೀದಿಯನ್ನು ವೇಗಗೊಳಿಸಲು ಮತ್ತು ಅಡೆತಡೆಗಳನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದು, ಶಸ್ತ್ರಾಸ್ತ್ರಗಳು, ವಿಮಾನಗಳು ಅಥವಾ ಮಿಲಿಟರಿ ಯಂತ್ರಾಂಶಗಳ ವಿದೇಶಿ ಪೂರೈಕೆದಾರರನ್ನು ದಕ್ಷಿಣ ಏಷ್ಯಾ ರಾಷ್ಟ್ರದಲ್ಲಿ ಹೂಡಿಕೆ ಮಾಡಲು ಒತ್ತಾಯಿಸುವ ನಿಯಮವನ್ನು ರದ್ದುಗೊಳಿಸಿತು.

ರಕ್ಷಣಾ ಸಾಮಗ್ರಿ ಖರೀದಿ ನಿಯಮಗಳನ್ನು ಬದಲಾವಣೆ ಮಾಡಿರುವ ಕೇಂದ್ರವು, ಸರ್ಕಾರ ಮತ್ತು ಕಂಪನಿಗಳ ಅಥವಾ ಸರ್ಕಾರ-ಸರ್ಕಾರದ ನಡುವಿನ ಒಪ್ಪಂದ, ವಿದೇಶಿ ಏಕ ಏಜೆನ್ಸಿ ನಡುವಣ ಒಪ್ಪಂದದಲ್ಲಿ 'ವಿದೇಶಿ ಹೂಡಿಕೆ' ಷರತ್ತನ್ನು ರದ್ದುಪಡಿಸಿದೆ.

L&T ಜೊತೆಗೆ ಸರ್ಕಾರದ ಒಪ್ಪಂದ: ಪಿನಾಕಾ ವೆಪನ್ ಸಿಸ್ಟಮ್ಸ್‌ ಪೂರೈಕೆL&T ಜೊತೆಗೆ ಸರ್ಕಾರದ ಒಪ್ಪಂದ: ಪಿನಾಕಾ ವೆಪನ್ ಸಿಸ್ಟಮ್ಸ್‌ ಪೂರೈಕೆ

ಈ ಹಿಂದೆ ಷರತ್ತಿನ ಪ್ರಕಾರ ಭಾರತವು ವಿದೇಶಿ ಕಂಪನಿಯಿಂದ ರಕ್ಷಣಾ ಸಾಮಗ್ರಿ ಖರೀದಿಸಿರೆ, ಆ ಕಂಪನಿಯು ಒಪ್ಪಂದದ ಒಂದು ಭಾಗವನ್ನು ಭಾರತದಲ್ಲಿ ಹೂಡಿಕೆ ಮಾಡಬೇಕಿತ್ತು. ಆದರೆ ಈ ಷರತ್ತನ್ನು ಈಗ ತೆಗೆದುಹಾಕಲಾಗಿದೆ. 2006ರಲ್ಲಿ ಯುಪಿಎ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿತ್ತು.

Indian Govt Scraps Investment Rule For Foreign Weapons Suppliers

36 ರಾಫೆಲ್ ಫೈಟರ್ ಜೆಟ್‌ಗಳನ್ನು ಪೂರೈಸುವ ಒಪ್ಪಂದದಿಂದ ಭಾರತವು ಫ್ರಾನ್ಸ್‌ನ ಡಾಸೊ ಏವಿಯೇಷನ್ ಮತ್ತು ಭಾರತ ಸರ್ಕಾರದ ನಡುವಣ ಒಪ್ಪಂದದಂತೆ ಭಾರತವು ಯುದ್ಧವಿಮಾನಗಳನ್ನು ಖರೀದಿಸಿತ್ತು. ವಿದೇಶಿ ಪಾಲುದಾರಿಕೆ ಷರತ್ತಿನ ಅನ್ವಯ ಈ ಕಂಪನಿಯು ವಿಮಾನದ ತಂತ್ರಜ್ಞಾನವನ್ನು ಭಾರತದ 'ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)' ವರ್ಗಾವಣೆ ಮಾಡಬೇಕಿತ್ತು. ಆದರೆ ಈ ತಂತ್ರಜ್ಞಾನ ವರ್ಗಾವಣೆಯಾಗಿಲ್ಲ ಎಂದು ಸಿಎಜಿ ವರದಿಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು.

ಆದರೆ ಈಗ ಆ ಷರತ್ತನ್ನು ಕೇಂದ್ರ ಸರ್ಕಾರ ಕೈ ಬಿಟ್ಟಿದ್ದು ರಕ್ಷಣಾ ಸಾಮಗ್ರಿಗಳ ಖರೀದಿಗೆ ಚುರುಕು ಮುಟ್ಟಿಸಿದೆ.

English summary
India scrapped a rule that forced foreign suppliers of weapons, aircraft or military hardware to invest in the South Asian nation, as Prime Minister Narendra Modi seeks to accelerate defense purchases and reduce red tape.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X