ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮದು ಮತಗಳನ್ನು ಆಧರಿಸಿದ ಯೋಜನೆಗಳಲ್ಲ: ಮೋದಿ

|
Google Oneindia Kannada News

ಸಿಸ್ಸು (ಹಿಮಾಚಲ ಪ್ರದೇಶ) ಅಕ್ಟೋಬರ್ 3: ಎಲ್ಲರಿಗಾಗಿ ಅಭಿವೃದ್ಧಿ ಎಂಬುದೊಂದೇ ಈಗ ನಮ್ಮ ಗಮನವಾಗಿದೆ. ಯಾವುದೇ ಪ್ರದೇಶದ ಮತಗಳ ಪ್ರಮಾಣವನ್ನು ಗುರಿಯಾಗಿರಿಸಿಕೊಂಡು ನಮ್ಮ ಸರ್ಕಾರ ಹೊಸ ಯೋಜನೆಗಳನ್ನು ಪ್ರಕಟಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕೊರೊನಾ ವೈರಸ್ ಪಿಡುಗು ಆರಂಭವಾದ ಬಳಿಕ ಆರು ತಿಂಗಳಿಗೂ ಹೆಚ್ಚು ಸಮಯದ ನಂತರ ಮೊದಲ ಬಾರಿಗೆ ಅವರು ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದರು. ಅಟಲ್ ಟನಲ್ ಯೋಜನೆಯು ದೇಶದ ಪ್ರತಿಯೊಬ್ಬ ಜನರಿಗೂ ಮತ್ತು ದೇಶದ ಪ್ರತಿ ಪ್ರದೇಶಕ್ಕೂ ಅಭಿವೃದ್ಧಿಯ ಪ್ರಯೋಜನ ತಲುಪಬೇಕೆಂಬ ಕೇಂದ್ರ ಸರ್ಕಾರ ಉದ್ದೇಶದ ಭಾಗವಾಗಿದೆ ಎಂದರು.

ಐತಿಹಾಸಿಕ ಅಟಲ್ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿಐತಿಹಾಸಿಕ ಅಟಲ್ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

ಹಿಂದಿನ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ನೆನಪಿಸಿಕೊಂಡು ನೋಡಿ, ಲಾಹೌಲ್ ಸ್ಪಿಟಿಯಂತಹ ಅನೇಕ ಪ್ರದೇಶಗಳ ಸ್ಥಿತಿ ಹೇಗಿತ್ತು? ಅವರ ಕಷ್ಟಗಳನ್ನು ಅವರೇ ನಿಭಾಯಿಸಿಕೊಳ್ಳುವಂತೆ ಬಿಡಲಾಗಿತ್ತು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Govt Schemes Are No More Based On The Votes: Narendra Modi

ಇದಕ್ಕೆ ಕಾರಣ ಕೆಲವು ಜಿಲ್ಲೆಗಳು ರಾಜಕೀಯ ಪ್ರಯೋಜನಗಳನ್ನು ತಲುಪಿಸಿರಲಿಲ್ಲ. ಈಗ ಅಭಿವೃದ್ಧಿಯು ಪ್ರತಿಯೊಬ್ಬರ ಹಾಗೂ ಎಲ್ಲರ ನಂಬಿಕೆಯೊಂದಿಗೆ ಸಾಗುತ್ತಿದೆ. ಸರ್ಕಾರದ ಕೆಲಸದ ಮಾದರಿಯಲ್ಲಿ ಬದಲಾವಣೆಯಾಗಿದೆ. ಈಗ ಒಂದು ಪ್ರದೇಶದಲ್ಲಿ ಎಷ್ಟು ಮತಗಳಿವೆ ಎಂಬ ಆಧಾರದಲ್ಲಿ ಯೋಜನೆಗಳು ರೂಪುಗೊಳ್ಳುತ್ತಿಲ್ಲ. ಯಾವ ಭಾರತೀಯನಿಗೂ ಯೋಜನೆಯ ಪ್ರಯೋಜನ ಸಿಗದಂತೆ ಆಗಬಾರದು ಎಂಬ ಪ್ರಯತ್ನಗಳು ನಡೆಯುತ್ತಿವೆ ಎಂದರು.

English summary
PM Narendra Modi said that, the new schemes of government are no more based on the quantum of votes from an area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X