ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಂಕು ಹೆಚ್ಚಳ ಭೀತಿ ನಡುವೆ ಸರ್ಕಾರದಿಂದ ಆತಂಕಕಾರಿ ನಿರ್ಧಾರ

|
Google Oneindia Kannada News

ನವದೆಹಲಿ, ಜುಲೈ 7: ಕೊರೊನಾವೈರಸ್ ಸೋಂಕು ಹರಡದಂತೆ ಮಾಸ್ಕ್ ಧರಿಸುವುದು, ಹ್ಯಾಂಡ್ ಸ್ಯಾನಿಟೈಸರ್ ಬಳಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಆರೋಗ್ಯ ಇಲಾಖೆ ಪದೇ ಪದೇ ಹೇಳುತ್ತಿದೆ. ಭಾರತದಲ್ಲಿ ಕೊವಿಡ್ 19 ಸೋಂಕು ಹೆಚ್ಚಳವಾಗಿದ್ದು, ಜಾಗತಿಕವಾಗಿ ಎರಡನೇ ಸ್ಥಾನಕ್ಕೇರಿದೆ. ಈ ನಡುವೆ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರ ಆತಂಕಕಾರಿಯಾಗಿದೆ.

ಮಾರ್ಚ್ ತಿಂಗಳಿನಲ್ಲಿ ಜನತಾ ಕರ್ಫ್ಯೂಗೂ ಮುನ್ನ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಅಗತ್ಯ ವಸ್ತುಗಳ ಪಟ್ಟಿಗೆ ಸೇರಿಸಲಾಗಿತ್ತು. ಆದರೆ, ಈಗ ಫೇಸ್ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ ಎಂದು ಅಗತ್ಯ ಸೇವೆಗಳ ಕಾಯ್ದೆ 1955ಗೆ ತಿದ್ದುಪಡಿ ಮಾಡಿ ಆದೇಶ ಹೊರಡಿಸಲಾಗಿದೆ.

Govt Removes Face Masks, Hand Sanitisers From Essential Commodities List

ಮಾಸ್ಕ್ ಧರಿಸುವುದು ,ಸ್ಯಾನಿಟೈಸರ್ ಬಳಕೆ ಬಗ್ಗೆ ರಾಜ್ಯಗಳಿಂದ ಪ್ರತಿಕೂಲ ಪ್ರತಿಕ್ರಿಯೆ ಬಂದಿಲ್ಲವಾದ್ದರಿಂದ ಜೂನ್ 30ರಿಂದಲೇ ಜಾರಿಗೆ ಬರಲಿದೆ ಎಂದು ಪ್ರತಿಯಲ್ಲಿ ಹೇಳಲಾಗಿದೆ.

ಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು 'ಗಂಭೀರ' ಕೊರೊನಾ ಪ್ರಕರಣಗಳುಅಮೆರಿಕ ಬಿಟ್ಟರೆ ಭಾರತದಲ್ಲೇ ಹೆಚ್ಚು 'ಗಂಭೀರ' ಕೊರೊನಾ ಪ್ರಕರಣಗಳು

Govt Removes Face Masks, Hand Sanitisers From Essential Commodities List

ಈ ಹಿಂದಿನ ಆದೇಶದಂತೆ ಅಗತ್ಯ ಸೇವೆಗಳ ಪಟ್ಟಿಯಲ್ಲಿ ಸರ್ಜಿಕಲ್ ಮಾಸ್ಕ್ ಒಂದಕ್ಕೆ ರೂ.10, 200 ಎಂಎಲ್ ಸ್ಯಾನಿಟೈಸರ್ ಗೆ ರೂ.100 ದರವನ್ನು ನಿಗದಿ ಮಾಡಲಾಗಿತ್ತು. ಆದರೆ, ಈಗ ಮಾಸ್ಕ್, ಸ್ಯಾನಿಟೈಸರ್ ಬೆಲೆ ಮೇಲೆ ನಿಯಂತ್ರಣ ಇಲ್ಲದ್ದಂತಾಗುತ್ತದೆ.

ಅತ್ರಿಮೆಡ್‌ ಫಾರ್ಮಾದಿಂದ ಗಿಡಮೂಲಿಕೆಗಳಿಂದ ತಯಾರಿಸಿದ ಹ್ಯಾಂಡ್‌ ಸ್ಯಾನಿಟೈಸರ್‌ಅತ್ರಿಮೆಡ್‌ ಫಾರ್ಮಾದಿಂದ ಗಿಡಮೂಲಿಕೆಗಳಿಂದ ತಯಾರಿಸಿದ ಹ್ಯಾಂಡ್‌ ಸ್ಯಾನಿಟೈಸರ್‌

Govt Removes Face Masks, Hand Sanitisers From Essential Commodities List

ಕೇಂದ್ರ ಸರ್ಕಾರ ಹೊರಡಿಸಿದ್ದ ಗೆಜೆಟ್ ನೋಟಿಫಿಕೇಷನ್ ನಂತೆ, 2 ಪ್ಲೇ ಮಾಸ್ಕ್ 8 ರೂ, 3 ಪ್ಲೇ ಸರ್ಜಿಕಲ್ ಮಾಸ್ಕ್ 10ರೂ ಗಿಂತಲೂ ಹೆಚ್ಚು ದರದಲ್ಲಿ ಮಾರುವಂತಿಲ್ಲ. 200 ಎಂಎಲ್ ಸ್ಯಾನಿಟೈಸರ್ 100 ರು ದರದಲ್ಲೇ ಮಾರಾಟ ಮಾಡಬೇಕು ಎಂದು ದರ ನಿಗದಿ ಮಾಡಲಾಗಿತ್ತು.

English summary
Covid cases are increasing in India but, Union Government has removed Face Masks, Hand Sanitisers From Essential Commodities List.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X