ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking:ರಸಗೊಬ್ಬರ ಸಬ್ಸಿಡಿಗೆ 1.10ಲಕ್ಷ ಕೋಟಿ ರೂ. ಹೆಚ್ಚುವರಿ ಹಣ

|
Google Oneindia Kannada News

ನವದೆಹಲಿ, ಮೇ 21: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕಗಳನ್ನು ಇಳಿಸುವ ಮೂಲಕ ಸಾಮಾನ್ಯ ಜನತೆಗೆ ಗುಡ್ ನ್ಯೂಸ್ ನೀಡಿತ್ತು. ಇದರ ಜೊತೆಗೆ ರೈತರಿಗೈ ಸಂತೋಷ ತರುವ ವಿಷಯವನ್ನು ಹಣಕಾಸುವ ಸಚಿವೆ ನಿರ್ಮಲಾ ಸೀತರಾಮನ್ ಘೋಷಿಸಿದ್ದಾರೆ.

2022-23 ಸಾಲಿನ ಆಯವ್ಯಯದಲ್ಲಿ ರಸಗೊಬ್ಬರಗಳಿಗೆ ಸಬ್ಸಿಡಿಯಾಗಿ 1,05,222 ಕೋಟಿ ರೂಗಳನ್ನು ಮೀಸಲಿಡಲಾಗಿತ್ತು. ಶನಿವಾರ ಆ ಸಬ್ಸಿಡಿಗೆ ಹೆಚ್ಚುವರಿಯಾಗಿ 1.10 ಲಕ್ಷ ಕೋಟಿ ರೂ ಸೇರಿಸಿರುವುದಾಗಿ ನಿರ್ಮಲಾ ಸೀತರಾಮನ್ ತಿಳಿಸಿದ್ದಾರೆ.

ಅಬಕಾರಿ ಸುಂಕ ಕಡಿತ; ಪೆಟ್ರೋಲ್ ಬೆಲೆ 9.5ರೂ., ಡೀಸೆಲ್ ಬೆಲೆ 7 ರೂ. ಇಳಕೆ

ಈ ಕುರಿತು ಟ್ವೀಟ್ ಮಾಡಿರುವ ನಿರ್ಮಲಾ ಸೀತರಾಮನ್‌, " ಜಾಗತಿಕವಾಗಿ ರಸಗೊಬ್ಬರಗಳ ಬೆಲೆಗಳು ಏರುತ್ತಿದ್ದರೂ, ನಾವು ನಮ್ಮ ರೈತರನ್ನು ಅಂತಹ ಬೆಲೆ ಏರಿಕೆಯಿಂದ ರಕ್ಷಿಸಿಸಿದ್ದೇವೆ. ಬಜೆಟ್‌ನಲ್ಲಿ 1. 05 ಲಕ್ಷ ಕೋಟಿ ರಸಗೊಬ್ಬರ ಸಬ್ಸಿಡಿ ಜೊತೆಗೆ ಹೆಚ್ಚುವರಿಯಾಗಿ 1.10 ಲಕ್ಷ ಕೋಟಿ ರೂಗಳನ್ನು ಸೇರಿಸುವ ಮೂಲಕ ರೈತರನ್ನು ಉಳಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

Govt provides additional 1.10 crore for fertilizer subsidy, says Nirmala Sitharaman

ಸರಣಿ ಟ್ವೀಟ್ ಮಾಡಿರುವ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೊತೆ ಚರ್ಚಿಸಿ ಬಡ ಮತ್ತು ಮಧ್ಯಮ ಜನರಿಗೆ ಅನುಕೂಲವಾಗುವಂತಹ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಪೆಟ್ರೋಲ್ ಮತ್ತು ಡೀಸೆಲ್, ಬೆಲಯಲ್ಲಿ ಇಳಿಕೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಪ್ರತಿ ಅಡುಗೆ ಅನಿಲದ ಸಿಲಿಂಡರ್‌ಗೆ 200 ರೂ. ಸಬ್ಸಿಡಿ ನೀಡಲು ನಿರ್ಧರಿಸಿದೆ. ಇದರ ಜೊತೆಗೆ ಸಿಮೆಂಟ್ ಬೆಲೆಯನ್ನು ಕಡಿಮೆ ಮಾಡಲು ಉತ್ತಮ ಲಾಜಿಸ್ಟಿಕ್ಸ್ ಮೂಲಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ಲಾಸ್ಟಿಕ್ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಮೇಲಿನ ಕಸ್ಟಮ್ಸ್ ಸುಂಕದಲ್ಲಿ ಕಡಿತ ಮಾಡಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

English summary
Union Finance Minister Nirmala Sitharaman on Saturday made several announcements.In addition to the fertilizer subsidy of Rs 1.05 lakh crore in the budget, she said an additional amount of Rs 1.10 lakh crore is being provided to further cushion our farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X