ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೈಕ್ಷಣಿಕ ಸಂಸ್ಥೆಗಳ ಎಲ್ಲ ವ್ಯವಹಾರವೂ ಡಿಜಿಟಲ್, ಕೇಂದ್ರದ ಕಟ್ಟಪ್ಪಣೆ

|
Google Oneindia Kannada News

ನವದೆಹಲಿ, ಜೂನ್ 7: ಮುಂದಿನ ಶೈಕ್ಷಣಿಕ ವರ್ಷದಿಂದ ಯಾವುದೇ ವಿಶ್ವ ವಿದ್ಯಾಲಯ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳು ನಗದು ಮೂಲಕ ಶುಲ್ಕ ಸ್ವೀಕರಿಸಬಾರದು ಎಂದು ಸೂಚನೆಯನ್ನು ಕೇಂದ್ರ ಸರಕಾರ ನೀಡಿದೆ.

ಈ ನಿಯಮ ದೇಶದಾದ್ಯಂತ ಲಾಗೂ ಆಗುತ್ತದೆ. ಈ ಬಗ್ಗೆ ಅಗತ್ಯ ಸೂಚನೆ ನೀಡುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಯುಜಿಸಿಗೆ ತಿಳಿಸಿದೆ. ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಹಣಕಾಸು ಸ್ವೀಕಾರವನ್ನು ಡಿಜಿಟಲ್ ಮಾದರಿಯಲ್ಲೇ ಮಾಡಬೇಕಾಗುತ್ತದೆ.[ಪೇಟಿಯಂ ವ್ಯಾಲೆಟ್ ಗೂ ಪೇಮೆಂಟ್ ಬ್ಯಾಂಕಿಗೂ ಏನು ವ್ಯತ್ಯಾಸ?]

Govt not to allow cash fees payments in varsities, colleges

ಬರೀ ಸ್ವೀಕಾರವೊಂದೇ ಅಲ್ಲ, ಪಾವತಿಯನ್ನೂ ಡಿಜಿಟಲ್ ಮಾದರಿಯಲ್ಲೇ ಮಾಡಬೇಕಾಗುತ್ತದೆ. ಸಿಬ್ಬಂದಿ ವೇತನ, ಪರೀಕ್ಷಾ ಶುಲ್ಕ ಸೇರಿದಂತೆ ಸಂಸ್ಥೆಯ ಎಲ್ಲ ವ್ಯವಹಾರಗಳಿಗೆ ಇದೇ ನಿಯಮ ಅನ್ವಯ ಆಗುತ್ತದೆ. ಒಟ್ಟಾರೆ ಈಗ ಯಾವುದೆಲ್ಲ ನಗದು ವ್ಯವಹಾರಗಳು ನಡೆಯುತ್ತಿವೆಯೋ ಅವೆಲ್ಲವನ್ನೂ ಡಿಜಿಟಲ್ ಆಗಿ ಬದಲಿಸಬೇಕು ಎಂಬುದು ಸೂಚನೆಯ ಹೂರಣ.[ಶೀಘ್ರದಲ್ಲೇ ಬ್ಯಾಂಕ್ ಅಕೌಂಟ್ ಪೋರ್ಟಬಿಲಿಟಿ ವ್ಯವಸ್ಥೆ ಜಾರಿ]

ಈ ಉದ್ದೇಶಕ್ಕಾಗಿಯೇ ನೋಡಲ್ ಅಧಿಕಾರಿಯನ್ನು ನೇಮಿಸಿ ಮತ್ತು ತಿಂಗಳು ತಿಂಗಳು ವರದಿಯನ್ನು ಯುಜಿಸಿಗೆ ಕಳಿಸಿ ಎಂದು ಕೂಡ ಸೂಚಿಸಲಾಗಿದೆ. ಭೀಮ್ ಅಪ್ಲಿಕೇಷನ್ ಬಳಕೆಯನ್ನು ಪ್ರೋತ್ಸಾಹಿಸಿ, ಡಿಜಿಟಲ್ ವ್ಯವಹಾರವನ್ನು ಹೆಚ್ಚು ಮಾಡುವುದರ ಕಡೆಗೆ ಇದು ಮಹತ್ವದ ಹೆಜ್ಜೆಯಾಗಿದೆ.

English summary
The government has directed all universities and higher educational institutions across the country to ensure that no fees payments are made by students in cash mode from the upcoming academic session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X