ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಮೇಲೆ ಕಣ್ಣಿಟ್ಟು ಮಂಡಿಸುತ್ತಿರುವ ಬಜೆಟ್ ಇದು : ಖರ್ಗೆ

|
Google Oneindia Kannada News

Recommended Video

Union Budget 2019 : ಮೋದಿ ಸರ್ಕಾರದ ಬಜೆಟ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು ಹೀಗೆ

ನವದೆಹಲಿ, ಫೆಬ್ರವರಿ 01 : 'ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಲವು ಹೊಸ ಕೊಡುಗೆಗಳನ್ನು ಘೋಷಣೆ ಮಾಡುವ ಸಾಧ್ಯತೆ ಇದೆ' ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಶುಕ್ರವಾರ ಸಂಸತ್ ಭವನದ ಮುಂದೆ ಮಾಧ್ಯಮಗಳ ಜೊತೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, 'ಇದುವರೆಗೂ ಸರ್ಕಾರ ಮಂಡನೆ ಮಾಡಿದ ಯಾವ ಬಜೆಟ್ ಸಹ ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಇರಲಿಲ್ಲ' ಎಂದು ಆರೋಪಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ಮೋದಿಯಿಂದ ಮತದಾರರ ಓಲೈಕೆಯ ಬಜೆಟ್?ಚುನಾವಣೆ ಹಿನ್ನೆಲೆಯಲ್ಲಿ ಮೋದಿಯಿಂದ ಮತದಾರರ ಓಲೈಕೆಯ ಬಜೆಟ್?

'ಲೋಕಸಭಾ ಚುನಾವಣೆಗೆ ಕೇವಲ 4 ತಿಂಗಳು ಉಳಿಸಿದೆ. ಈ ಬಜೆಟ್‌ನಲ್ಲಿ ಹಲವು ಜನಪರ ಘೋಷಣೆಗಳನ್ನು ಮಾಡುವ ನೀರಿಕ್ಷೆ ಇದೆ. ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಂಡನೆ ಮಾಡುತ್ತಿರುವ ಬಜೆಟ್ ಇದಾಗಿದೆ' ಎಂದು ಖರ್ಗೆ ಅಭಿಪ್ರಾಯಪಟ್ಟರು.

ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆಆದಾಯ ತೆರಿಗೆ ಮಿತಿ 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಸಾಧ್ಯತೆ

Govt may announce populist schemes in budget says Mallikarjun Kharge

ಹಣಕಾಸು ಸಚಿವರು ಆಗಿರುವ ಪಿಯೂಷ್ ಘೋಯೆಲ್ ಅವರು ಇಂದು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳು ಇರುವುದರಿಂದ ಬಜೆಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಇವೆ.

ಸಂಸತ್‌ ಭವನಕ್ಕೆ ಈಗಾಗಲೇ ಆಗಮಿಸಿರುವ ಪಿಯೂಷ್ ಘೋಯೆಲ್ ಅವರು ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಮಂಡಿಸಲು ಅನುಮೋದನೆಯನ್ನು ಪಡೆದಿದ್ದಾರೆ. ಸಂಸತ್ ಭವನಕ್ಕೆ ಆಗಮಿಸುವ ಮೊದಲು ಅವರು ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದರು.

English summary
Lok Sabha Congress leader Mallikarjun Kharge said that, They'll try to introduce populist schemes in the Budget keeping an eye on Lok Sabha polls. Budgets they've presented so far haven’t really benefitted general public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X