• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಮಂದಿರಕ್ಕೆ ಹೋಗುವವರು ಈ ನಿಯಮಗಳನ್ನು ಗಮನಿಸಿ

|

ನವದೆಹಲಿ, ಅಕ್ಟೋಬರ್ 6: ಆರೇಳು ತಿಂಗಳಿನಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಅವಕಾಶದಿಂದ ವಂಚಿತರಾದ ಚಿತ್ರಪ್ರೇಮಿಗಳಿಗೆ ಕೇಂದ್ರ ಸರ್ಕಾರ ಸಂತಸದ ಸುದ್ದಿ ನೀಡಿದೆ. ಮಾತ್ರವಲ್ಲ, ಇಷ್ಟು ಸಮಯದಿಂದ ಉಸಿರು ಕಟ್ಟಿದ ಸ್ಥಿತಿಯಲ್ಲಿದ್ದ ಚಿತ್ರೋದ್ಯಮಕ್ಕೂ ತುಸು ಆಮ್ಲಜನಕ ಸಿಕ್ಕಂತಾಗಿದೆ. ಅಕ್ಟೋಬರ್ 15ರಿಂದ ಚಿತ್ರಮಂದಿರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಇದರಿಂದ ದೇಶದಾದ್ಯಂತ ವಿವಿಧ ನಿಬಂಧನೆಗಳೊಂದಿಗೆ ಚಿತ್ರಮಂದಿರಗಳು ತೆರೆಯಲಿದ್ದು, ಸಿನಿಮಾ ಪ್ರದರ್ಶನಗಳು ಶುರುವಾಗಲಿದೆ. ಇದನ್ನು ಅನ್‌ಲಾಕ್ 5.0ರಲ್ಲಿ ಕೇಂದ್ರ ಸರ್ಕಾರ ಘೋಷಿಸಿತ್ತು. ಸಿನಿಮಾ ಪ್ರದರ್ಶನದ ವೇಳೆ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಯಾವ ರೀತಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಅನ್‌ಲಾಕ್ 5.0 ಬಿಡುಗಡೆ: ಚಿತ್ರಮಂದಿರ ತೆರೆಯಲು ಅನುಮತಿ

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಮಂಗಳವಾರ ಚಿತ್ರಮಂದಿರ, ಮಲ್ಟಿಪ್ಲೆಕ್ಸ್‌ಗಳಲ್ಲಿ ತೆಗೆದುಕೊಳ್ಳಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಶಾಲೆಗಳ ಪುನರಾರಂಭ: ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಾರ್ಗಸೂಚಿ ಪ್ರಕಟ

ಏಳು ತಿಂಗಳಿನಿಂದ ಚಿತ್ರಮಂದಿರಗಳು ಮುಚ್ಚಿದ್ದವು. ಈಗ ಅವುಗಳನ್ನು ಅಕ್ಟೋಬರ್‌ 15ರಿಂದ ತೆರೆಯಲಾಗುತ್ತಿದೆ. ಜನರ ಸುರಕ್ಷತೆಯ ದೃಷ್ಟಿಯಿಂದ ನಾವು ಎಸ್‌ಒಪಿಯನ್ನು ಸಿದ್ಧಪಡಿಸಿದ್ದೇವೆ ಎಂದು ಪ್ರಕಾಶ್ ಜಾವಡೇಕರ್ ತಿಳಿಸಿದರು. ಮುಂದೆ ಓದಿ.

ಶೇ 50 ಆಸನ ಭರ್ತಿ

ಶೇ 50 ಆಸನ ಭರ್ತಿ

* ಸಿನಿಮಾ ಹಾಲ್‌ನ ಆಸನ ಸಾಮರ್ಥ್ಯದ ಶೇ 50ಕ್ಕಿಂತ ಹೆಚ್ಚು ಆಸನಗಳನ್ನು ಭರ್ತಿ ಮಾಡುವಂತಿಲ್ಲ.

* ಆಸನಗಳ ನಡುವೆ ಸೂಕ್ತ ಪ್ರಮಾಣದ ದೈಹಿಕ ಅಂತರ ಕಾಪಾಡಿಕೊಳ್ಳಬೇಕು.

* ಅಂತರಕ್ಕಾಗಿ ಮೀಸಲಿಡುವ ಸೀಟುಗಳ ಮೇಲೆ ಅಲ್ಲಿ ಕೂರಬಾರದು ಎಂಬ ಸಂದೇಶವನ್ನು ನೀಡಬೇಕು.

* ಚಿತ್ರಮಂದಿರಗಳಲ್ಲಿ ಹ್ಯಾಂಡ್ ವಾಷ್ ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಒದಗಿಸಬೇಕು.

ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ

* ಚಿತ್ರಮಂದಿರಕ್ಕೆ ಬರುವ ಪ್ರತಿಯೊಬ್ಬರೂ ಆರೋಗ್ಯ ಸೇತು ಆಪ್‌ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಲು ಮತ್ತು ಬಳಸಿಕೊಳ್ಳಲು ಸಲಹೆ ನೀಡಬೇಕು.

* ಥರ್ಮಲ್ ಸ್ಕ್ರೀನಿಂಗ್‌ಅನ್ನು ಜಾರಿಗೆ ತರಬೇಕು. ಯಾವುದೇ ಲಕ್ಷಣಗಳಿಲ್ಲದ ವ್ಯಕ್ತಿಗಳಿಗೆ ಮಾತ್ರವೇ ಪ್ರವೇಶ ನೀಡಬೇಕು.

* ಆರೋಗ್ಯದ ಸ್ವಯಂ ನಿಗಾ ಮತ್ತು ಯಾವುದೇ ಅಸ್ವಸ್ಥೆಯ ಬಗ್ಗೆ ಮಾಹಿತಿ ನೀಡುವುದು.

ಅನ್‌ಲಾಕ್ 5: ಶಾಲೆಗಳ ಪುನರಾರಂಭ ಯಾವಾಗ? ಹೇಗೆ?

ಡಿಜಿಟಲ್ ಪಾವತಿಗೆ ಉತ್ತೇಜನ

ಡಿಜಿಟಲ್ ಪಾವತಿಗೆ ಉತ್ತೇಜನ

* ವಿಭಿನ್ನ ಪ್ರದರ್ಶನಗಳಿಗೆ ಪ್ರದರ್ಶನ ಸಮಯಗಳನ್ನು ಸೂಕ್ತವಾಗಿ ವಿಂಗಡಿಸಬೇಕು.

* ಟಿಕೆಟ್ ಹಣಕ್ಕೆ ಡಿಜಿಟಲ್ ಪಾವತಿಗೆ ಹೆಚ್ಚು ಉತ್ತೇಜನ ನೀಡಬೇಕು.

* ಬಾಕ್ಸ್ ಆಫೀಸ್ ಹಾಗೂ ಇತರೆ ಸ್ಥಳಗಳಲ್ಲಿ ನಿರಂತರ ಸ್ವಚ್ಛತೆ ಹಾಗೂ ಸೋಂಕು ನಿವಾರಕಗಳನ್ನು ನಿರಂತರವಾಗಿ ಸಿಂಪಡಣೆಯನ್ನು ಕೈಗೊಳ್ಳಬೇಕು.

* ಬಾಕ್ಸ್‌ಆಫೀಸ್‌ನಲ್ಲಿ ಸಾಕಷ್ಟು ಸಂಖ್ಯೆಯ ಕೌಂಟರ್‌ಗಳನ್ನು ತೆರೆಯಬೇಕು.

* ಮಧ್ಯಂತರದ ಅವಧಿಯಲ್ಲಿ ಪ್ರೇಕ್ಷಕರು ಹೆಚ್ಚು ಓಡಾಡುವುದನ್ನು ತಡೆಯುವಂತೆ ಉತ್ತೇಜಿಸಬೇಕು.

ಪ್ಯಾಕೇಟ್ ಆಹಾರಕ್ಕೆ ಮಾತ್ರ ಅವಕಾಶ

ಪ್ಯಾಕೇಟ್ ಆಹಾರಕ್ಕೆ ಮಾತ್ರ ಅವಕಾಶ

* ಬಾಕ್ಸ್‌ ಆಫೀಸ್‌ನಲ್ಲಿ ಟಿಕೆಟ್ ಪಡೆಯುವಾಗ ಸರದಿಯಲ್ಲಿ ಸಾಮಾಜಿಕ ಅಂತರ ಕಾಪಾಡಲು ನೆಲದ ಮೇಲೆ ಮಾರ್ಕರ್‌ಗಳನ್ನು ಬಳಸಬೇಕು.

* ಬಾಕ್ಸಾಫೀಸ್‌ನಲ್ಲಿ ಟಿಕೆಟ್ ಖರೀದಿಗೆ ಇಡೀ ದಿನ ಅವಕಾಶ ನೀಡಬೇಕು. ಗುಂಪು ಸೇರುವಿಕೆಯನ್ನು ತಡೆಯಲು ಮುಂಗಡ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಬೇಕು.

ಶಿಷ್ಟಾಚಾರ ಪಾಲನೆ

ಶಿಷ್ಟಾಚಾರ ಪಾಲನೆ

* ಚಿತ್ರಮಂದಿರದ ಎಲ್ಲಿಯೂ ಉಗುಳುವಿಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು.

* ಉಸಿರಾಟಕ್ಕೆ ಸಂಬಂಧಿಸಿದಂತೆ ಕಠಿಣ ಶಿಷ್ಟಾಚಾರಗಳನ್ನು ಪಾಲಿಸಬೇಕು.

* ಪ್ಯಾಕೇಜ್ ಆಹಾರ ಹಾಗೂ ಪಾನೀಯಗಳಿಗೆ ಮಾತ್ರವೇ ಅವಕಾಶ. ಸಿನಿಮಾ ಹಾಲ್ ಒಳಗೆ ಪೂರೈಕೆ ಇರುವಂತಿಲ್ಲ.

* ಆಹಾರ ಮತ್ತು ಪಾನೀಯಗಳಿಗೆ ಹೆಚ್ಚುವರಿ ಮಾರಾಟ ಮಳಿಗೆಗಳನ್ನು ತೆರೆಯಬೇಕು.

ಕಠಿಣ ಕ್ರಮ ತೆಗೆದುಕೊಳ್ಳಬೇಕು

ಕಠಿಣ ಕ್ರಮ ತೆಗೆದುಕೊಳ್ಳಬೇಕು

* ಸ್ಯಾನಿಟೈಸ್ ಮಾಡುವ ಸಿಬ್ಬಂದಿಯ ಸುರಕ್ಷತೆಗೆ ಅಗತ್ಯವಾದ ಗ್ಲೌಸ್, ಬೂಟ್ಸ್, ಮಾಸ್ಕ್, ಪಿಪಿಇ ಮುಂತಾದವುಗಳನ್ನು ಸೂಕ್ತ ಪ್ರಮಾಣದಲ್ಲಿ ಒದಗಿಸಬೇಕು.

* ಸಂಪರ್ಕಿತರನ್ನು ಪತ್ತೆಹಚ್ಚಲು ಅವರ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಳ್ಳಬಹುದು.

* ಕೋವಿಡ್ ಸಂಬಂಧಿಸಿದ ನಿಯಮಗಳ ಉಲ್ಲಂಘನೆ ಅಥವಾ ಅನುಚಿತ ವರ್ತನೆಗಳನ್ನು ಕಠಿಣವಾಗಿ ನಿಭಾಯಿಸಬೇಕು.

ಎಸಿ ಬಳಕೆ ಪ್ರಮಾಣ

ಎಸಿ ಬಳಕೆ ಪ್ರಮಾಣ

* ಅಗತ್ಯ ಪ್ರಮಾಣದಲ್ಲಿ ಟಿಕೆಟ್ ಕೌಂಟರ್‌ಗಳನ್ನು ತೆರೆಯಬೇಕು.

* ಹವಾನಿಯಂತ್ರಿತ ಹಾಲ್‌ಗಳಲ್ಲಿ 24-30 ಡಿಗ್ರಿ ಸೆಲ್ಸಿಯಸ್‌ ಪ್ರಮಾಣವನ್ನು ಕಾಯ್ದುಕೊಳ್ಳಬೇಕು.

* ಪ್ರದರ್ಶನದ ಬಳಿಕ ಮತ್ತು ಮಧ್ಯಂತರದ ಅವಧಿಯಲ್ಲಿ ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಕಾಪಾಡಿಕೊಳ್ಳುವಿಕೆ ಮತ್ತು ಕೈಗಳನ್ನು ಸ್ವಚ್ಛಗೊಳಿಸುವಿಕೆ ಬಗ್ಗೆ ಸಾರ್ವಜನಿಕ ಪ್ರಕಟಣೆಯನ್ನು ಮಾಡಬೇಕು.

   RR Nagar ಉಪಚುನಾವಣೆಯಲ್ಲಿ ಯಾವ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ Muniratna | Oneindia Kannada

   English summary
   Govt Issues guidelines to Reopen Cinema Halls/Theatres in India from October 15.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X