ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಥಮ ಧ್ವಜಾರೋಹಣ ಸಂಭ್ರಮಕ್ಕಾಗಿ ನೇತಾಜಿ 75 ಹೊಸ ನಾಣ್ಯ

|
Google Oneindia Kannada News

ನವದೆಹಲಿ, ನವೆಂಬರ್ 14: ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಪೋರ್ಟ್ ಬ್ಲೇರ್ ನಲ್ಲಿ ಪ್ರಥಮ ಬಾರಿಗೆ ತ್ರಿವರ್ಣಧ್ವಜಾರೋಹಣ ಮಾಡಿದ ಸವಿನೆನಪಿಗೆ 75 ವರ್ಷ ಸಂದಿದೆ.

ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಧ್ವಜಕ್ಕೆ ವಂದಿಸುತ್ತಿರುವ ದೃಶ್ಯ ಇರುವ 75 ರು ಮೌಲ್ಯದ ನಾಣ್ಯವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಲು ಮುಂದಾಗಿದೆ. ಹಣಕಾಸು ಸಚಿವಾಲಯ ಇದಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಜಾರಿ ಮಾಡಿದೆ. ದೇವನಾಗರಿ ಹಾಗೂ ಇಂಗ್ಲಿಷ್ ಭಾಷೆಗಳೆರಡರಲ್ಲೂ 'ಪ್ರಥಮ ಧ್ವಜಾರೋಹಣ' ಎಂದು ನಮೂದಿಸಲಾಗುವುದು.

35 ಗ್ರಾಂನ ಈ ನಾಣ್ಯದಲ್ಲಿ ಶೇಕಡಾ 50 ರಷ್ಟು ಬೆಳ್ಳಿ, ಶೇಕಡಾ 40 ರಷ್ಟು ತಾಮ್ರ ಹಾಗೂ ಶೇಕಡಾ 5-5 ರಷ್ಟು ನಿಕಲ್ ಮತ್ತು ಝಿಂಕ್ ಇರಲಿದೆ. ಜೈಲಿನಲ್ಲಿ ಭಾರತದ ಧ್ವಜ ಹಾರಿಸಿ ಸೆಲ್ಯೂಟ್ ಮಾಡ್ತಿರುವ ಸುಭಾಷ್ ಚಂದ್ರ ಬೋಸ್ ಚಿತ್ರವಿರಲಿದೆ.

Govt to issue Rs 75 coin to mark 75th anniversary of Tricolour hoisting by Netaji Subhash Chandra Bose

ಡಿಸೆಂಬರ್ 30, 1943ರಂದು ಭಾರತೀಯ ರಾಷ್ಟ್ರೀಯ ಸೇನೆ(ಐಎನ್ಎ)ಯ ಬೋಸ್ ಮೊದಲ ಬಾರಿಗೆ ಪೋರ್ಟ್‌ ಬ್ಲೇರ್ ನ ಜೈಲಿನಲ್ಲಿ ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಭಾರತದ ಸ್ವಾತಂತ್ಯದ ಘೋಷಣೆ ಮಾಡಿದ್ದರು.

ಅಕ್ಟೋಬರ್ 21ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆ ಮೇಲೆ ರಾಷ್ಟ್ರೀಯ ಧ್ವಜ ಹಾರಿಸಿ, ಅಜಾದ್ ಹಿಂದ್ ಸರ್ಕಾರದ 75 ವಾರ್ಷಿಕೋತ್ಸವವನ್ನು ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
On December 30, 1943, Bose, who raised the Indian National Army (INA) to fight against the British, had hoisted the Tricolour for the first time at Cellular Jail, Port Blair. Modi Govt to issue Rs 75 coin to mark 75th anniversary
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X