ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊರೊನಾ ಲಸಿಕೆ ಉತ್ಪಾದನೆಗೆ ರಷ್ಯಾ ಆಸಕ್ತಿ?

|
Google Oneindia Kannada News

ನವದೆಹಲಿ, ಆಗಸ್ಟ್ 14: ಭಾರತದಲ್ಲಿ ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸಲು ರಷ್ಯಾ ಉತ್ಸುಕವಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.

ಆದರೆ ರಷ್ಯಾ ಜೊತೆ ನಾವು ಯಾವುದೇ ಮಾತುಕತೆ ನಡೆಸಿಲ್ಲ ಎಂದು ಆರೋಗ್ಯ ಸಚಿವಾಲಯ ಸ್ಪಷ್ಟನೆಯನ್ನೂ ನೀಡಿದೆ.

ರಷ್ಯಾದ ಸ್ಪುಟ್ನಿಕ್ 5 ವಿಶ್ವದ ಮೊದಲ ಲಸಿಕೆಯಲ್ಲ: ಕಿರಣ್ ಮಜುಂದಾರ್ ಶಾರಷ್ಯಾದ ಸ್ಪುಟ್ನಿಕ್ 5 ವಿಶ್ವದ ಮೊದಲ ಲಸಿಕೆಯಲ್ಲ: ಕಿರಣ್ ಮಜುಂದಾರ್ ಶಾ

ಕೊರೊನಾ ವೈರಸ್‌ಗೆ ತರಾತುರಿಯಲ್ಲಿ ಲಸಿಕೆ ಬಿಡುಗಡೆ ಮಾಡಿರುವ ರಷ್ಯಾ ಈಗ ಆ ಲಸಿಕೆಯನ್ನು ಜಾಗತಿಕ ಮಟ್ಟದಲ್ಲಿ ಜನಪ್ರಿಯಗೊಳಿಸಲು ಭಾರಿ ಕಸರತ್ತು ಆರಂಭಿಸಿದೆ. ಭಾರತ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ನಮ್ಮ ಸ್ಪುಟ್ನಿಕ್ 5 ಲಸಿಕೆಯ ಬಗ್ಗೆ ಆಸಕ್ತಿ ವ್ಯಕ್ತಪಡಿಸಿವೆ ಎಂದು ರಷ್ಯಾ ಹೇಳಿದೆ.

ಆರೋಗ್ಯ ಸಚಿವಾಲಯ ಹೇಳುವುದೇನು?

ಆರೋಗ್ಯ ಸಚಿವಾಲಯ ಹೇಳುವುದೇನು?

ಭಾರತದ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯ ಸಂಶೋಧನಾ ಮಂಡಳಿ ಅಧಿಕಾರಿಗಳು ನಾವು ಈ ವಿಷಯದಲ್ಲಿ ರಷ್ಯಾ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಪುಟ್ನಿಕ್ 5 ಲಸಿಕೆಯನ್ನು ರಷ್ಯಾ ಬಿಡುಗಡೆ ಮಾಡಿದೆ

ಸ್ಪುಟ್ನಿಕ್ 5 ಲಸಿಕೆಯನ್ನು ರಷ್ಯಾ ಬಿಡುಗಡೆ ಮಾಡಿದೆ

ಕೊರೊನಾ ವೈರಸ್‌ಗೆ ಜಗತ್ತಿನಲ್ಲೇ ಮೊದಲನೆಯದು ಎನ್ನಲಾದ ಸ್ಪುಟ್ನಿಕ್ 5 ಎಂಬ ಇಂಜೆಕ್ಷನ್ ಅನ್ನು ರಷ್ಯಾ ಮಂಗಳವಾರ ಘೋಷಣೆ ಮಾಡಿದೆ. ಆದರೆ ಮೂರನೇ ಹಂತದ ಪ್ರಯೋಗವನ್ನೇ ಸರಿಯಾಗಿ ನಡೆಸದೆ ಈ ಲಸಿಕೆ ಬಿಡುಗಡೆ ಮಾಡಲಾಗಿದೆ ಎಂದು ಜಗತ್ತಿನೆಲ್ಲೆಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ತನ್ನ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸಲು ರಷ್ಯಾ ಮುಂದಾಗಿದೆ.

ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?ಲಕ್ಷಣ ಕಾಣಿಸಿಕೊಂಡ ಬಳಿಕ ದೇಹದೊಳಗೆ ಕೊರೊನಾ ಸೋಂಕು ಎಷ್ಟು ದಿನ ಇರುತ್ತೆ?

ಎಲ್ಲೆಲ್ಲಿ ಮೂರನೇ ಹಂತದ ಪ್ರಯೋಗ

ಎಲ್ಲೆಲ್ಲಿ ಮೂರನೇ ಹಂತದ ಪ್ರಯೋಗ

ಸ್ಪುಟ್ನಿಕ್ 5 ಲಸಿಕೆಯ ಕುರಿತಾದ ವೆಬ್‌ಸೈಟ್‌ನಲ್ಲಿ ಸೌದಿ ಅರೇಬಿಯಾ, ಯುಎಇ, ಬ್ರೆಜಿಲ್, ಭಾರತ ಹಾಗೂ ಫಿಲಿಫೀನ್ಸ್ ಸೇರಿದಂತೆ ವಿವಿಧ ದೇಶಗಳಲ್ಲಿ ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಸಲು ರಷ್ಯಾ ಯೋಜನೆ ರೂಪಿಸಿದೆ ಎಂದು ಬರೆಯಲಾಗಿದೆ. ಇನ್ನು ಈ ಲಸಿಕೆಯನ್ನು ಅಭಿವೃದ್ಧಿಪಡಿಸಲು ಬಂಡವಾಳ ಹೂಡಿರುವ ರಷ್ಯಾದ ಸರ್ಕಾರಿ ಸ್ವಾಮ್ಯದ ಆರ್‌ಡಿಐಎಫ್ ಸಂಸ್ಥೆ ಕೂಡ ತಾನು ಭಾರತ, ದಕ್ಷಿಣ ಕೊರಿಯಾ, ಬ್ರೆಜಿಲ್ , ಸೌದಿ ಅರೇಬಿಯಾ, ಟರ್ಕಿ ಮತ್ತು ಕ್ಯೂಬಾ ದೇಶಗಳಲ್ಲಿ ಲಸಿಕೆ ಉತ್ಪಾದನೆಗೆ ಯೋಜನೆ ರೂಪಿಸಿರುವುದಾಗಿ ಹೇಳಿಕೊಂಡಿದೆ. ಆದರೆ ಭಾರತದ ಆರೋಗ್ಯ ಸಚಿವಾಲಯ ಮತ್ತು ಐಸಿಎಂಆರ್‌ನ ಉನ್ನತ ಅಧಿಕಾರಿಗಳು ಇಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಹೇಳಿದ್ದಾರೆ. ಹೈದರಾಬಾದ್ ನಲ್ಲಿರುವ ಭಾರತ್ ಬಯೋಟೆಕ್ ಕಂಪನಿಯಲ್ಲಿ ಸ್ಪುಟ್ನಿಕ್ 5 ಇಂಜೆಕ್ಷನ್ ಉತ್ಪಾದಿಸಲು ರಷ್ಯಾ ಆಸಕ್ತಿ ತೋರಿದೆ ಎಂದು ಹೇಳಲಾಗುತ್ತಿದೆ.

ರೆಮ್‌ಡೆಸಿವಿರ್ ಔಷಧಕ್ಕೆ 2800 ರೂ

ರೆಮ್‌ಡೆಸಿವಿರ್ ಔಷಧಕ್ಕೆ 2800 ರೂ

ಕೊರೊನಾ ಸೋಂಕಿನ ತೀವ್ರ ಲಕ್ಷಣಗಳಿರುವವರ ಚಿಕಿತ್ಸೆಗಾಗಿ ರೆಮ್‌ಡೆಸಿವಿರ್ ಔಷಧದ ಜೆನೆರಿಕ್ ಮಾದರಿಯನ್ನು ಔಷಧ ತಯಾರಿಕಾ ಕಂಪನಿ ಝೈಡಸ್ ಕ್ಯಾಡಿಲ್ಲಾ ಬಿಡುಗಡೆ ಮಾಡಿದೆ. ರೆಮ್‌ಡ್ಯಾಕ್ ಎಂಬ ಬ್ರಾಂಡ್ ನ ಈ ಇಂಜೆಕ್ಷನ್ ನ 1 ವಯಲ್‌ಗೆ 2800 ರೂ ದರ ನಿಗದಿಪಡಿಸಲಾಗಿದೆ. ರೆಮ್‌ಡೆಸಿವಿರ್ ಔಷಧಕ್ಕೆ ದೇಶದಲ್ಲಿ ನಿಗದಿಯಾಗಿರುವ ಅತ್ಯಂತ ಕಡಿಮೆ ದರ ಇದಾಗಿದೆ.

ವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟುವಿಶ್ವದ ಮೊದಲ ಕೊರೊನಾ ಲಸಿಕೆ ನಾಳೆ ಬಿಡುಗಡೆ: ನೀವು ತಿಳಿಯಬೇಕಾಗಿದ್ದಿಷ್ಟು

English summary
The Government of India hasn’t received any requests or applications for the conduct of phase III clinical trials of the Russian Covid-19 vaccine Sputnik V, and the vaccine also didn’t figure in the deliberations of the National Expert Group on Vaccine Administration for coronavirus that took place Wednesday, ThePrint has learnt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X