ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ 3ನೇ ಅಲೆ ಎದುರಿಸಲು 30 ದಿನದ ಔಷಧ ಸಂಗ್ರಹ

|
Google Oneindia Kannada News

ನವದೆಹಲಿ, ಜುಲೈ 20: ಕೊರೊನಾ ಮೂರನೇ ಅಲೆ ವೇಳೆ ಅಗತ್ಯ ಔಷಧಗಳ ಕೊರತೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಕೊರೊನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ರೆಮ್‌ಡೆಸಿವಿರ್, ಫೆವಿಫಿರಾವಿರ್ ಮಾತ್ರೆಗಳು ಹಾಗೂ ಪ್ಯಾರಸಿಟಮಲ್, ಮೊಲ್‌ನಂತಹ ಸಾಮಾನ್ಯ ಜ್ವರದ ಮಾತ್ರೆಗಳು, ಪ್ರತಿಕಾಯಗಳು, ವಿಟಮಿನ್‌ಗಳಂತಹ ಔಷಧಗಳನ್ನು 30 ದಿನಗಳಿಗೆ ಆಗುವಷ್ಟು ಸಂಗ್ರಹ ಇಟ್ಟುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ. ಮೂರನೇ ಅಲೆಗೂ ಮೊದಲು 50 ಲಕ್ಷ ರೆಮ್‌ಡೆಸಿವಿರ್ ಬಾಟಲ್‌ಗಳನ್ನು ಖರೀದಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಭಾರತದಲ್ಲಿ ಲಸಿಕೆ ವಿತರಣೆ: ಮಧ್ಯಮವಯಸ್ಕರಿಗೆ ಮೊದಲ ಆದ್ಯತೆ ಏಕೆ?ಭಾರತದಲ್ಲಿ ಲಸಿಕೆ ವಿತರಣೆ: ಮಧ್ಯಮವಯಸ್ಕರಿಗೆ ಮೊದಲ ಆದ್ಯತೆ ಏಕೆ?

ಅಷ್ಟೇ ಅಲ್ಲದೆ ಈ ಬಾರಿ ಮುಂಗಡವಾಗಿ ಹಣ ಪಾವತಿ ಮಾಡಲಿದೆ. ಜತೆಗೆ ಅಗತ್ಯ ಔಷಧ ಉತ್ಪಾದಿಸುವಂತೆ ರಾಜ್ಯಗಳಿಗೆ ಕೇಂದ್ರ ಈಗಾಗಲೇ ಸೂಚನೆ ನೀಡಿದೆ.

 Govt Creating 30-day Stock Of Key Covid Drugs Ahead Of Anticipated 3rd Wave

ಹೀಗಾಗಿ ರಾಜ್ಯಗಳು ಔಷಧಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಕಾರ್ಯದಲ್ಲಿ ತೊಡಗಿವೆ ಎಂದು ಔಷಧ ಕಂಪನಿಯೊಂದರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಸಿಕೆ ಪಡೆದವರೆಲ್ಲಾ ಬಾಹುಬಲಿ: ಕೋವಿಡ್ ಲಸಿಕೆ ಪಡೆದವರು ಬಾಹುಬಲಿಯಾಗುತ್ತಾರೆ. ಎಲ್ಲರೂ ಲಸಿಕೆ ಪಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ಬಾಹು( ಭುಜ/ತೋಳು)ವಿಗೆ ಲಸಿಕೆ ನೀಡಲಾಗುತ್ತಿದೆ. ಹೀಗೆ ಲಸಿಕೆ ಪಡೆದವರು ಬಾಹುಬಲಿಯಾಗುತ್ತಾರೆ. 40 ಕೋಟಿ ಮಂದಿ ಲಸಿಕೆ ಪಡೆದು ಬಾಹುಬಲಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

English summary
Ahead of the anticipated third wave, India is trying to build a buffer stock or inventory of essential Covid-19 medicines like remdesivir and favipiravir, besides common drugs and supplements like paracetamol, antibiotics, and vitamins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X