ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಬಗ್ಗೆ ಸಹಾಯಕ್ಕಾಗಿ ಇ-ಮೇಲ್ ಐಡಿ

|
Google Oneindia Kannada News

ನವದೆಹಲಿ, ಏಪ್ರಿಲ್ 01 : ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರ ಕೊರೊನಾ ಕುರಿತು ತಾಂತ್ರಿಕ ಸಹಕಾರ ನೀಡಲು ಇ-ಮೇಲ್ ಐಡಿಯನ್ನು ನೀಡಿದೆ. ಜನರು ಇ-ಮೇಲ್ ಕಳಿಸುವ ಮೂಲಕ ಮಾರಣಾಂತಿಕ ವೈರಸ್ ಬಗ್ಗೆ ತಮಗೆ ಇರುವ ಗೊಂದಲವನ್ನು ಬಗೆಹರಿಸಿಕೊಳ್ಳಬಹುದು.

Recommended Video

ಲಾಕ್ ಡೌನ್ ಆದೇಶದವರೆಗೆ ರಾಜ್ಯದಲ್ಲಿ ಉಚಿತ ಹಾಲು ಪೂರೈಕೆಗೆ BSY ಸೂಚನೆ | Free Milk | KMF | Bangalore

ಜಂಟಿ ಕಾರ್ಯದರ್ಶಿ ದರ್ಜೆಯ ಅಧಿಕಾರಿ ಮತ್ತು ಏಮ್ಸ್‌ನ ತಜ್ಞ ವೈದ್ಯರು ಜನರಿಗೆ ಅಗತ್ಯವಾದ ಸಲಹೆಗಳನ್ನು ನೀಡಲಿದ್ದಾರೆ. ಜನರು [email protected] ಗೆ ಇ-ಮೇಲ್ ಕಳಿಸಬಹುದು ಎಂದು ಆರೋಗ್ಯ ಸಚಿವಾಲಯ ಹೇಳಿದೆ.

1,00,000ದ ಗಡಿ ದಾಟಿತು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ1,00,000ದ ಗಡಿ ದಾಟಿತು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ

ಸುಪ್ರೀಂಕೋರ್ಟ್ ಮಾಧ್ಯಮಗಳಿಗೂ ಸೂಚನೆಯನ್ನು ನೀಡಿದ್ದು, ಕೊರೊನಾ ಸೋಂಕಿನ ವಿಚಾರದಲ್ಲಿ ಖಚಿತವಾದ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಬೇಕು ಎಂದು ಹೇಳಿದೆ. ಆರೋಗ್ಯ ಸಚಿವಾಲಯ ಪ್ರತಿದಿನವೂ ಬುಲೆಟಿನ್ ನೀಡಬೇಕು ಎಂದು ಹೇಳಿದೆ.

ತಮಿಳುನಾಡು ; ಒಂದೇ ದಿನ 110 ಹೊಸ ಕೊರೊನಾ ಪ್ರಕರಣ! ತಮಿಳುನಾಡು ; ಒಂದೇ ದಿನ 110 ಹೊಸ ಕೊರೊನಾ ಪ್ರಕರಣ!

Govt Creates Email Id To Provide Technical Help On COVID-19

ಬುಲೆಟಿನ್ ಎಲ್ಲಾ ಮಾಧ್ಯಮಗಳು, ಸಾಮಾಜಿಕಜಾಲತಾಣದಲ್ಲಿ ಪ್ರಕಟಿಸಬೇಕು. ಅಧಿಕೃತವಾಗಿ ಬಂದ ಹೇಳಿಕೆಯನ್ನು ಮಾತ್ರ ಮಾಧ್ಯಮಗಳು ಪ್ರಸಾರ ಮಾಡಬೇಕು ಎಂದು ಸುಪ್ರೀಂಕೋರ್ಟ್ ಮಾಧ್ಯಮಗಳಿಗೆ ನಿರ್ದೇಶನ ನೀಡಿದೆ.

5ನೇ ಬಾರಿಯೂ ಕನಿಕಾ ಕಪೂರ್‌ಗೆ ಕೊರೊನಾ ಪಾಸಿಟಿವ್ ಫಲಿತಾಂಶ5ನೇ ಬಾರಿಯೂ ಕನಿಕಾ ಕಪೂರ್‌ಗೆ ಕೊರೊನಾ ಪಾಸಿಟಿವ್ ಫಲಿತಾಂಶ

ಲಾಕ್ ಡೌನ್ ಇನ್ನು ಕೆಲವು ದಿನ ಮುಂದುವರೆಯಲಿದೆ ಎಂಬ ಸುಳ್ಳು ಸುದ್ದಿ ವಲಸಿಗ ಕಾರ್ಮಿಕರಲ್ಲಿ ಆತಂಕವನ್ನು ಮೂಡಿಸಿತ್ತು. ಇದರಿಂದಾಗಿ ಅವರು ಸಾವಿರಾರು ಸಂಖ್ಯೆಯಲ್ಲಿ ಗುಳೆ ಹೊರಟಿದ್ದರು. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದರು.

ಮಂಗಳವಾರ ಕೇಂದ್ರ ಸರ್ಕಾರ ಯಾವುದೇ ಎಲೆಕ್ಟ್ರಾನಿಕ್ ಅಥವ ಮುದ್ರಣ ಮಾಧ್ಯಮ ಕೊರೊನಾ ಕುರಿತು ಸರ್ಕಾರ ನೀಡುವ ಮಾಹಿತಿಯನ್ನು ಮಾತ್ರ ಪ್ರಸಾರ ಮಾಡಬೇಕು ಎಂದು ನಿರ್ದೇಶನ ನೀಡುವಂತೆ ಕೋರಿತ್ತು.

English summary
Union government has created an email id. Joint secretary rank officer and specialised doctors of AIIMS will provide technical support to people relating to COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X